ವಿಜಯ ದರ್ಪಣ ನ್ಯೂಸ್…..
ಟ್ರಂಪ್ ಮತ್ತು ಪುಟಿನ್
ದೂರವಾಣಿ ಸಂಭಾಷಣೆ……..

ಅಮೆರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಸೋಮವಾರ ತಡರಾತ್ರಿ ದೂರವಾಣಿ ಸಂಭಾಷಣೆ ನಡೆಸಿದ್ದಾರೆ. ಇಬ್ಬರು ಕ್ರೂರಿಗಳು, ಸರ್ವಾಧಿಕಾರಿ ