ಕರ್ನಾಟಕ ಮಿತ್ರ

 ಸುಮಾರು 54 ವರ್ಷಗಳಿಂದ ಅನೇಕ ವೈವಿಧ್ಯಮಯ ‌ ಕಾರ್ಯಕ್ರಮಗಳನ್ನು ಅಖಿಲ ಕರ್ನಾಟಕ ಮಿತ್ರ ಮಂಡಳಿ  ಹಮ್ಮಿಕೊಂಡು ಬರುತ್ತಿದೆ. 2023ರ ಶೈಕ್ಷಣಿಕ ವರ್ಷದಲ್ಲಿ ಮಹಿಳೆಯರಿಗಾಗಿ ‌ವಿಶೇಷ ಕಾರ್ಯಕ್ರಮನ ಹಮ್ಮಿಕೊಂಡು ಸಮ್ಮೇಳನವನ್ನು ಏರ್ಪಡಿಸಲಾಗಿದೆ ಎಂದು ರಾಜ್ಯಾಧ್ಯಕ್ಷ ಚಿಮಾ ಸುಧಾಕರ್  ತಿಳಿಸಿದರು.

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ವಿಜಯಪುರ ಪಟ್ಟಣದಲ್ಲಿ ಅಖಿಲ ಕರ್ನಾಟಕ ಮಿತ್ರ ಸಂಘದ ಆಶ್ರಯದಲ್ಲಿ ದೇವನಹಳ್ಳಿ ತಾಲ್ಲೂಕು ಬೆಂಗಳೂರು ಗ್ರಾಮಾಂತರ ಜಿಲ್ಲಾ ಕರ್ನಾಟಕ ಹಾಗೂ ವಚನ ಬಳಗ, ಅವಿಭಜಿತ ಬೆಂಗಳೂರು ಜಿಲ್ಲಾ ಕಿರುಶರಣ ಸಾಹಿತ್ಯ ಸಮ್ಮೇಳನ,  ಬೆಂಗಳೂರು ಗ್ರಾಮಾಂತರ ಜಿಲ್ಲಾ ಮಹಿಳಾ ಜನಪದ ಕಲಾವಿದರ ಮಹಿಳಾ ಜನಪದ ಹಾಗೂ ಮಹಿಳಾ ರಂಗಭೂಮಿ ಕಲಾವಿದರ ಸಮ್ಮೇಳನ ಹಾಗೂ ಕರ್ನಾಟಕ ರಾಜ್ಯ ಮಾಜಿ ಮುಖ್ಯಮಂತ್ರಿ ಎಸ್ ಸರ್ ಬೊಮ್ಮಾಯಿ ರವರ ಜನ್ಮ ಶತಾಬ್ದಿ ಹಾಗೂ ಪ್ರಶಸ್ತಿ ಪ್ರಧಾನ ಸಮಾರಂಭವನ್ನು ಮಾಜಿ ಶಾಸಕ ಜಿ ಚಂದ್ರಣ್ಣನವರು  ಉದ್ಘಾಟಿಸಿ   ದೇಶದ ಮಾಜಿ ಪ್ರಧಾನಿ ಶ್ರೀಮತಿ ಇಂದಿರಾ ಗಾಂಧಿ, ಮುಖ್ಯಮಂತ್ರಿಗಳಾಗಿ ಕುಮಾರಿ ಜಯಲಲಿತ, ಮಮತಾ ಬ್ಯಾನರ್ಜಿ ಅಂತರಿಕ್ಷಕ್ಕೆ ಕಲ್ಪನಾ ಚಾವ್ಲಾ  ಇವರುಗಳು ಉನ್ನತ ಅಲಂಕರಿಸಿ ಒಳ್ಳೆಯ ಸೇವೆಯನ್ನು ಮಾಡಿದ್ದಾರೆ ಎಂದು ತಿಳಿಸಿದರು. 

