ಬುದ್ದಿವಂತಿಕೆ ಮತ್ತು ಹೃದಯವಂತಿಕೆ……
ವಿಜಯ ದರ್ಪಣ ನ್ಯೂಸ್… ಬುದ್ದಿವಂತಿಕೆ ಮತ್ತು ಹೃದಯವಂತಿಕೆ…… ಅನಕ್ಷರಸ್ಥರ ಬುದ್ದಿವಂತಿಕೆ ಪ್ರಶ್ನಿಸುವವರು ಅಕ್ಷರಸ್ಥರ ಮಾನವೀಯತೆಯನ್ನು ಪ್ರಶ್ನಿಸಬೇಕಲ್ಲವೇ…….. ……ಒಂದು X ಸಾಮಾಜಿಕ ಜಾಲತಾಣದ ಟ್ವೀಟ್… ಅಕ್ಷರ ಕಲಿಕೆ ಒಂದು ನೈಪುಣ್ಯ ಅಥವಾ ಸುಲಭವಾಗಿ ಮಾಹಿತಿ ತಿಳಿಯುವ ಒಂದು ವಿಧಾನ ಅಥವಾ ಜೀವನ ಕೌಶಲ್ಯದ ಸಾಧನವೇ ಹೊರತು ಅದೇ ಜ್ಞಾನವಲ್ಲ, ಅರಿವಲ್ಲ, ಮೌಲ್ಯವಲ್ಲ, ಬದುಕಲ್ಲ. ಅಕ್ಷರ ಕಲಿಕೆ ಎಂಬುದು ಅಡುಗೆ ಮಾಡುವ, ಹೊಲಿಗೆ ಮಾಡುವ, ವಾಹನ ಚಾಲನೆ ಮಾಡುವ, ಮನೆ ಕಟ್ಟುವ, ಭೇಟೆಯಾಡುವ ರೀತಿಯ ಒಂದು ಕೌಶಲವೇ ಹೊರತು ಅದು…
