--Ads--

ಧರ್ಮ,ಆಚರಣೆಗಳನ್ನು ಪರಸ್ಪರರು ಗೌರವಿಸಬೇಕು : ಬಿಜೆಪಿ ಜಿಲ್ಲಾಧ್ಯಕ್ಷ ಸೀಕಲ್ ರಾಮಚಂದ್ರಗೌಡ 

On: March 5, 2026 2:12 PM
Follow ಮಾಡಿ
--Ads--

Whatsapp Channel

Join Now

Telegram Group

Join Now

ವಿಜಯ ದರ್ಪಣ ನ್ಯೂಸ್…..

ಧರ್ಮ,ಆಚರಣೆಗಳನ್ನು ಪರಸ್ಪರರು ಗೌರವಿಸಬೇಕು : ಬಿಜೆಪಿ ಜಿಲ್ಲಾಧ್ಯಕ್ಷ ಸೀಕಲ್ ರಾಮಚಂದ್ರಗೌಡ 

ಶಿಡ್ಲಘಟ್ಟ : ಇತರರ ಧರ್ಮ,ಆಚರಣೆಗಳನ್ನು ಪರಸ್ಪರರು ಗೌರವಿಸಬೇಕು ಆಗಲೆ ಸಮಾಜದಲ್ಲಿ ಸಾಮರಸ್ಯ ಮೂಡಿ ನಿರೀಕ್ಷೆಯಂತೆ ಅಭಿವೃದ್ದಿ ಸಾಧ್ಯವಾಗಲಿದೆ ಸುಖ ಶಾಂತಿ ನೆಮ್ಮದಿಯ ಬದುಕು ನಮ್ಮೆಲ್ಲರದ್ದಾಗಲಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಸೀಕಲ್ ರಾಮಚಂದ್ರಗೌಡ ತಿಳಿಸಿದರು.

ನಗರದ ಮಯೂರ ವೃತ್ತದ ಬಿಜೆಪಿ ಸೇವಾ ಸೌಧದ ಕಚೇರಿಯಲ್ಲಿ ರಂಜಾನ್ ಪ್ರಯುಕ್ತ ಮುಸ್ಲಿಂ ಕುಟುಂಬಗಳಿಗೆ ದಿನಸಿ ಕಿಟ್ ವಿತರಿಸಿ ಅವರು ಮಾತನಾಡಿದರು.

ಕಳೆದ ಹಲವು ವರ್ಷಗಳಿಂದಲೂ ರಂಜಾನ್ ತಿಂಗಳಲ್ಲಿ ಮುಸ್ಲಿಂ ಕುಟುಂಬಗಳಿಗೆ ದಿನಸಿ ಕಿಟ್ ವಿತರಿಸಿಕೊಂಡು ಬರುವ ಪರಿಪಾಠ ಬೆಳೆಸಿಕೊಂಡಿದ್ದು ಈ ವರ್ಷವೂ ಸಹ ದಿನಸಿ ಕಿಟ್ ವಿತರಿಸುತ್ತಿದ್ದೇವೆ ಎಲ್ಲರೂ ಸಹ ದಿನಸಿ ಕಿಟ್ ಪಡೆದು ರಂಜಾನ್ ಹಬ್ಬವನ್ನು ಸಂತಸದಿಂದ ಆಚರಿಸಬೇಕು ಎಂದು ಹೇಳಿದರು.

ಹಬ್ಬ ಹರಿದಿನಗಳನ್ನು ಎಲ್ಲರೂ ಕೂಡ ಸಾಮರಸ್ಯದಿಂದ ಆಚರಿಸಬೇಕು ಎಂದ ಅವರು ರಂಜಾನ್ ಹಬ್ಬಕ್ಕೆ ಮುಸ್ಲಿಂ ಕುಟುಂಬಗಳಿಗೆ ಹಾಗೂ ಯುಗಾದಿ ಹಬ್ಬಕ್ಕೆ ಹಿಂದೂ ಬಂಧುಗಳ ಕುಟುಂಬಗಳಿಗೆ ದಿನಸಿ ಕಿಟ್ ವಿತರಿಸುವ ಉದ್ದೇಶವಿದ್ದು ಹಬ್ಬಕ್ಕೂ ಮುಂಚೆ ವಿತರಿಸಲಾಗುವುದು ಎಂದರು.

ಯಾವುದೇ ಹಬ್ಬ ಹರಿದಿನಗಳಿಗೂ ಅದರದ್ದೇ ಆದ ಮಹತ್ವ ಸಂಪ್ರದಾಯವಿದ್ದು ಎಲ್ಲರೂ ಸೌಹಾರ್ಧತೆಯಿಂದ ಹಬ್ಬಗಳನ್ನು ಆಚರಿಸಬೇಕೆಂದು ಕೋರಿದರು.

೫೦೦ ಕ್ಕೂ ಹೆಚ್ಚು ಮುಸ್ಲಿಂ ಕುಟುಂಬಗಳಿಗೆ ದಿನಸಿ ಕಿಟ್ ವಿತರಿಸಲಾಯಿತು ,ಇನ್ನಷ್ಟು ಕುಟುಂಬಗಳಿಗೆ ವತರಿಸಲಿದ್ದೇವೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಟ್ರೈಲೈಪ್ ಆಸ್ಪತ್ರೆಯ ಡಾ.ಶಫೀಕ್,
ಗ್ರಾಮಾಂತರ ಮಂಡಲ ಅದ್ಯಕ್ಷ ಸೀಕಲ್ ಆನಂದಗೌಡ, ನರೇಶ್ ,ಕಂಬದಹಳ್ಳಿ ಸುರೇಂದ್ರಗೌಡ, ಸಂಜೀವಪ್ಪ, ಕೊತ್ತನೂರು ಜಗದೀಶ್, ಪುರುಷೋತ್ತಮ್ ಮುಂತಾದವರು ಹಾಜರಿದ್ದರು.

WhatsApp

Join Now

Telegram

Join Now

Instagram

Join Now