ಗೃಹ ಆರೋಗ್ಯ ಯೋಜನೆ: ಮನೆ ಮನೆ ಭೇಟಿ ನೀಡಿ ಅರೋಗ್ಯ ತಪಾಸಣೆ ನಡೆಸಲಿರುವ ಆರೋಗ್ಯ ಸಿಬ್ಬಂದಿ
ವಿಜಯ ದರ್ಪಣ ನ್ಯೂಸ್….. ಗೃಹ ಆರೋಗ್ಯ ಯೋಜನೆ: ಮನೆ ಮನೆ ಭೇಟಿ ನೀಡಿ ಅರೋಗ್ಯ ತಪಾಸಣೆ ನಡೆಸಲಿರುವ ಆರೋಗ್ಯ ಸಿಬ್ಬಂದಿ ಬಿಜಿಎಸ್ ನಗರ ದೇವನಹಳ್ಳಿ ತಾಲ್ಲೂಕು ಬೆಂಗಳೂರು ಗ್ರಾಮಾಂತರ ಜಿಲ್ಲೆ. ಜುಲೈ 18: ಗೃಹ ಆರೋಗ್ಯ ಯೋಜನೆಯಡಿ ಆರೋಗ್ಯ ಅಧಿಕಾರಿಗಳು ಜಿಲ್ಲೆಯಾದ್ಯಂತ ಮನೆ ಮನೆ ಭೇಟಿ ನೀಡಿ 30 ವರ್ಷ ಮೇಲ್ಪಟ್ಟ ಎಲ್ಲರಿಗೂ ಆರೋಗ್ಯ ತಪಾಸಣೆ ನಡೆಸಲಿದ್ದಾರೆ ಎಂದು ಜಿ.ಪಂ ಸಿಇಓ ಡಾ. ಕೆ.ಎನ್ ಅನುರಾಧ ಅವರು ತಿಳಿಸಿದರು. ಜಿಲ್ಲಾಡಳಿತ ಭವನದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಜಿಲ್ಲಾಡಳಿತ,…
ಕಡೆ ಆಷಾಢ ಶುಕ್ರವಾರ ಭಕ್ತರಿಂದ ದೇವಾಲಯಗಳಲ್ಲಿ ವಿಶೇಷ ಪೂಜೆ
ವಿಜಯ ದರ್ಪಣ ನ್ಯೂಸ್…. ಕಡೆ ಆಷಾಢ ಶುಕ್ರವಾರ ಭಕ್ತರಿಂದ ದೇವಾಲಯಗಳಲ್ಲಿ ವಿಶೇಷ ಪೂಜೆ ಮೈಸೂರು ತಾಂಡವಪುರ ಜುಲೈ 18: ಮೈಸೂರು ಜಿಲ್ಲೆ ನಂಜನಗೂಡು ತಾಲೂಕು ಚಿಕ್ಕಯ್ಯನ ಛತ್ರ ಹೋಬಳಿ ವರುಣ ವಿಧಾನಸಭಾ ಕ್ಷೇತ್ರಕ್ಕೆ ಸೇರುವ ತಾಂಡವಪುರ ಗ್ರಾಮದ ಗ್ರಾಮ ದೇವತೆ ಮಾರಮ್ಮ ಮಲ್ಲಮ್ಮ ಚಿಕ್ಕಮ್ಮ ನಾರಾಯಣಸ್ವಾಮಿ ಹಾಗೂ ತೊಟ್ಟಿತಾಳಮ್ಮನವರ ದೇವಾಲಯದಲ್ಲಿ ಕಡೆ ಆಷಾಢ ಶುಕ್ರವಾರ ಪ್ರಯುಕ್ತ ಭಕ್ತರು ವಿಶೇಷ ಪೂಜೆ ಸಲ್ಲಿಸಿ ದೇವರ ಕೃಪೆಗೆ ಪಾತ್ರರಾದರು. ಇದೆ ವೇಳೆ ಜಿಲ್ಲಾ ಪಂಚಾಯತಿ ಮಾಜಿ ಅಧ್ಯಕ್ಷ ಬಿ ಎಂ…
ನ್ಯಾಯಕ್ಕಾಗಿ ಮತ್ತೆ ಮತ್ತೆ ಎದ್ದು ಬರುತ್ತಿರುವ ಅನೇಕ ಪ್ರೇತಾತ್ಮಗಳು ಮತ್ತು ನತದೃಷ್ಟ ಹೆಣ್ಣು ಮಗು ಸೌಜನ್ಯ………
ವಿಜಯ ದರ್ಪಣ ನ್ಯೂಸ್ ಧರ್ಮಸ್ಥಳ ಫೈಲ್ಸ್……… ನ್ಯಾಯಕ್ಕಾಗಿ ಮತ್ತೆ ಮತ್ತೆ ಎದ್ದು ಬರುತ್ತಿರುವ ಅನೇಕ ಪ್ರೇತಾತ್ಮಗಳು ಮತ್ತು ನತದೃಷ್ಟ ಹೆಣ್ಣು ಮಗು ಸೌಜನ್ಯ……… ಅಲ್ಲಿನ ಸಾವುಗಳು ಸೃಷ್ಟಿಸಿರುವ ನ್ಯಾಯ ಮತ್ತು ಕಾನೂನಿನ ತ್ರಿಶಂಕು ಸ್ಥಿತಿ……. ” ಯಾವ ಕಾಲದ ಶಾಸ್ತ್ರವೇನು ಹೇಳಿದರೇನು ? ಎದೆಯ ದನಿಗೂ ಮಿಗಿಲು ಶಾಸ್ತ್ರವಿಹುದೇನು ” ಎಂಬ ರಾಷ್ಟ್ರಕವಿ ಕುವೆಂಪು ಅವರ ಮಾತುಗಳನ್ನು ನೆನೆಯುತ್ತಾ…. ಸೌಜನ್ಯ ಎಂಬ ಬಾಲಕಿಯ ಕೊಲೆ ಮತ್ತು ಅತ್ಯಾಚಾರ ಇತ್ತೀಚಿನ ವರ್ಷಗಳ ಅತ್ಯಂತ ವಿಶೇಷ ಪ್ರಕರಣ. ಬಹುಶಃ ನಿಜವಾದ…
ರೈತರ ಒಪ್ಪಿಗೆ ಇಲ್ಲದೆ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳುವುದಕ್ಕೆ ಸರ್ಕಾರ ತಡೆ ನೀಡಬೇಕು
ವಿಜಯ ದರ್ಪಣ ನ್ಯೂಸ್… ರೈತರ ಒಪ್ಪಿಗೆ ಇಲ್ಲದೆ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳುವುದಕ್ಕೆ ಸರ್ಕಾರ ತಡೆ ನೀಡಬೇಕು ಶಿಡ್ಲಘಟ್ಟ : ತಾಲ್ಲೂಕಿನ ಜಂಗಮಕೋಟೆ ಹೋಬಳಿಯಲ್ಲಿ ರೈತರ ಒಪ್ಪಿಗೆ ಇಲ್ಲದೆ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳುವುದಕ್ಕೆ ಸರ್ಕಾರ ತಡೆ ನೀಡಬೇಕು ,ರೈತರ ಪಂಪ್ಸೆಟ್ಗಳಿಗೆ ನಿರಂತರ 7 ಗಂಟೆ ವಿದ್ಯುತ್ ಸರಬರಾಜು, ಗುಂಡುತೋಪುಗಳ ಒತ್ತುವರಿ ತೆರವುಗೊಳಿಸಿ ಗಿಡ ನೆಡುವುದರ ಜತೆಗೆ ರೈತರ ಸಮಸ್ಯೆಗಳನ್ನು ಪರಿಹರಿಸಲು ರೈತರ ಸಭೆ ಕರೆಯಬೇಕು ಎಂದು ರೈತ ಸಂಘದ ತಾಲ್ಲೂಕು ಅಧ್ಯಕ್ಷ ಎಸ್.ಎಂ.ರವಿಪ್ರಕಾಶ್ ತಿಳಿಸಿದರು. ಬಿತ್ತನೆ ಬೀಜ, ರಸಗೊಬ್ಬರ ವಿತರಣೆ ಸೇರಿ…
ಪೌರಕಾರ್ಮಿಕರು ಹಾಗೂ ತೃತಿಯ ಲಿಂಗಿಗಳಿಗೆ ಬಾಗಿನ ನೀಡಿದ ಮಹಿಳಾ ಆಯೋಗದ ಅಧ್ಯಕ್ಷ ನಾಗಲಕ್ಷ್ಮಿ
ವಿಜಯ ದರ್ಪಣ ನ್ಯೂಸ್…. ನಾಡ ದೇವತೆ ಚಾಮುಂಡೇಶ್ವರಿ ವರ್ಧಂತಿ ಅಂಗವಾಗಿ ಪೌರಕಾರ್ಮಿಕರು ಹಾಗೂ ತೃತಿಯ ಲಿಂಗಿಗಳಿಗೆ ಬಾಗಿನ ನೀಡಿದ ಮಹಿಳಾ ಆಯೋಗದ ಅಧ್ಯಕ್ಷ ನಾಗಲಕ್ಷ್ಮಿ ಮೈಸೂರು ತಾಂಡವಪುರ ಜುಲೈ 17 : ಶ್ರೀ ದುರ್ಗಾ ಫೌಂಡೇಶನ್ ಹಾಗೂ ಕೆ ವಿ ಕೆ ಫೌಂಡೇಶನ್ ವತಿಯಿಂದ ನಾಡ ದೇವತೆ ತಾಯಿ ಚಾಮುಂಡೇಶ್ವರಿ ವರ್ಧಂತಿ ಅಂಗವಾಗಿ ಚಾಮುಂಡಿ ಬೆಟ್ಟದ ಪಾದದಲ್ಲಿ ಪೌರಕಾರ್ಮಿಕ ಮಹಿಳೆಯರಿಗೆ ಹಾಗೂ ತೃತೀಯಲಿಂಗಗಳಿಗೆ ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ ರವರು ಸೀರೆ, ಕುಂಕುಮ, ಅರಿಶಿಣ,…
ಸಂಸದ ಡಾ.ಕೆ ಸುಧಾಕರ್ ಅವರಿಂದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಂಕುಸ್ಥಾಪನೆ
ವಿಜಯ ದರ್ಪಣ ನ್ಯೂಸ್…. ಸಂಸದ ಡಾ.ಕೆ ಸುಧಾಕರ್ ಅವರಿಂದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಂಕುಸ್ಥಾಪನೆ ದೊಡ್ಡಬಳ್ಳಾಪುರ ಬೆಂ.ಗ್ರಾ ಜಿಲ್ಲೆ ಜುಲೈ,17:- ಸಂಸದರ ಸ್ಥಳೀಯ ಪ್ರದೇಶಾಭಿವೃದ್ಧಿ ಅನುದಾನದಲ್ಲಿ ದೊಡ್ಡಬಳ್ಳಾಪುರ ತಾಲ್ಲೂಕಿನಲ್ಲಿ ವಿವಿಧ ಅಭಿವೃದ್ಧಿ ಕಾಮಗರಿಗಳಿಗೆ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರ ಸಂಸದ ಡಾ.ಕೆ ಸುಧಾಕರ್ ಅವರು ಶಂಕುಸ್ಥಾಪನೆ ನೆರವೇರಿಸಿದರು. ದೊಡ್ಡಬಳ್ಳಾಪುರ ಟೌನ್ ವಾರ್ಡ್ ನಂ 15 ವ್ಯಾಪ್ತಿಯ ರಂಗಪ್ಪ ಸರ್ಕಲ್ ಹಾಗೂ ವಾರ್ಡ್ ನಂ 04 ರ ಐ.ಬಿ ಸರ್ಕಲ್ ಬಳಿ ನೂತನ ಬಸ್ ತಂಗುದಾಣ, ಕೊಡಿಗೆಹಳ್ಳಿ ಹಾಗೂ ನಾಗಸಂದ್ರ…
ವಕ್ತಾರರು ಬೇಕಾಗಿದ್ದಾರೆ….
