ಅಮಿತ್ ಶಾ ನೇತೃತ್ವದಲ್ಲಿ ಕಳೆದೊಂದು ವರ್ಷದಲ್ಲಿ 10 ಲಕ್ಷ ಕೆ.ಜಿ ಮಾದಕ ದ್ರವ್ಯಗಳನ್ನು ನಾಶಪಡಿಸಿದ ಎನ್‌ಸಿಬಿ.

ವಿಜಯ ದರ್ಪಣ ನ್ಯೂಸ್ 

ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಅಮಿತ್ ಶಾರವರು ಸೋಮವಾರ ‘ಮಾದಕದ್ರವ್ಯ ಸಾಗಾಣಿಕೆ ಮತ್ತು ರಾಷ್ಟ್ರೀಯ ಭದ್ರತೆ’ ಸಂಬಂಧಿತ ಪ್ರಾದೇಶಿಕ ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದರು. ಅಮಿತ್ ಶಾರವರ ಅಧ್ಯಕ್ಷತೆಯಲ್ಲಿ ನಡೆದ ಸಮ್ಮೇಳನದಲ್ಲಿ, ದೇಶದ ವಿವಿಧ ಭಾಗಗಳ, ಎಲ್ಲಾ ರಾಜ್ಯಗಳ ಮಾದಕವಸ್ತು ವಿರೋಧಿ ಕಾರ್ಯಪಡೆಯ ಸಮನ್ವಯದೊಂದಿಗೆ ಎನ್‌ಸಿಬಿ️ 1.44 ಲ️ಕ್ಷ ಕೆಜಿಗೂ ಹೆಚ್ಚಿನ ಡ್ರಗ್ಸ್ ನಾಶಪಡಿಸಿತು, ಇದು ಇದುವರೆಗೆ ಒಂದೇ ದಿನದಲ್ಲಿ ನಾಶಪಡಿಸಿದ ಅತಿ ಹೆಚ್ಚು ಮಾದಕದ್ರವ್ಯ ಎಂಬ ದಾಖಲೆ ಬರೆಯಿತು. ಕಳೆದ ವರ್ಷದಿಂದ ಇಲ್ಲಿಯವರೆಗೆ 10 ಲ️ಕ್ಷ ಕೆಜಿಗೂ ಅಧಿಕ, ಸುಮಾರು12.000  ಕೋಟಿ ರೂ. ಮೌಲ್ಯದ  ಮಾದಕ ದ್ರವ್ಯವನ್ನು ನಾಶಪಡಿಸಿದೆ.

ಜಾಗತಿಕ ಮಟ್ಟದಲ್ಲಿ ಭಾರತಕ್ಕೆ ಹೊಸ ಗುರುತನ್ನು ನೀಡುತ್ತಿರುವ ಶಾ, ಮಾದಕವಸ್ತು ವ್ಯಾಪಾರವು ರಾಷ್ಟ್ರೀಯ ಭದ್ರತೆಯ ಸಮಸ್ಯೆಯಾಗಿದ್ದು, ಕೇಂದ್ರ ಮತ್ತು ರಾಜ್ಯಗಳ ನಡುವೆ ಸಮನ್ವಯ ತುಂಬಾ ಅಗತ್ಯ ಎಂದು ಸ್ಪಷ್ಟವಾಗಿ ನಂಬುತ್ತಾರೆ. ಪ್ರಧಾನಿ ನರೇಂದ್ರ ಮೋದಿಯವರ ಮಾದಕ ದ್ರವ್ಯ ಮುಕ್ತ ಭಾರತದ ಕನಸನ್ನು ನನಸು ಮಾಡುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಿರುವ ಅಮಿತ್ ಶಾ ಅವರ ಮಾರ್ಗದರ್ಶನದಲ್ಲಿ ಗೃಹ ಸಚಿವಾಲ️ಯವು ಮಾದಕ ದ್ರವ್ಯ ದಂಧೆಗೆ ಕಡಿವಾಣ ಹಾಕಲು ಶೂನ್ಯ ಸಹಿಷ್ಣು ನೀತಿಯನ್ನು ಅಳವಡಿಸಿಕೊಂಡಿದೆ.