ರಮಣ ಮಹರ್ಷಿ ಪ್ರಶಸ್ತಿ ಪುರಸ್ಕೃತೆ ಶ್ರೀಮತಿ ಸ್ವರ್ಣಗೌರಿ ಮಹದೇವ ಮಾತನಾಡುತ್ತಾ ಜಾನಪದ ಗೀತೆಗಳಲ್ಲಿ ಧಾರ್ಮಿಕ ವಿಚಾರಗಳು ಅಡಕವಾಗಿದೆ ಜೊತೆಗೆ ಹಾಸ್ಯ ಲಾಸ್ಯ ಪ್ರೇಮ ಮಳೆ ದೇವರು ಪ್ರಕೃತಿ ಮದುವೆ ಆಚಾರ ಸಂಪ್ರದಾಯ ಕುರಿತಂತೆ ಹಾಡುಗಳಲ್ಲಿ ದೇಸಿ ಜನಪದ ವಿಶ್ವ ಜಾನಪದ ವಿಶಿಷ್ಟ ಕೊಡುಗೆ ನೀಡಿದೆ.

ರಂಗಭೂಮಿಯಲ್ಲಿ  ಜನಪದ ರಂಗಭೂಮಿ, ವೃತ್ತಿಪರ ರಂಗಭೂಮಿ, ಹವ್ಯಾಸ ರಂಗಭೂಮಿ. ಪ್ರಪ್ರಥಮವಾಗಿ 1962ರಲ್ಲಿ ನಾಗರತ್ನಮ್ಮನವರು ಮಹಿಳಾ ನಾಟಕ ಮಂಡಳಿ ಸ್ಥಾಪನೆ ಮಾಡಿದರು. ವಚನ ಸಾಹಿತ್ಯದಲ್ಲಿ 12ನೇ ಶತಮಾನದಲ್ಲಿ 1120 ವರ್ಷದ ಹಿಂದೆ ಅನುಭವ ಮಂಟಪದಲ್ಲಿ ವಚನ ಸಾಹಿತ್ಯಗಳು ಜಾತಿ ಅನುಗುಣವಾಗಿ ಮಹಿಳೆಯರಿಗೆ ಉತ್ತಮ ಸ್ಥಾನಮಾನ ನೀಡಿದೆ ವ್ಯಕ್ತಿ ಎಂದು ತಿಳಿಸಿದರು.

ಆರ್ ಬೊಮ್ಮಾಯಿ ಜನ್ಮ ಶತಾಬ್ದಿ ಪ್ರಶಸ್ತಿಯನ್ನು ಮಾಜಿ ಮಂತ್ರಿ ಲೀಲಾದೇವಿ ಆರ್ ಪ್ರಸಾದ್, ಮಾಜಿ ಶಾಸಕ ಜಿ ಚಂದ್ರಣ್ಣನವರಿಗೆ ನೀಡಿ ಗೌರವಿಸಲಾಯಿತು.

ಪ್ರಶಸ್ತಿ ಗೌರವವನ್ನು ಸ್ವೀಕರಿಸಿದ  ಲೀಲಾದೇವಿ ಆರ್ ಪ್ರಸಾದ್ ರವರು ನಾನು ಐದು ಬಾರಿ ವಿಧಾನ ಸಭಾ ಸದಸ್ಯರಾಗಿ ಒಂದು ಬಾರಿ ಲೋಕಸಭಾ ಸದಸ್ಯ ಒಂದು ಬಾರಿ ರಾಜ್ಯಸಭಾ ಸದಸ್ಯರಾಗಿ ಒಂದು ಬಾರಿ ಕಾರ್ಪೊರೇಟರ್ ಆಗಿ ಸೇವೆ ಸಲ್ಲಿಸಿರುವ ನಾನು  ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮಂತ್ರಿಯಾಗಿದ್ದಾಗ ಕನ್ನಡ ಸಾಹಿತ್ಯ ಪರಿಷತ್ತಿಗೆ ದೇಣಿಗೆಯನ್ನು ನೀಡಿರುತ್ತೇನೆ ಎಂದರು 

ಕಾರ್ಯಕ್ರಮದಲ್ಲಿ ಶ್ರೀಮತಿ ಪಾರ್ವತಮ್ಮ ಮುನಿಯಪ್ಪ ವಿಜಯಮ್ಮ ಶಿವಕುಮಾರ್ ಸುಶೀಲಾ ವಾಯದೇವ ನಾಗಮಣಿ ಎಚ್ ವಿ ತೇಜಸ್ವಿನಿ ಎಂ.ಎಸ್ ಸುಮಲತಾ ಎಚ್ ಆರ್ ವಿಜಯ ಲಕ್ಷ್ಮಿ ಕುಮಾರಿ ಕುಸುಮ ಕುಮಾರಿ ಪ್ರಿಯಾಂಕ ರವರಿಗೆ ಗೌರವ ಸಮರ್ಪಣೆ ಮಾಡಲಾಯಿತು.

