ಕರ್ನಾಟಕದಲ್ಲಿ ಜನತೆ ಬಿಜೆಪಿಯನ್ನು ಗೆಲ್ಲಿಸುವ ಮೂಲಕ ಕಾಂಗ್ರೆಸ್ಗೆ ತಕ್ಕ ಉತ್ತರ ನೀಡಲಿದ್ದಾರೆ : ಅಮಿತ್ ಶಾ.

ವಿಜಯ ದರ್ಪಣ ನ್ಯೂಸ್…

ಎಲ್ಲಾ ಸ್ಥಾನಗಳಲ್ಲಿ ಬಿಜೆಪಿಯನ್ನು ಗೆಲ್ಲಿಸುವ ಮೂಲಕ ಕರ್ನಾಟಕದ ಜನತೆ ಕಾಂಗ್ರೆಸ್ಗೆ ತಕ್ಕ ಉತ್ತರ ನೀಡಲಿದ್ದಾರೆ.

ದಾರವಾಡ: ಕರ್ನಾಟಕದ ಧಾರವಾಡ ಲೋಕಸಭಾ ಕ್ಷೇತ್ರದಲ್ಲಿ ನಡೆದ ಬೃಹತ್ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಹಾಗೂ ಬಿಜೆಪಿಯ ವರಿಷ್ಠ ನಾಯಕ ಅಮಿತ್ ಶಾ, ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿ, 2024ರ ಐತಿಹಾಸಿಕ ಚುನಾವಣೆ ₹ 12 ಲಕ್ಷ ಕೋಟಿ ಹಗರಣ ಮಾಡಿರುವ ಭ್ರಷ್ಟ ಕಾಂಗ್ರೆಸ್ ಪಕ್ಷ ಮತ್ತು ನಯಾ ಪೈಸೆಯಷ್ಟು ಹಗರಣ ಮಾಡದ ಪ್ರಮಾಣಿಕ ಪ್ರಧಾನಿ ನರೇಂದ್ರ ಮೋದಿ ಅವರ ನಡುವಿನ ನೇರ ಸ್ಪರ್ಧೆಯಾಗಿದೆ. ಎಲ್ಲಾ ಸ್ಥಾನಗಳಲ್ಲಿ ಬಿಜೆಪಿಯನ್ನು ಗೆಲ್ಲಿಸುವ ಮೂಲಕ ಕರ್ನಾಟಕದ ಜನತೆ ಕಾಂಗ್ರೆಸ್ಗೆ ತಕ್ಕ ಉತ್ತರ ನೀಡಲಿದ್ದಾರೆ.

ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರ ಕಾಶ್ಮೀರದ ಬಗೆಗಿನ ಅರ್ಥಹೀನ ಟೀಕೆಗಳ ಬಗ್ಗೆ ತೀವ್ರ ವಾಗ್ದಾಳಿ ನಡೆಸಿದ ಅವರು, ಕರ್ನಾಟಕ ಮತ್ತು ರಾಜಸ್ಥಾನದ ಜನರಿಗೂ ಕಾಶ್ಮೀರಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಖರ್ಗೆ ಹೇಳಿದ್ದಾರೆ, ಇದು ಭಾರತದ ರಾಜ್ಯಗಳ ಒಕ್ಕೂಟದ ಬಗ್ಗೆ ಅವರಿಗಿರುವ ಸಂಕುಚಿತ ತಿಳುವಳಿಕೆಗೆ ಸಾಕ್ಷಿಯಾಗಿದೆ. ಈ ಹೇಳಿಕೆಗಳು ಬಿಜೆಪಿಯ ಭಾರತೀಯ ಒಕ್ಕೂಟದ ಕಲ್ಪನೆಗೆ ವಿರೋಧವಾಗಿರುವ, ಕಾಂಗ್ರೆಸ್ನ ಆಳವಾಗಿ ಬೇರೂರಿರುವ ಪ್ರಾದೇಶಿಕ ಮನಸ್ಥಿತಿಯನ್ನು ಪ್ರತಿಬಿಂಬಿಸುತ್ತವೆ. ತುಷ್ಟೀಕರಣದ ರಾಜಕೀಯದಿಂದ ಪ್ರೇರೇಪಿತವಾಗಿರುವ ಕಾಂಗ್ರೆಸ್, 370 ನೇ ವಿಧಿಯನ್ನು ಕೇವಲ ಮತ ಬ್ಯಾಂಕ್ ಆಗಿ ಬಳಸಿಕೊಂಡಿತು, ಅದು ಐತಿಹಾಸಿಕ ತಪ್ಪನ್ನು ಸರಿಪಡಿಸಲು ಬೇರೆ ಏನೂ ಮಾಡಲಿಲ್ಲ. ಧಾರವಾಡದ ಪ್ರತಿ ಮಗುವೂ ಕಾಶ್ಮೀರಕ್ಕಾಗಿ ಪ್ರಾಣ ತ್ಯಾಗ ಮಾಡಲು ಸಿದ್ಧ ಎಂಬುದನ್ನು ಖರ್ಗೆ ಅರಿಯಬೇಕು ಎಂದು ಶಾ ಹೇಳಿದರು. ಜನತೆಯ ರಾಷ್ಟ್ರೀಯತಾವಾದಿ ಬಯಕೆಯನ್ನು ಗೌರವಿಸಿ ಮೋದಿ ಸರ್ಕಾರವು 370 ನೇ ವಿಧಿಯನ್ನು ರದ್ದುಗೊಳಿಸುವ ಮೂಲಕ ಐತಿಹಾಸಿಕ ತಪ್ಪನ್ನು ಸರಿಪಡಿಸಿ ಕಾಶ್ಮೀರದಲ್ಲಿ ಶಾಂತಿ ಮತ್ತು ಸಮೃದ್ಧಿಯ ಹೊಸ ಯುಗವನ್ನು ಪ್ರಾರಂಭಿಸಿತು.

