ಜಾನಪದ ನೃತ್ಯ ಮತ್ತು ಸಂಸ್ಕೃತಿಗಳ ಹಿನ್ನೆಲೆಯಲ್ಲಿ ಭಾರತದ ಒಟ್ಟು ಸ್ವರೂಪವನ್ನು ಅವಲೋಕಿಸಬೇಕು: ಡಾ. ಶಿವಚಿತ್ತಪ್ಪ
ವಿಜಯ ದರ್ಪಣ ನ್ಯೂಸ್…..
ಜಾನಪದ ನೃತ್ಯ ಮತ್ತು ಸಂಸ್ಕೃತಿಗಳ ಹಿನ್ನೆಲೆಯಲ್ಲಿ ಭಾರತದ ಒಟ್ಟು ಸ್ವರೂಪವನ್ನು ಅವಲೋಕಿಸಬೇಕು: ಡಾ. ಶಿವಚಿತ್ತಪ್ಪ

ಜಾನಪದದಲ್ಲಿ ಮಿಳಿತವಾಗಿರುವ ಮೌಲ್ಯಗಳು ಆಧುನಿಕತೆಯ ಪ್ರಭಾವದಿಂದ ಮೌಲಿಕತೆ ಕಳೆದುಕೊಳ್ಳುತ್ತಿವೆ. ಜಾನಪದ ನೃತ್ಯ ಮತ್ತು ಸಂಸ್ಕೃತಿಗಳ ಹಿನ್ನೆಲೆಯಲ್ಲಿ ಭಾರತದ ಒಟ್ಟು ಸ್ವರೂಪವನ್ನು ಅವಲೋಕಿಸಬೇಕಾದ ಅವಶ್ಯಕತೆಯಿದೆ ಎಂದು ಮಂಡ್ಯ ವಿಶ್ವವಿದ್ಯಾಲಯದ ಕುಲಪತಿ ಡಾ. ಶಿವಚಿತ್ತಪ್ಪ ಅಭಿಪ್ರಾಯಪಟ್ಟರು.
ಅವರು ಕೃಷ್ಣಾಪುರದೊಡ್ಡಿಯ ಕೆ.ಎಸ್. ಮುದ್ದಪ್ಪ ಸ್ಮಾರಕ ಟ್ರಸ್ಟ್ನ ಅಧೀನ ಸಂಸ್ಥೆ ಇಂಡಿಯನ್ ಫೋಕ್ಲೋರ್ ರೀಸರ್ಚರ್ಸ್ ಆರ್ಗನೈಸೇಷನ್ (Iಈಖಔ) ಮತ್ತು ಕರ್ನಾಟಕ ರಾಜ್ಯ ಡಾ. ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶನ ಕಲೆಗಳ ವಿಶ್ವವಿದ್ಯಾಲಯ ಮೈಸೂರು ಸಹಯೋಗದಲ್ಲಿ ಜಾನಪದ ರಂಗಭೂಮಿ ಪೌರಾಣಿಕ ಮತ್ತು ಮೌಖಿಕ ಪರಂಪರೆ ಕುರಿತ ರಾಷ್ಟಿçÃಯ ವಿಚಾರ ಸಂಕಿರಣ ಉದ್ಘಾಟಸಿ ಮಾತನಾಡಿದರು.
ಪೂರ್ಣಪ್ರಮಾಣದಲ್ಲಿ ಜಾನಪದವನ್ನು ಅವಲೋಕಿಸುವಾಗ ಎಲ್ಲ ಭಾಷೆಗಳಲ್ಲಿನ ನೈತಿಕಸ್ಥಿತಿ ಒಂದೇ ತೆರನಾಗಿದ್ದು ಒಂದರೊಳಗೊAದು ಬೆರೆತಿರುವುದು ಗಮನಿಸಬೇಕಾದ ವಿಚಾರ. ಬಾಲ್ಯದ ದಿನಗಳಲ್ಲಿ ಆ ನೆಲೆಯಲ್ಲಿ ನಾವು ಆಲೋಚನೆ ಮಾಡುತ್ತಿದ್ದು, ದಿನಕಳೆದಂತೆ ನಮ್ಮ ನಮ್ಮಲ್ಲೇ ಗೋಡೆಗಳ ನಿರ್ಮಾಣವಾಗಲು ಆರಂಭವಾಯಿತು ಎಂದು ವಿಷಾಧಿಸಿದರು.
