ವಿಜಯ ದರ್ಪಣ ನ್ಯೂಸ್….
ವಕೀಲರ ಗೃಹ ನಿರ್ಮಾಣ ಸಹಕಾರ ಸಂಘಕ್ಕೆ ಅಧ್ಯಕ್ಷ ರಾಗಿ ಶಂಭುಗೌಡ ಆಯ್ಕೆ

ತಾಂಡವಪುರ ಮಾರ್ಚ್ 5: ವಕೀಲರ ಗೃಹ ನಿರ್ಮಾಣ ಸಹಕಾರ ಸಂಘದ ಆಡಳಿತ ಮಂಡಳಿಯ ಅಧ್ಯಕ್ಷರಾಗಿ ವಕೀಲ ಶಂಬುಗೌಡ ಐದನೇ ಬಾರಿಗೆ ಮರು ಆಯ್ಕೆಯಾದರೆ, ಉಪಾಧ್ಯಕ್ಷರಾಗಿ ಬಿ.ಸೋಮನಾಯಕ ರವರು ಆಯ್ಕೆಯಾದರು.
ಗುರುವಾರ ಸಂಘದ ಕಚೇರಿಯಲ್ಲಿ ನಡೆದ ಚುನಾವಣೆಯಲ್ಲಿ ಚುನಾವಣಾಧಿಕಾರಿಯಾಗಿ ಸರ್ಕಾರಿ ಸಹಕಾರಿಗಳ ಮುಖ್ಯ ಚುನಾವಣಾಧಿಕಾರಿ ಮಂಜು ಹಾಗು ವಕೀಲರ ಸಂಘದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶೋಭಾ ನೂತನ ಅಧ್ಯಕ್ಷ, ಉಪಾಧ್ಯಕ್ಷ ಪದಾಧಿಕಾರಿಗಳನ್ನು ಘೋಷಿಸಿದರು.
ಬಳಿಕ ನೂತನ ಅಧ್ಯಕ್ಷ ಶಂಭುಗೌಡ ಮಾತನಾಡಿ, ತಮ್ಮನ್ನೂ 5 ನೇ ಭಾರಿ ಅಧ್ಯಕ್ಷರಾಗಿ ಆಯ್ಕೆ ಮಾಡಿದ ಎಲ್ಲ ನಿರ್ದೇಶಕರಿಗೆ ಧನ್ಯವಾದ ತಿಳಿಸುತ್ತೇನೆ. ನಿರ್ದೇಶಕರ ವಿಶ್ವಾಸಕ್ಕೆ ಧಕ್ಕೆ ಬಾರದಂತೆ ನಡೆದುಕೊಂಡು ಸಂಘವನ್ನು ಅಭಿವೃದ್ಧಿಪಡಿಸಲು ಸಹಕರಿಸುವೆ ಎಂದು ಹೇಳಿದರು.
ಈ ಸಂದರ್ಭ ನಿರ್ದೇಶಕರಾದ ಎಲ್.ಎಲಿಜಾ, ಜೆ.ಲೋಕೇಶ್ ಗೌಡ, ಜಿ.ಡಿ.ಸುಮಂತ್, ಪಿ.ಎಲ್.ಪಂಚಲಿಂಗೇಗೌಡ, ಕೆ.ಪ್ರಸನ್ನ ಕುಮಾರ್, ಪಿ.ರಾಜು, ಎನ್.ಮಂಜುನಾಥ್, ಪಿ.ತೇಜಸ್ವಿ, ಸಿದ್ದಪ್ಪಾಜಿಚಾರಿ, ಎಸ್.ಆರ್.ಗೋಪಾಲೇಗೌಡ, ಎಸ್.ಪ್ರಸಾದ್ ಕುಮಾರ್, ಬಿ.ಸೋಮನಾಯಕ, ಬಿ.ಆರ್.ಅನುರಾಧ, ಸಿ.ಮಂಗಳ ಇನ್ನಿತರರು ಉಪಸ್ಥಿತರಿದ್ದರು.