ಕಾರ್ಯಕ್ರಮದ ಸಾನಿಧ್ಯ ಹಾಗೂ ಪ್ರಶಸ್ತಿ ಪ್ರದಾನ ನೆರವೇರಿದ ಶ್ರೀ ಕ್ಷೇತ್ರ ವನಕಲ್ಲು ಮಹಾ ಸಂಸ್ಥಾನ ಮಠದ ಮಹಾಸ್ವಾಮಿಗಳು  ಆಶೀರ್ವಚನ

ನೀಡುತ್ತಾ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ನನ್ನನ್ನು ಸಮ್ಮೇಳನದ ಸರ್ವಾಧ್ಯಕ್ಷರಾಗಿ ನಿಯೋಜಿಸಿದ್ದು ನನಗೆ ತುಂಬಾ ಸಂತೋಷಕರವಾಗಿದೆ ನನ್ನ ಜೀವನದಲ್ಲಿ ಮರೆಯಲಾಗದ ಸಂಗತಿಯಾಗಿದೆ. 12ನೇ ಶತಮಾನದಲ್ಲಿ ಬಸವಣ್ಣನವರು ಅನುಭವ ಮಂಟಪದಲ್ಲಿ ಮಹಿಳೆಯರಿಗಾಗಿ 33% ನೀಡಿ ಸ್ಥಾನ ಮಾನ ನೀಡಿದರೆಂದು ತಿಳಿಸಿದರು. 

ಕಾರ್ಯಕ್ರಮದಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಚಂದ್ರಶೇಖರ್ ಹಡಪದ್ ದೇವನಹಳ್ಳಿ ತಾಲೂಕು ಕಸಾಪ ಅಧ್ಯಕ್ಷ ಆರ್ ಕೆ ನಂಜೇಗೌಡ ಕಾರ್ಯದರ್ಶಿ ಪರಮೇಶ್ವರಯ್ಯ ನಗರ ಘಟಕ ಕಸಾಪ ಅಧ್ಯಕ್ಷ ಜೆ.ಎನ್ ಶ್ರೀನಿವಾಸ್ ಬೆಂಗಳೂರು ಗ್ರಾಮಾಂತರ ಜಿಲ್ಲಾ ಕನ್ನಡ ಕಲಾವಿದರ ಸಂಘದ ಅಧ್ಯಕ್ಷರ ರಬ್ಬನಹಳ್ಳಿ ಕೆಂಪಣ್ಣ ತಾಲ್ಲೂಕು ಅಧ್ಯಕ್ಷ ಡಾ. ಮೋಹನ್ ಬಾಬು ಜೇಸಿಐ ಅಧ್ಯಕ್ಷ ಮುನಿ ವೆಂಕಟರಮಣ ದೊಡ್ಡಬಳ್ಳಾಪುರ ತಾಲೂಕು ಕಸಾಪ ಮಾಜಿ ಅಧ್ಯಕ್ಷೆ ಶ್ರೀಮತಿ ಪ್ರಮೀಳಾ ಮಹದೇವ್ ವಿಜಯಪುರ ಪಟ್ಟಣ ಕಸಾಪ ಮಾಜಿ ಅಧ್ಯಕ್ಷ ಜೆ.ಆರ್ ಮುನಿವೀರಣ್ಣ ರಾಷ್ಟ್ರೀಯ ಬಸವದಳ ಅಧ್ಯಕ್ಷ ಪುಟ್ಟರಾಜಪ್ಪ ನವರು ಉಪಸ್ಥಿತರಿದ್ದರು.

 ಕಾರ್ಯಕ್ರಮದ ಆರಂಭದಲ್ಲಿ  ವಿ.ಎಂ. ನಾಯ್ಡು ಮತ್ತು ಸಂಗಡಿಗರು ರಂಗಗೀತೆ ಸುಗಮ ಸಂಗೀತ ಸುಶ್ರಾವ್ಯವಾಗಿ ಹಾಡಿದ್ದರು.