ಕಾರ್ಯಕ್ರಮದ ಅತಿಥಿಗಳಾಗಿ ಪಾಲ್ಗೊಂಡ ಉಡುಪಿಯ ವೈಟ್ ಲೋಟಸ್‌ನ ವ್ಯವಸ್ಥಾಪಕ ನಿರ್ದೇಶಕ ಅಜಯ್ ಪುರುಷೋತ್ತಮ ಶೆಟ್ಟಿ ಮಾತನಾಡಿ, ಜಗತ್ತಿನ ವಿವಿಧ ದೇಶಗಳಲ್ಲಿ ಪ್ರವಾಸ ಮಾಡುತ್ತ, ಅಲ್ಲಿನ ಜಾನಪದದ ಬಗೆಗಿನ ಕಾಳಜಿಯನ್ನು ಗಮನಿಸಿದಾಗ ನಮ್ಮ ಪಾರಂಪರಿಕ ವಸ್ತು ವಿಷಯಗಳನ್ನು ಸಂರಕ್ಷಿಸಬೇಕಾದ ಅವಶ್ಯಕತೆಯಿದೆ ಎಂಬುದನ್ನು ಮನಗಂಡಿರುವೆ. ಈ ಹಿನ್ನೆಲೆಯಲ್ಲಿ ಕರ್ನಾಟಕದ ಹಲವು ಪ್ರದೇಶಗಳಲ್ಲಿ ಈ ನಿಟ್ಟಿನಲ್ಲಿ ಕೆಲಸ ಮಾಡುವ ಆಲೋಚನೆಯಲ್ಲಿದ್ದೇನೆ ಎಂದರು.
ಬೆಂಗಳೂರು ವಿ.ವಿ.ದ ರಾಮನಗರ ಸ್ನಾತಕೋತ್ತರ ಕೇಂದ್ರದ ನಿರ್ದೇಶಕ ಡಾ. ಎಸ್. ಗಂಗಾಧರ್ ಮಾತನಾಡಿ, ರಾಘವಾಂಕನ ಹರಿಶ್ಚಂದ್ರ ಕಾವ್ಯದ ಹಿನ್ನೆಲೆಯಲ್ಲಿ ನೈತಿಕತೆ ಮತ್ತು ತಾಯ್ತನದ ಬಗ್ಗೆ ತಿಳಿಸುತ್ತ, ಪಾತಿವ್ರತ್ಯದ ಬಗ್ಗೆ ಚರ್ಚಿಸುವಾಗ ಅಹಲ್ಯೆಯನ್ನು ಯಾವ ನೆಲೆಯಲ್ಲಿ ನೋಡಬೇಕೆಂದು ಪ್ರಶ್ನಿಸಿದರು. ಮಹಾಭಾರತದ ಕೃಷ್ಣನ ಬಗ್ಗೆ ಮಾತನಾಡಿ, ಪಾಂಡವರು ಮತ್ತು ಕೌರವರ ಹುಟ್ಟಿನ ಬಗ್ಗೆ ವಿವರಿಸಿ ವಿಚಾರವಂತರು, ಪ್ರಾಮಾಣಿಕರು, ನೀತಿವಂತರು ಯಾರೋ ಅವರ ಪರ ಶ್ರೀಕೃಷ್ಣ ನಿಲ್ಲುತ್ತಾನೆಯೇ ಹೊರತು, ಅವರ ಹುಟ್ಟಿನ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳುವುದಿಲ್ಲ ಎಂದರು.
ಇಫ್ರೊ ಜಾನಪದ ಮಹಾವಿದ್ಯಾಲಯದ ಶೈಕ್ಷಣಿಕ ನಿರ್ದೇಶಕ ಪ್ರೊ. ವ.ನಂ. ಶಿವರಾಮು ಜಾನಪದದಲ್ಲಿನ ನಂಬಿಕೆ ಮೂಢನಂಬಿಕೆಗಳಿಗೆ ಹೊರತಾಗಿ ಅನ್ಯ ಶಿಸ್ತುಗಳ ಜೊತೆಗೆ ತೌಲನಿಕ ಅಧ್ಯಯನ ನಡೆಯಬೇಕಾದ ಅವಶ್ಯಕತೆಯಿದೆ. ಈ ಹಿನ್ನೆಲೆಯಲ್ಲಿ ವೈದ್ಯರು, ಖಗೋಳ ಶಾಸ್ತçಜ್ಞರು, ಮನೋವಿಜ್ಞಾನಿಗಳು ಹೀಗೆ ಜನಸಮುದಾಯದ ವಿವಿಧ ಮಾನವಿಕ ಶಾಖೆಗಳೊಡನೆ ಚರ್ಚೆ ನಡೆಯಬೇಕಾದ ಅವಶ್ಯಕತೆಯನ್ನು ಒತ್ತಿ ಹೇಳಿದರು.
