ಶ್ರದ್ಧಾ ಭಕ್ತಿಯಿಂದ ನಡೆದ ಶ್ರೀ ಧರ್ಮರಾಯಸ್ವಾಮಿ ದ್ರೌಪದಮ್ಮ ಕರಗ

..ವಿಜಯ ದರ್ಪಣ ನ್ಯೂಸ್….   

ಶ್ರದ್ಧಾ ಭಕ್ತಿಯಿಂದ ನಡೆದ ಶ್ರೀ ಧರ್ಮರಾಯಸ್ವಾಮಿ ದ್ರೌಪದಮ್ಮ ಕರಗ

ವಿಜಯಪುರ, ದೇವನಹಳ್ಳಿ ತಾಲ್ಲೂಕು : ಇತಿಹಾಸ ಪ್ರಸಿದ್ದ ಶ್ರೀಧರ್ಮರಾಯಸ್ವಾಮಿ ದ್ರೌಮ್ಮನವರ 87 ನೇ ವರ್ಷದ ಹೂವಿನ ಕರಗ ಮಹೋತ್ಸವ ವಿಜೃಂಭಣೆ ಯಿಂದ ನಡೆಯಿತು. ಶ್ರೀಧರ್ಮ ರಾಯಸ್ವಾಮಿ ದ್ರೌಪದಮ್ಮ ಕರಗ ಮಹೋತ್ಸವದ ತಿಗಳ ಜನಾಂಗದ ಎಲ್ಲರೂ ಒಟ್ಟಾರೆ ಸೇರಿ 87ನೇ ವರ್ಷದ ಹೂವಿನ ಕರಗ ಆಯೋಜಿಸಲಾಗಿತ್ತು.

ಕರಗ ಹೊತ್ತು ಪೂಜಾರಿ ಭೀಮಾಣ್ಣ, ದೇವಾಲಯದಿಂದ ಹೊರಟು ನೃತ್ಯಕ್ಕಾಗಿ ಏರ್ಪಡಿಸಿದ್ದ ವೇದಿಕೆಯ ಮೇಲೇ ರಿದರು ವಾದ್ಯ ಹಾಗೂ ತಮಟೆ ಮೇಳಕ್ಕೆ ಅವರು ವಿವಿಧ ರೀತಿಯ ನೃತ್ಯಗಳನ್ನು ಆಕರ್ಷಕವಾಗಿ ಕಂಗೊಳಿಸುವಂತೆ ಪ್ರದ ರ್ಶಿಸಿದರು. ಸುತ್ತ ಸೇರಿದ್ದ ಸಾವಿರಾರು ಮಂದಿ ವೀಕ್ಷಿಸಿದರು.

ಹೆಜ್ಜೆ ಹಾಕಿದ ಭೀಮಣ್ಣನವರು ವಾಲಗದ ನಾಧ ಸ್ವಾರದಲ್ಲಿ ಹಾಡುವ ಮೂಲಕ ಕಣ್ಣುತುಂಬಿಕೊಂಡ ಜನ ಸಾಗರವೇ ಸೇರಿತ್ತು.

ಹೂವಿನ ಕರಗಕ್ಕೆ ಪಟ್ಟಣದ ಪ್ರತಿಯೊಂದು ದೇವಾಲಯಗಳಲ್ಲಿ ವಿಶೇಷ ಪೂಜೆ ಸಲ್ಲಿಸಿದರು. ಮನೆ ಮನೆಗಳಲ್ಲಿ ಮತ್ತು ಇಡೀ ಪಟ್ಟಣ ವಿದ್ಯುತ್ ದೀಪಗಳಿಂದ ಹಬ್ಬದ ವಾತಾವರಣ ನಿರ್ಮಾಣವಾಗಿತ್ತು.

ಕರಗ ಮಹೋತ್ಸವ ಹಿನ್ನೆಲೆಯಲ್ಲಿ ಶ್ರೀಧರ್ಮರಾಯ ಸ್ವಾಮಿ ದ್ರೌಪದಮ್ಮ ದೇವಾಲಯದಲ್ಲಿ ದೇವರಿಗೆ ಹೂವಿನ ಅಲಂಕಾರ, ವಿಶೇಷ ಪೂಜೆ, ಮಹಾ ಮಂಗಳಾರತಿ ಹಾಗೂ ಪ್ರಸಾದ ವಿನಿಯೋಗ ನಡೆಯಿತು.

ದೇವಾಲಯ ಸೇರಿದಂತೆ ಪಟ್ಟಣದ ಸಾಕಷ್ಟು ಮನೆಗಳು ದೀಪಾಲಂಕಾರ ಹಾಗೂ ದೇವರ ಪಲ್ಲಕ್ಕಿ ಉತ್ಸವ, ಮಹಿಳೆಯರಿಂದ ದೀಪಾರಾಧನೆ ಸೇರಿ ದಂತೆ ವಿವಿಧ ದೈವಿಕ ಕೈಂಕರ್ಯಗಳು ನಡೆದವು.

ದೇವರುಗಳ ಪಲ್ಲಕ್ಕಿ ಉತ್ಸವ ರಾತ್ರಿಯಿಂದ ಬೆಳ್ಳಗಿನ ಜಾವದವರೆಗೂ ಭಕ್ತ ಸಮೂಹದಲ್ಲಿ ಪಟ್ಟಣದಲ್ಲಿ ದೀಪಾ ಲಂಕಾರ ಹಾಗೂ ದೇವರುಗಳ ಪಲ್ಲಕ್ಕಿ ಉತ್ಸವ ನಡೆಯಿತು. ಮೆರವಣಗೆಯ ಮೂಲಕ ಹೂವಿನ ಕರಗ ತೆರಳಿದಾಗ ಕರಗದಮ್ಮನಿಗೆ ಪೂಜಿಸಿದರು ಮನೆಗಳ ಹತ್ತಿರ ತೆರಳಿದಾಗ ಭಕ್ತಾಧಿಗಳು ಪೂಜೆ ಸಲ್ಲಿಸಿ ಪೂಜಿಸಿದರು.

ಬೆಳಗ್ಗೆ 5 ಗಂಟೆಗೆ ಪಟ್ಟಣದ ಪ್ರಮುಖ ರಸ್ತೆಗಳ ಮೂಲಕ ತೆರಳಿ ಸೌಹರ್ಧಯುತವಾಗಿ ಪೂಜೆ ಸಲ್ಲಿಸಿ ಬೆಳಗ್ಗೆ ಅಮೃತ ಘಳಿಗೆಯಲ್ಲಿ ಶ್ರೀ ಧರ್ಮರಾಯಸ್ವಾಮಿ ದೇವಾಲಯದಲ್ಲಿ ಗಣಾಚಾರಿಗಳು ಪೂಜಾರಿಗಳು, ಪೋತರಾಜರು ತಿಗಳ ಜನಾಂಗದ ಎಲ್ಲಾರ ಸಮ್ಮುಖದಲ್ಲಿ ಕರಗದ ಪೂಜಾರಿ ಭೀಮಣ್ಣ ಅದ್ದೂರಿ ಕರಗತ್ಯಜ್ಯೋತ್ಸವದ ನಡೆಸಿಕೊಟ್ಟರು.