ಇದರ ಪರಿಣಾಮವಾಗಿ, 2013 ರಿಂದ ಮಾದಕವಸ್ತು ವಶಪಡಿಸಿಕೊಳ್ಳುವಿಕೆಯು ದುಪ್ಪಟ್ಟಾಗಿದೆ. ಕಳೆದ 9 ವರ್ಷಗಳಲ್ಲಿ  ವಶಪಡಿಸಿಕೊಂಡ ಮಾದಕವಸ್ತುಗಳ ಸಂಖ್ಯೆ ಸುಮಾರು 100% ರಷ್ಟು ಹೆಚ್ಚಿದ್ದರೆ, ಮಾದಕವಸ್ತು ಕಳ್ಳಸಾಗಣೆದಾರರ ವಿರುದ್ಧ 181% ಹೆಚ್ಚು ಪ್ರಕರಣಗಳು ದಾಖಲಾಗಿವೆ ಮತ್ತು ಕಳ್ಳಸಾಗಣೆದಾರರ ಬಂಧನಗಳು 296% ಹೆಚ್ಚಾಗಿದೆ. ಮಾದಕವಸ್ತು ವ್ಯಾಪಾರವನ್ನು ಬೇರುಸಹಿತ ಕಿತ್ತೊಗೆಯುವ ಸಲುವಾಗಿ, ಶಾ ಅವರ ಮಾರ್ಗದರ್ಶನದಲ್ಲಿ, ಗೃಹ ಸಚಿವಾಲ️ಯವು ಒಂದೆಡೆ ರಾಷ್ಟ್ರೀಯ ನಾರ್ಕೋ ಕೋಆರ್ಡಿನೇಷನ್ ಪೋರ್ಟಲ್ (ಎನ್‌ಸಿಒಆರ್‌ಡಿ) ಅನ್ನು ಸ್ಥಾಪಿಸಿದ್ದರೆ ಮತ್ತು ಮತ್ತೊಂದೆಡೆ ಪ್ರತಿ ರಾಜ್ಯ. ಪೊಲೀಸ್ ಇಲಾಖೆಯಲ್ಲಿ ಮಾದಕವಸ್ತು ವಿರೋಧಿ ಕಾರ್ಯಪಡೆಯನ್ನು ರಚಿಸಿತು.