ವಿಜಯ ದರ್ಪಣ ನ್ಯೂಸ್…. ವಕ್ತಾರರು ಬೇಕಾಗಿದ್ದಾರೆ…. ದಯವಿಟ್ಟು ಗಮನಿಸಿ, ವಕ್ತಾರರ ಹುದ್ದೆಗಳು ಖಾಲಿ ಇವೆ. ಆಸಕ್ತರು ಅರ್ಜಿ ಸಲ್ಲಿಸಬಹುದು…… ಹುದ್ದೆಗಳ ಸಂಖ್ಯೆ : ಅನಿಯಮಿತ, ವಿದ್ಯಾರ್ಹತೆ : ಯಾವುದೇ ಅಕ್ಷರ ಜ್ಞಾನದ ಅವಶ್ಯಕತೆ ಇಲ್ಲ. ಸೇವಾ ಮನೋಭಾವ ಮಾತ್ರ. ಮೀಸಲಾತಿ : ಮನುಷ್ಯ ಎನಿಸಿಕೊಳ್ಳುವ ಎಲ್ಲರಿಗೂ ಅವಕಾಶವಿದೆ. ವಯಸ್ಸು : ಕನಿಷ್ಠ 25 ವರ್ಷ. ಗರಿಷ್ಠ ಮಿತಿ ಇಲ್ಲ. ಸಂಬಳ : ಯಾವುದೇ ನಿರೀಕ್ಷೆ ಬೇಡ. ಕೆಲವೊಮ್ಮೆ ಸ್ವಂತ ಹಣ ಖರ್ಚು ಮಾಡಬೇಕಾಗಿ ಬರಬಹುದು. ಕಾರ್ಯವ್ಯಾಪ್ತಿ :…
ಬೌದ್ಧ ನೆಲೆ ಕುರುಹುಗಳಿಂದ ರಾಜಘಟ್ಟ ಹೆಚ್ಚು ಮಹತ್ವ ಪಡೆದುಕೊಳ್ಳಲಿದೆ: ಸಚಿವ ಡಾ. ಎಚ್.ಕೆ ಪಾಟೀಲ್
ವಿಜಯ ದರ್ಪಣ ನ್ಯೂಸ್… ರಾಜಘಟ್ಟದಲ್ಲಿ ಬೌದ್ಧನೆಲೆಯ ಉತ್ಖನನಕ್ಕೆ ಚಾಲನೆ ಬೌದ್ಧ ನೆಲೆ ಕುರುಹುಗಳಿಂದ ರಾಜಘಟ್ಟ ಹೆಚ್ಚು ಮಹತ್ವ ಪಡೆದುಕೊಳ್ಳಲಿದೆ: ಸಚಿವ ಡಾ. ಎಚ್.ಕೆ ಪಾಟೀಲ್ ದೊಡ್ಡಬಳ್ಳಾಪುರ ಬೆಂ.ಗ್ರಾ.ಜಿಲ್ಲೆ ಜು.16 : ಬೌದ್ಧ ನೆಲೆಗಳನ್ನು ಪ್ರತಿಬಿಂಬಿಸುವ ಚೈತ್ಯ-ವಿಹಾರ ಸಂಕೀರ್ಣದ ಸಂಪೂರ್ಣ ಚಿತ್ರಣವನ್ನು ಬೆಳಕಿಗೆ ತರಲು ಬೌದ್ಧ ನೆಲೆ ಉತ್ಖನನಕ್ಕೆ ಚಾಲನೆ ನೀಡಲಾಗಿದ್ದು ರಾಜಘಟ್ಟವು ಮುಂದೆ ಮಹತ್ವದ ನೆಲೆಯಾಗಲಿದೆ ಎಂದು ಕಾನೂನು, ಸಂಸದೀಯ ವ್ಯವಹಾರಗಳು ಮತ್ತು ಪ್ರವಾಸೋದ್ಯಮ ಸಚಿವ ಡಾ.ಎಚ್.ಕೆ ಪಾಟೀಲ್ ಅವರು ಹೇಳಿದರು. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ…
ರೈತ ಹೋರಾಟಗಾರರು, ಭೂ ಹೋರಾಟಗಾರರ ಪರವಾಗಿ ಗಟ್ಟಿ ನಿಲುವು ತಳೆದು ಖಚಿತವಾಗಿ ನಿಂತ ಸರ್ಕಾರ
