ವಿಜಯ ದರ್ಪಣ ನ್ಯೂಸ್….
ರೈತರ ಗದ್ದೆಗಳಿಗೆ ಸಮರ್ಪಕವಾಗಿ ನೀರು ತಲುಪಬೇಕು: ವಿಧಾನ ಪರಿಷತ್ ಸದಸ್ಯ ಡಾ ಯತೀಂದ್ರ ಸಿದ್ರಾಮಯ್ಯ

ತಾಂಡವಪುರ ಮಾರ್ಚ್ 16 ನಂಜನಗೂಡು ತಾಲೂಕು ಚಿಕ್ಕಯ್ಯನ ಛತ್ರ ಹೋಬಳಿ ವರುಣ ವಿಧಾನ ಸಭಾ ಕ್ಷೇತ್ರಕ್ಕೆ ಸೇರುವ ತೊರೆಮಾವು ಗ್ರಾಮದಲ್ಲಿ ತಾಲೂಕು ಆಡಳಿತ ಹಾಗೂ ಗ್ರಾಮ ಪಂಚಾಯಿತಿ ವತಿಯಿಂದ ಏರ್ಪಡಿಸಿದ್ದ ಸಾರ್ವಜನಿಕರ ಒಂದು ಕೊರತೆ ಸಮಸ್ಯೆಗಳ ಆಲಿಕೆ ಸಭೆಯಲ್ಲಿ ವಿಧಾನ ಪರಿಷತ್ ಸದಸ್ಯರು ಆದ ಡಾ. ಯತೀಂದ್ರ ಸಿದ್ದರಾಮಯ್ಯನವರರಲ್ಲಿ ರೈತರುಗ್ರಾಮಸ್ಥರು ರಾಂಪುರ ನಾಗ ವ್ಯಾಪ್ತಿಗೆ ಬರುವ ತೊರೆಮಾವು ಕೆಂಪಿ ಸಿದ್ದನ ಹುಂಡಿ ಹೆಜ್ಜೆಗೆ ಸೇರಿದಂತೆ ಈ ಭಾಗದಲ್ಲಿ ನೀರಾವರಿ ಇಲಾಖೆ ಅಧಿಕಾರಿಗಳು ರೈತರ ಜಮೀನುಗಳಿಗೆ ಸಮರ್ಪಕವಾಗಿ ನಿರ್ವಹಿಸುವಂತೆ ಚರಂಡಿ ವ್ಯವಸ್ಥೆಯನ್ನು ಮಾಡಲಾಗುತ್ತಿದ್ದು ಈಗಾಗಲೇ ಕೆಲಸ ಮುಗಿದಿದ್ದು, ನಾಲಿಗೆ ನೀರು ಬಿಟ್ಟಿದ್ದಾರೆ ಈ ಭಾಗದ ರೈತರು ಭತ್ತದ ನಾಟಿ ಮಾಡಲು ಎಲ್ಲಾ ರೀತಿ ತಯಾರಿ ಮಾಡಿಕೊಂಡಿದ್ದೇವೆ ಆದರೆ ನಮ್ಮ ಗದ್ದೆಗಳಿಗೆ ಸಮರ್ಪಕವಾಗಿ ನೀರು ಬರುತ್ತಿಲ್ಲ ಎಂದು ರೈತರು ಗ್ರಾಮಸ್ಥರು ಡಾ ಯತೀಂದ್ರ ಸಿದ್ದರಾಮಯ್ಯ ಮನವಿ ಮಾಡಿದರು
ಅವರು ಇಂದು ವರುಣ ವಿಧಾನಸಭಾ ಕ್ಷೇತ್ರಕ್ಕೆ ಸೇರುವ ತೊರೆಮಾವು ಗ್ರಾಮದಲ್ಲಿ ತಾಲೂಕು ಆಡಳಿತ ಗ್ರಾಮ ಪಂಚಾಯಿತಿ ವತಿಯಿಂದ ಹಮ್ಮಿಕೊಂಡಿದ್ದ ಸಾರ್ವಜನಿಕರ ಕುಂದು ಕೊರತೆ ಸಮಸ್ಯೆ ಹಾಲಿಕೆ ಜನ ಸಂಪರ್ಕ ಸಭೆ ವಿಧಾನ ಪರಿಷತ್ ಸದಸ್ಯ ಡಾ ಯತೀಂದ್ರ ಸಿದ್ರಾಮಯ್ಯನವರು ಭಾಗವಹಿಸಿ ಸಾರ್ವಜನಿಕರ ಸಮಸ್ಯೆಗಳನ್ನು ಆಲಿಸಿದರು.
