ವಿಜಯ ದರ್ಪಣ ನ್ಯೂಸ್…..
ಮುದ್ದುಶ್ರೀ ದಿಬ್ಬದಲ್ಲಿ ಜಾನಪದ ರಾಷ್ಟ್ರೀಯ ವಿಚಾರ ಸಂಕಿರಣ

ಕೃಷ್ಣಾಪುರದೊಡ್ಡಿಯ ಕೆ.ಎಸ್. ಮುದ್ದಪ್ಪ ಸ್ಮಾರಕ ಟ್ರಸ್ಟ್ ಅಧೀನ ಸಂಸ್ಥೆ ಇಂಡಿಯನ್ ಫೋಕ್ಲೋರ್ ರೀಸರ್ಚರ್ಸ್ ಆರ್ಗನೈಸೇಷನ್ ಮತ್ತು ಕರ್ನಾಟಕ ರಾಜ್ಯ ಡಾ. ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶನ ಕಲೆಗಳ ವಿಶ್ವವಿದ್ಯಾಲಯ ಮೈಸೂರು ಸಹಯೋಗದಲ್ಲಿ ಜಾನಪದ ರಂಗಭೂಮಿ ಪೌರಾಣಿಕ ಮತ್ತು ಮೌಖಿಕ ಪರಂಪರೆ ಕುರಿತು 28,29 ಜುಲೈ 2025 ಎರಡು ದಿನಗಳ ರಾಷ್ಟ್ರೀಯ ಜಾನಪದ ವಿಚಾರ ಸಂಕಿರಣವನ್ನು ಹಮ್ಮಿಕೊಂಡಿದೆ. ಕೆರೆಮೇಗಳದೊಡ್ಡಿಯ ಮುದ್ದುಶ್ರೀ ದಿಬ್ಬದಲ್ಲಿ 28ರಂದು ಬೆಳಗ್ಗೆ 10.30ಕ್ಕೆ ಕಾರ್ಯಕ್ರಮ ಉದ್ಘಾಟನಾ ಸಮಾರಂಭವಿದೆ.
ಇಫ್ರೊ ಸಂಸ್ಥಾಪಕ ಅಧ್ಯಕ್ಷ ಡ್ರವಿಡಿಯನ್ ಯೂನಿವರ್ಸಿಟಿಯ ಡಾ. ಎಂ.ಎನ್. ವೆಂಕಟೇಶ್ ಪ್ರಾಸ್ತಾವಿಕವಾಗಿ ಮಾತನಾಡುವರು. ಕೇರಳ ಕಣ್ಣೂರು ವಿವಿ ಜಾನಪದ ವಿಭಾಗದ ನಿವೃತ್ತ ಮುಖ್ಯಸ್ಥ ಇಫ್ರೊ ಅಧ್ಯಕ್ಷ ಡಾ. ಗೋವಿಂದ ವರ್ಮ ರಾಜ ಅಧ್ಯಕ್ಷತೆ ವಹಿಸುವರು. ಇಫ್ರೊ ಪ್ರಧಾನ ಕಾರ್ಯದರ್ಶಿ ಡಾ. ಎಂ. ಬೈರೇಗೌಡ ಇಫ್ರೊ ಮತ್ತು ಕೆ.ಎಸ್.ಎಂ. ಟ್ರಸ್ಟ್ ನ ಕಾರ್ಯಗಳನ್ನು ವಿವರಿಸುವರು.
ಮಂಡ್ಯ ವಿಶ್ವವಿದ್ಯಾಲಯದ ಕುಲಪತಿಗಳಾದ ಪ್ರೊ. ಕೆ. ಶಿವಚಿತ್ತಯ್ಯ ವಿಚಾರ ಸಂಕಿರಣ ಉದ್ಘಾಟನೆ ನೆರವೇರಿಸುವರು. ಕೆ.ಎಸ್.ಜಿ.ಎಚ್.ನ ಗೌರವಾನ್ವಿತ ಕುಲಪತಿಗಳಾದ ಪ್ರೊ. ನಾಗೇಶ್ ವಿ. ಬೆಟ್ಟಕೋಟೆ, ಮುಂಬೈ ಲೋಕ ಕಲಾ ಪರಿಷತ್ ನಿರ್ದೇಶಕ ಪ್ರಕಾಶ್ ಕಾಡ್ಗೆ, ಉಡುಪಿಯ ವೈಟ್ ಲೋಟಸ್ ವ್ಯವಸ್ಥಾಪಕ ನಿರ್ದೇಶಕ ಅಜಯ್ ಪುರುಷೋತ್ತಮ್, ರಾಮನಗರ ಪಿ.ಜಿ. ಸೆಂಟರ್‌ನ ನಿರ್ದೇಶಕ ಡಾ. ಎಸ್. ಗಂಗಾಧರ್ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು.
ಕೇರಳ ಜಾನಪದ ಅಕಾಡೆಮೆ ಸೆಕ್ರೆಟರಿ ಡಾ. ಎ.ವಿ. ಅಜಯ್ ಕುಮಾರ್, ಇಫ್ರೊ ಜಾನಪದ ಮಹಾವಿದ್ಯಾಲಯದ ಶೈಕ್ಷಣಿಕ ನಿರ್ದೇಶಕ ಪ್ರೊ. ವ.ನಂ. ಶಿವರಾಮು, ಕರ್ನಾಟಕ ಜಾನಪದ ವಿವಿಯ ಡಾ. ಚಂದ್ರಪ್ಪ ಸೊಬಟ್ಟಿ, ಚಿತ್ರದುರ್ಗ ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಡಾ. ಬಿ.ಎಂ. ಗುರುನಾಥ್, ಹಿಂದಿ ಪ್ರಾಧ್ಯಾಪಕ ಪ್ರಭು ಉಪಾಸೆ, ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಬಿ.ಟಿ. ದಿನೇಶ್ ಬಿಳಗುಂಬ ಅತಿಥಿಗಳಾಗಿ ಭಾಗವಹಿಸುವರು.
ನಿವೃತ್ತ ಪ್ರಾಂಶುಪಾಲೆ ಡಾ. ರೆತಿ ತಂಪಟ್ಟಿ, ಜಾನಪದ ಗಾಯಕಿ ಸರಳ ಧರ್ಮಾವರಂ ವಿಶೇಷ ಆಹ್ವಾನಿತರಾಗಿ ಉಪಸ್ಥಿತರಿರುವರು. ಕೇರಳ, ಆಂಧ್ರಪ್ರದೇಶ, ತಮಿಳುನಾಡು, ಕರ್ನಾಟಕ, ತೆಲಂಗಾಣ, ಮಹಾರಾಷ್ಟçದ ಅರವತ್ತಕ್ಕೂ ಹೆಚ್ಚು ಮಂದಿ ಸಂಶೋಧಕರು, ವಿದ್ವಾಂಸರು ಪ್ರಬಂಧ ಮಂಡಿಸುವರು.
29ನೇ ಜುಲೈ 2025ರ ಸಂಜೆ 3 ಗಂಟೆಗೆ ಮಧುರೈ ಕಾಮರಾಜ್ ವಿಶ್ವವಿದ್ಯಾಲಯದ ಡಾ. ಸಿರಿಲ್ ಜಸ್ಟಿನ್ ಸೆಲ್ವರಾಜ್ ಸಮಾರೋಪ ಭಾಷಣ ಮಾಡುವರು ಎಂದು ಕೆ.ಎಸ್.ಎಂ. ಟ್ರಸ್ಟ್ ಪ್ರಕಟಣೆಯಲ್ಲಿ ತಿಳಿಸಿದೆ.