ವಿಜಯ ದರ್ಪಣ ನ್ಯೂಸ್….. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ಐತಿಹಾಸಿಕ ನಿರ್ಧಾರ ರೈತ ಹೋರಾಟಗಾರರು, ಭೂ ಹೋರಾಟಗಾರರ ಪರವಾಗಿ ಗಟ್ಟಿ ನಿಲುವು ತಳೆದು ಖಚಿತವಾಗಿ ನಿಂತ ಸರ್ಕಾರ ವಿಧಾನ ಸೌಧ ಬೆಂಗಳೂರು 15. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ಇಂದು ವಿಧಾನಸೌಧದ ಸಭಾಂಗಣದಲ್ಲಿ ನಡೆದ ದೇವನಹಳ್ಳಿ ತಾಲೂಕು ಚನ್ನರಾಯಪಟ್ಟಣ ಹಾಗೂ ಇತರ ಗ್ರಾಮಗಳಲ್ಲಿನ ಭೂಸ್ವಾಧೀನ ಪ್ರಕ್ರಿಯೆಗೆ ಸಂಬಂಧಪಟ್ಟಂತೆ ಅಧಿಕಾರಿಗಳ ಹಾಗೂ ರೈತ ಮುಖಂಡರ ಸಭೆಯಲ್ಲಿ ಮತ್ತು ಬಳಿಕ ಪತ್ರಿಕಾಗೋಷ್ಠಿಯಲ್ಲಿ ಹೇಳಿದ ಮುಖ್ಯಾಂಶಗಳು: ದೇವನಹಳ್ಳಿ ತಾಲೂಕು ಚನ್ನರಾಯಪಟ್ಟಣ ಹಾಗೂ ಇತರ…
ದೇವರ ಕೋಪ………
ವಿಜಯ ದರ್ಪಣ ನ್ಯೂಸ್… ದೇವರ ಕೋಪ……… ಹಿಂದೆ ಹಳ್ಳಿಗಳಿಗಾಗಿ ರಸ್ತೆಗಳನ್ನು ನಿರ್ಮಿಸಲಾಗುತ್ತಿತ್ತು, ಈಗ ರಸ್ತೆಗಳಿಗಾಗಿ ಹಳ್ಳಿಗಳನ್ನೇ ನಾಶಗೊಳಿಸಲಾಗುತ್ತಿದೆ…… ಹಿಂದೆ ಹಸಿವಿನಿಂದ ಸಾಕಷ್ಟು ಜನ ಸಾಯುತ್ತಿದ್ದರು, ಈಗ ಅತಿ ಹೆಚ್ಚು ಆಹಾರ ಸೇವನೆಯಿಂದ ಜನ ಸಾಯುತ್ತಿದ್ದಾರೆ…… ಹಿಂದೆ ಹೊಲಗದ್ದೆಗಳಲ್ಲಿ ದುಡಿದು ವಿಶ್ರಾಂತಿಗಾಗಿ ಜನ ಕಾಯುತ್ತಿದ್ದರು, ಈಗ ಅತಿಯಾದ ವಿಶ್ರಾಂತಿಯಿಂದಾಗಿ ದೈಹಿಕ ಚಟುವಟಿಕೆಗಳಿಲ್ಲದೆ ಜನ ಸಾಯುತ್ತಿದ್ದಾರೆ…….. ಹಿಂದೆ ಹತ್ತಾರು ಮಕ್ಕಳನ್ನು ತಂದೆ-ತಾಯಿಗಳು ಸಾಕುತ್ತಿದ್ದರು, ಈಗ ಒಬ್ಬನೇ ಮಗನಿಗೆ ತಂದೆ – ತಾಯಿಗಳೇ ಭಾರವಾಗುತ್ತಿದ್ದಾರೆ……. ಹಿಂದೆ ಹಣ ಅಂತಸ್ತು ಇಲ್ಲದೆ ಮನುಷ್ಯ…