ಬಳಿಕ ಮಾತನಾಡಿದ ಅವರು ನೀರಾವರಿ ಇಲಾಖೆ ಅಧಿಕಾರಿಗಳನ್ನು ಕರೆದು ಅವರ ಜೊತೆ ಮಾತನಾಡಿ ರೈತರು ನಮ್ಮ ಗದ್ದೆಗಳಿಗೆ ಮೊದಲು ನೀರು ಬರುತ್ತಿತ್ತು ಈಗ ನೀರಾವರಿ ಇಲಾಖೆಯವರು ಕೆಲಸ ಮಾಡಿದ ಮೇಲೆ ನಮ್ಮ ಗದ್ದೆಗಳಿಗೆ ಸಮರ್ಪಕವಾಗಿ ನೀರು ಬರುತ್ತಿಲ್ಲ ಎಂದು ದೂರು ಮನವಿ ಮಾಡಿದ್ದಾರೆ ನೀವು ಏನು ಮಾಡುತ್ತಿರುವ ಗೊತ್ತಿಲ್ಲ ಸಮರ್ಪಕವಾಗಿ ರೈತರ ಗದ್ದೆಗಳಿಗೆ ನೀರು ಅರಿಯಬೇಕು ಆ ರೀತಿ ನೀವೇ ಕೆಲಸ ಮಾಡಬೇಕು ಮತ್ತೆ ಇಂತಹ ದೂರುಗಳು ರೈತರಿಂದ ಕೇಳಿ ಬರಬಾರದು ರೈತರ ಗದ್ದೆಗಳ ಕೊನೆಯ ಭಾಗಕ್ಕೂ ಸಮರ್ಪಕವಾಗಿ ನೀರು ಹರಿಯುವಂತೆ ನೋಡಿಕೊಳ್ಳಿ ಎಂದು ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದರು.
ಅಲ್ಲದೆ ಗ್ರಾಮಸ್ಥರು ನಮಗೆ ನಿವೇಶನದ ಸಮಸ್ಯೆ ತುಂಬಾ ಇದೆ ಎಂದು ಮನವಿ ಮಾಡಿದ್ದೀರಿ. ನಿಮ್ಮ ಮನವಿಗೆ ನಾವು ಸ್ಪಂದಿಸಿ ನಿವೇಶನ ದೊರಕಿಸಿಕೊಡಲು ಕ್ರಮ ಕೈಗೊಳ್ಳುತ್ತೇನೆ ನಿಮ್ಮ ಗ್ರಾಮದ ಅಕ್ಕಪಕ್ಕ ಯಾವುದಾದರು ಸರ್ಕಾರಿ ಭೂಮಿ ಇದ್ದರೆ ನೋಡಿ ಅಥವಾ ಯಾರಾದರೂ ಭೂಮಿಯನ್ನು ಕೊಡುವುದಾದರೆ ಭೂಮಿಯನ್ನು ಕೊಂಡುಕೊಂಡು ನಿಮ್ಮ ಗ್ರಾಮದ ಬಡವರಿಗೆ ನಿವೇಶನ ದುರಹರಿಸಿಕೊಳ್ಳಲ
ಎಲ್ಲಾ ರೀತಿಯ ಕ್ರಮ ಕೈಗೊಳ್ಳುತ್ತೇನೆ ಎಂದು ಗ್ರಾಮಸ್ಥರಿಗೆ ಭರವಸೆ ನೀಡಿದರು.
ಎದೆ ಬೆಳೆ ಗ್ರಾಮದ ಮುಖಂಡರು ಹಾಗೂ ಗ್ರಾಮ ಪಂಚಾಯಿತಿ ಒಕ್ಕೂಟಗಳ ತಾಲ್ಲೂಕು ಅಧ್ಯಕ್ಷ ತೊರೆಮಾವು ಟಿ ಡಿ ಗಿರೀಶ್ ರವರು ಮಾತನಾಡಿ ನಮ್ಮ ಗ್ರಾಮದಲ್ಲಿ ಇನ್ನೂ ಹಲವಾರು ಮೂಲಭೂತ ಸೌಲಭ್ಯಗಳ ಸಮಸ್ಯೆಗಳಿದ್ದು ಆ ಎಲ್ಲಾ ಸಮಸ್ಯೆಗಳನ್ನು ತಾವು ಬಗೆಹರಿಸಲು ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡಿದರು.