ಭಯೋತ್ಪಾದನೆಯ ಬಗ್ಗೆ ಕಾಂಗ್ರೆಸ್ ಅತ್ಯಂತ ಬೇಜವಾಬ್ದಾರಿ ಧೋರಣೆ ಹೊಂದಿತ್ತು, ಇದು ಭಾರತವು ಪಾಕಿಸ್ತಾನದಲ್ಲಿನ ಭಯೋತ್ಪಾದಕರಿಗೆ ನೇರ ಗುರಿಯಾಗಲು ಕಾರಣವಾಯಿತು. ವೋಟ್ ಬ್ಯಾಂಕ್ ಓಲೈಕೆ ರಾಜಕಾರಣದಿಂದಾಗಿ ತಪ್ಪಿತಸ್ಥರ ವಿರುದ್ಧ ಕ್ರಮಕೈಗೊಳ್ಳಲಿಲ್ಲ. ಏತನ್ಮಧ್ಯೆ, ನರೇಂದ್ರ ಮೋದಿ ಅವರು ಪಾಕ್ ನೆಲದಲ್ಲಿ ಯುದ್ಧತಂತ್ರಯೋಜಿತ ವಾಯು ಮತ್ತು ಸರ್ಜಿಕಲ್ ಸ್ಟ್ರೈಕ್ಗಳನ್ನು ನಡೆಸುವ ಮೂಲಕ ಭಯೋತ್ಪಾದಕರಿಗೆ ತಕ್ಕ ಉತ್ತರ ನೀಡಿದರು. ಇತ್ತೀಚಿನ ಬೆಂಗಳೂರು ಸ್ಫೋಟಗಳಲ್ಲಿ ಕೂಡ ಕಾಂಗ್ರೆಸ್ನ ಬೇಜವಾಬ್ದಾರಿ ಧೋರಣೆಯು ಸ್ಪಷ್ಟವಾಗಿ ಕಂಡುಬಂದಿತು, ಪಕ್ಷವು ಎಸ್ಡಿಪಿಐ ಸಹಾಯದಿಂದ ಚುನಾವಣೆಯಲ್ಲಿ ಗೆದ್ದಿದ್ದರಿಂದ ಬಾಂಬ್ ಸ್ಫೋಟಗಳನ್ನು ಕೇವಲ ಗ್ಯಾಸ್ ಸಿಲಿಂಡರ್ ಸ್ಫೋಟ ಎಂದು ಅನುಕೂಲಕರವಾಗಿ ಲೇಬಲ್ ಮಾಡಿತು. ಎನ್ಐಎ ತನ್ನ ವಿಸ್ತೃತ ವರದಿಯಲ್ಲಿ ಭಾರತ ವಿರೋಧಿ ಪಡೆಗಳಿಂದ ಸ್ಫೋಟ ನಡೆಸಲಾಗಿದೆ ಎಂದು ಸ್ಪಷ್ಟಪಡಿಸಿದೆ. ಈಗ, ಕರ್ನಾಟಕದ ಜನರು ಭಾರತ ವಿರೋಧಿ ಶಕ್ತಿಗಳೊಂದಿಗೆ ಕೈಜೋಡಿಸುವ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಬೇಕೋ ಅಥವಾ ಅಜೇಯ ಭದ್ರತಾ ವ್ವವಸ್ಥೆಯನ್ನು ಸ್ಥಾಪಿಸಲು ಹಗಲಿರುಳು ಶ್ರಮಿಸುತ್ತಿರುವ ನರೇಂದ್ರ ಮೋದಿಯನ್ನು ಬೆಂಬಲಿಸಬೇಕೋ ಎಂದು ನಿರ್ಧರಿಸಬೇಕು.