ಭಾರತದ ರಾಜಕೀಯದಲ್ಲಿ ಮರುವ್ಯಾಖ್ಯಾನ ಬರೆಯುತ್ತಿರುವ ಶಾ ಅವರ ಸಮರ್ಥ ಮಾರ್ಗದರ್ಶನದಲ್ಲಿ, ಗುಪ್ತಚರ ಸಂಸ್ಥೆಗಳು ಎಲ್ಲಾ ಹಣಕಾಸಿನ ದಾಖಲೆಗಳನ್ನು ಪ್ರತ್ಯೇಕವಾಗಿ ವಿಶ್ಲೇಷಿಸಿದ ನಂತರ ಹಣಕಾಸು ಸಂಬಂಧಪಟ್ಟ ತನಿಖೆಗಳು ಮತ್ತು ಕಳ್ಳಸಾಗಣೆದಾರರ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳುವುದು ಹೆಚ್ಚಾಗಿದೆ. 2022 ರಲ್ಲಿ, ಎನ್‌ಸಿಬಿ️ ಅಂತಹ 27 ಪ್ರಕರಣಗಳಲ್ಲಿ ಹಣಕಾಸು ತನಿಖೆ ನಡೆಸಿ, ಅದರಲ್ಲಿ 15.98.37.784 ರೂ ಮೌಲ️್ಯದ ಆಸ್ತಿಯನ್ನು ವಶಪಡಿಸಿಕೊಂಡಿತು. ಡಿಇಎ, ಎಎಫ್‌ಪಿ, ಎನ್‌ಸಿಎ, ಆರ್‌ಸಿಎಂಪಿ ಮುಂತಾದ ಅಂತಾರಾಷ್ಟ್ರೀಯ ಏಜೆನ್ಸಿಗಳ ಸಮನ್ವಯದಲ್ಲಿ ಅಂತಾರಾಷ್ಟ್ರೀಯ ಡ್ರಗ್ ಮಾಫಿಯಾ ನಿಯಂತ್ರಣಕ್ಕೆ ಕ್ಷಿಪ್ರ ಕೆಲ️ಸ ಮಾಡಲಾಗುತ್ತಿದೆ. ಅಲ್ಲದೇ 44  ದೇಶಗಳೊಂದಿಗೆ ಈ ವಿಷಯದ ಬಗ್ಗೆ ದ್ವಿಪಕ್ಷೀಯ ತಿಳುವಳಿಕಾ ಒಪ್ಪಂದಗಳಿಗೆ ಸಹಿ ಹಾಕಲಾಗಿದೆ. ದೇಶದ 372 ಜಿಲ್ಲೆಗಳಲ್ಲಿ ಮಾದಕದ್ರವ್ಯ ನಾಶ ಮುಕ್ತಿ ಅಭಿಯಾನದಡಿ 8000 ಕ್ಕೂ ಹೆಚ್ಚು ಯುವ ಸ್ವಯಂಸೇವಕರ ಮೂಲ️ಕ ಜಾಗೃತಿ ಮೂಡಿಸಲಾಗುತ್ತಿದ್ದು, ಇದುವರೆಗೆ 3 ಕೋಟಿಗೂ ಹೆಚ್ಚು ಯುವಕರು ಹಾಗೂ 2 ಕೋಟಿಗೂ ಹೆಚ್ಚು ಮಹಿಳೆಯರನ್ನು ತಲುಪಲಾಗಿದೆ.

ಮಾದಕ ವ್ಯಸನವು ವ್ಯಕ್ತಿ, ಸಮಾಜ, ರಾಷ್ಟ್ರ ಮತ್ತು ಇಡೀ ಜಗತ್ತಿಗೆ ಹಾನಿಕಾರಕ ಎಂಬುದು ಶಾರವರ ಬಲ️ವಾದ ಅಭಿಪ್ರಾಯ. ಇದನ್ನು ಬೇಗ ನಿಯಂತ್ರಿಸದಿದ್ದರೆ ಹೆಚ್ಚು ಹಾನಿಯುಂಟಾಗುತ್ತದೆ. ಇದರ ವ್ಯಸನವು ಯುವಕರನ್ನು ಸಮಾಜಕ್ಕೆ ಹೊರೆಯನ್ನಾಗಿ ಮಾಡುತ್ತದೆ ಮತ್ತು ಅದರ ವ್ಯವಹಾರದಿಂದ ಬರುವ ಆದಾಯವು ಭಯೋತ್ಪಾದನೆ ಯಂತಹ ಸಮಸ್ಯೆಗಳನ್ನು ಬಲ️ಪಡಿಸುತ್ತದೆ. ಸ್ವಾತಂತ್ರ‍್ಯೋತ್ಸವದ ಈ ಅಮೃತ ಕಾಲ️ದಲ್ಲಿ ಮೋದಿ-ಶಾ ಜೋಡಿಯ ಶೂನ್ಯ ಸಹಿಷ್ಣುತೆಯ ನೀತಿಯನ್ನು ಅಳವಡಿಸಿಕೊಂಡು, ತ್ರಿಕೋನ ತಂತ್ರದಡಿಯಲ್ಲಿ ‘ನಶ ಮುಕ್ತ ಭಾರತ’ ಎಂಬ ಕರೆಯು ನಿಜವಾಗುತ್ತಿದೆ.