ಮನವಿ ಸ್ವೀಕರಿಸಿ ಮಾತನಾಡಿದ ಡಾಕ್ಟರ್ ಯತೀಂದ್ರ ಸಿದ್ರಾಮಯ್ಯನವರು ಸ್ಥಳದಲ್ಲಿ ಇದ್ದ ನೀರಾವರಿ ಇಲಾಖೆ ಅಧಿಕಾರಿಗಳನ್ನು ಕರೆದು ರೈತರ ಗದ್ದುಗಳಿಗೆ ಸಮರ್ಪಕವಾಗಿ ನೀರು ಒದಗಿಸಲು ಕ್ರಮ ಕೈಗೊಳ್ಳಿ ಎಂದು ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದರು.
ಅಲ್ಲದೆ ನಿಮ್ಮ ಎಲ್ಲ ಸಮಸ್ಯೆಗಳನ್ನು ಹಂತ ಹಂತವಾಗಿ ಬಗೆಹರಿಸುವ ಮೂಲಕ ಸಮಸ್ಯೆಗಳಿಗೆ ಪರಿಹಾರವನ್ನು ದೊರಕಿಸಿಕೊಡಲು ಕ್ರಮ ಕೈಗೊಳ್ಳುತ್ತಾನೆ ಎಂದು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ರಾಜ್ಯ ಮೃಗಾಲಯ ಪ್ರಾಧಿಕಾರದ ಅಧ್ಯಕ್ಷ ರಂಗಸ್ವಾಮಿ ಶ್ರೀಕಂಠೇಶ್ವರ ದೇವಾಲಯದ ವ್ಯವಸ್ಥಾಪನ ಸಮಿತಿಯ ಮಾಜಿ ಅಧ್ಯಕ್ಷ ಹೆಜ್ಜೆಗೆ ಇಂದನ್ ಬಾಬು ಮೈಸೂರು ವಿಶ್ವವಿದ್ಯಾಲಯ ಅಕಾಡೆಮಿ ಸದಸ್ಯ ಗಿರೀಶ್ ಜಿಲ್ಲಾ ಪಂಚಾಯತಿ ಮಾಜಿ ಸದಸ್ಯೆ ರೇವಮ್ಮ ಬಗರ್ ಹುಕುಂ ಸಮಿತಿಯ ಸದಸ್ಯ ರಾಜಣ್ಣ ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ಲಕ್ಷ್ಮಿ ಬಿಪಿ ಮಹಾದೇವ ಎಂ ದಕ್ಷಿಣ ಮೂರ್ತಿ ಕಲ್ಮಳ್ಳಿ ಸುರೇಶ ಬಾಬು ಹುಳಿಮಾವು ನಟರಾಜು ತಾಲೂಕು ಕುರುಬ ಸಮಾಜದ ಮುಖಂಡ ಕೆಂಪಣ್ಣ ಪಂಚಾಯತಿ ಮಾಜಿ ಅಧ್ಯಕ್ಷರಾದ ಕೆ ಎಸ್ ಹುಂಡಿ ನಂಜಯ್ಯ ಕೆಎಸ್ ರವಿ ಗ್ರಾಮದ ಮುಖಂಡರಾದ ಪದ್ಮ ಪಾಣಿ ರಮೇಶ್ ಹೆಜ್ಜೆಗೆ ಭಾಸ್ಕರ್ ಪುಟ್ಟಣ್ಣ ತಾಲೂಕು ಮಡಿವಾಳ ಸಂಘದ ಅಧ್ಯಕ್ಷ ಸಮಾಜದ ಮುಖಂಡ ಹೆಜ್ಜಿಗೆ ಪ್ರಸನ್ನ ಗೋಪಾಲಕೃಷ್ಣ ಗಿರೀಶ್ ಮುಖಂಡರಾದ ನಿವೃತ್ತ ಸರ್ಕಾರಿ ನೌಕರ ಬಸವರಾಜು ಮುದ್ದು ಮಾದೇಗೌಡ ನಗರ್ಲೆ ಮನು ಶಿವಮೂರ್ತಿ ಪ್ರಜ್ವಲ್ ಅಡಕನಹಳ್ಳಿ ಮಾದಪ್ಪ ಗ್ಯಾರಂಟಿ ಯೋಜನೆಯ ಸದಸ್ಯ ರವಿ ಹಾಗೂ ತಾ. ಪಂ. ಕಾರ್ಯನಿರ್ವಾಧಿಕಾರಿ ಜರಾಲ್ಡ್ ರಾಜೇಶ್ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಪ್ರಕಾಶ್ ಕಾರ್ಯದರ್ಶಿ ಮನ್ನೇಗೌಡ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಗ್ರಾಮಸ್ಥರು ಹಾಜರಿದ್ದರು