ಪ್ರತಿಷ್ಠಿತ ಮುಖ್ಯಮಂತ್ರಿ ಹುದ್ದೆಗಾಗಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ನಡುವಿನ ಆಂತರಿಕ ಕಚ್ಚಾಟದ ವಿಷಯದ ಬಗ್ಗೆ ಕೂಡ ಶಾ ಪ್ರಸ್ತಾಪಿಸಿದರು. ಕಾಂಗ್ರೆಸ್ ಪಕ್ಷಕ್ಕೆ ಮಹಿಳೆಯರ ಘನತೆಯ ಬಗ್ಗೆ ಯಾವುದೇ ಗೌರವವಿಲ್ಲ, ಇತ್ತೀಚಿನ ನೇಹಾ ಹಿರೇಮಠ್ ಪ್ರಕರಣದಲ್ಲಿ ಪಕ್ಷವು ಯಾವುದೇ ಕ್ರಮ ಕೈಗೊಂಡಿಲ್ಲ, ಮೇಲಾಗಿ ಅದು ವೈಯಕ್ತಿಕ ಕಾರಣಗಳಿಂದ ಸಂಭವಿಸಿದ ಸಾವು ಎಂದು ಪ್ರಕರಣದ ದಿಕ್ಕನ್ನು ತಪ್ಪಸುತ್ತಿದೆ. ರಾಜ್ಯದಲ್ಲಿ ಮಹಿಳೆಯರ ಸುರಕ್ಷತೆ ಮತ್ತು ಭದ್ರತೆ, ಕೇವಲ ಬಿಜೆಪಿ ಸರ್ಕಾರದಿಂದ ಮಾತ್ರ ಸಾಧ್ಯ.

ಕರ್ನಾಟಕದ ಅಭಿವೃದ್ಧಿಗಾಗಿ ಮೋದಿ ಸರ್ಕಾರ ಕೈಗೊಂಡಿರುವ ಅಪ್ರತಿಮ ಉಪಕ್ರಮಗಳು ಪ್ರಶಂಸನಾರ್ಹವಾಗಿವೆ. ಮೋದಿಯವರ ಅಧಿಕಾರಾವಧಿಯ ಮೊದಲು, ಕರ್ನಾಟಕವು ಕೇವಲ 25 ರಾಷ್ಟ್ರೀಯ ಹೆದ್ದಾರಿಗಳನ್ನು ಹೊಂದಿತ್ತು, ಈಗ ಈ ಸಂಖ್ಯೆ 47 ಕ್ಕೆ ತಲುಪಿ, ಸುಮಾರು ದ್ವಿಪಟ್ಟಾಗಿದೆ. 2004 ರಿಂದ 2014 ರವರೆಗೆ ಕಾಂಗ್ರೆಸ್ ಪಕ್ಷವು ಕರ್ನಾಟಕಕ್ಕೆ ಕೇವಲ ₹ 1.42 ಲಕ್ಷ ಕೋಟಿ ಮಂಜೂರು ಮಾಡಿತ್ತು, ಮತ್ತೊಂದೆಡೆ ನರೇಂದ್ರ ಮೋದಿ ಸರ್ಕಾರವು ಕಳೆದ ಹತ್ತು ವರ್ಷಗಳಲ್ಲಿ ಕರ್ನಾಟಕಕ್ಕಾಗಿ ₹ 4.98 ಲಕ್ಷ ಕೋಟಿಗಳನ್ನು ವಿನಿಯೋಗಿಸಿದೆ. ಖಂಡಿತವಾಗಿಯೂ, ಪ್ರಧಾನಿ ನರೇಂದ್ರ ಮೋದಿಯವರ ಅಮೋಘ ನಾಯಕತ್ವದಲ್ಲಿ ಕರ್ನಾಟಕದ ಜನರು ಬಿಜೆಪಿಯ ಕಾರ್ಯಕ್ಷಮತೆಯ ರಾಜಕೀಯಕ್ಕೆ ಮತ ಹಾಕಲಿದ್ದಾರೆ, ಇದರ ಪರಿಣಾಮವಾಗಿ 400 ಕ್ಕೂ ಹೆಚ್ಚು ಸ್ಥಾನಗಳೊಂದಿಗೆ ಭಾಜಪ ಅಭೂತಪೂರ್ವ ಗೆಲುವು ಸಾಧಿಸಲಿದೆ.