ಕೇರಳ ಕಣ್ಣೂರಿನ ನಿವೃತ್ತ ಪ್ರಾಂಶುಪಾಲ ಡಾ. ರಥಿ ತಂಪಟ್ಟಿ ಸಣ್ಣ ಸಣ್ಣ ವಿಷಯಗಳೆನಿಸುವ ವಿಚಾರಗಳಲ್ಲಿ ಬಹುತ್ವ ಅಡಗಿರುತ್ತದೆ. ಉದಾಹರಣೆಗೆ ಸ್ನಾನವನ್ನು ಕುರಿತು ಅಧ್ಯಯನ ನಡೆಸಿದರೆ ವಿಪುಲ ಮಾಹಿತಿಗಳು ಲಭ್ಯವಾಗಬಲ್ಲವು, ಸ್ನಾನದಲ್ಲಿ ಹದಿನಾಲ್ಕು ಬಗೆಯ ಸ್ನಾನಗಳಿವೆ. ಪ್ರತಿಯೊಂದಕ್ಕೂ ತನ್ನದೇ ಹಿನ್ನೆಲೆಯಿದೆ ಎಂದು ಹೇಳಿದರು.

ಇಫ್ರೊ ಸಂಸ್ಥಾಪಕ ಅಧ್ಯಕ್ಷ ಡ್ರವಿಡಿಯನ್ ಯೂನಿವರ್ಸಿಟಿಯ ಡಾ. ಎಂ.ಎನ್. ವೆಂಕಟೇಶ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಇಫ್ರೊ ಅಧ್ಯಕ್ಷ ಡಾ. ಗೋವಿಂದವರ್ಮರಾಜ ಅಧ್ಯಕ್ಷತೆ ವಹಿಸಿದ್ದರು. ಇಫ್ರೊ ಪ್ರಧಾನ ಕಾರ್ಯದರ್ಶಿ ಡಾ. ಎಂ. ಬೈರೇಗೌಡ ಇಫ್ರೊ ಮತ್ತು ಕೆ.ಎಸ್.ಎಂ. ಟ್ರಸ್ಟ್ನ ಕಾರ್ಯಗಳನ್ನು ವಿವರಿಸಿದರು.
ಇದೇ ಸಂದರ್ಭದಲ್ಲಿ ಚನ್ನಪಟ್ಟಣ ಸರ್ಕಾರಿ ಪದವಿ ಕಾಲೇಜಿನ ಹಿಂದಿ ಪ್ರಾಧ್ಯಾಪಕ ಪ್ರಭು ಉಪಾಸೆ ಅವರನ್ನು ಇಫ್ರೊ ಪರವಾಗಿ ಸನ್ಮಾನಿಸಲಾಯಿತು. ಕೇರಳ ಜಾನಪದ ಅಕಾಡೆಮೆ ಸೆಕ್ರೆಟರಿ ಡಾ. ಎ.ವಿ. ಅಜಯ್ ಕುಮಾರ್, ತೆಲುಗು ಜಾನಪದ ಗಾಯಕಿ ಸರಳ ಧರ್ಮಾವರಂ, ಚಿತ್ರದುರ್ಗ ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಡಾ. ಬಿ.ಎಂ. ಗುರುನಾಥ್, ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಬಿ.ಟಿ. ದಿನೇಶ್ ಬಿಳಗುಂಬ ವೇದಿಕೆಯಲ್ಲಿದ್ದರು.
ಕೇರಳ, ಆಂಧ್ರಪ್ರದೇಶ, ತಮಿಳುನಾಡು, ಕರ್ನಾಟಕ, ತೆಲಂಗಾಣ, ಮಹಾರಾಷ್ಟçದ ಅರವತ್ತಕ್ಕೂ ಹೆಚ್ಚು ಮಂದಿ ಸಂಶೋಧಕರು ಪಾಲ್ಗೊಂಡಿದ್ದರು.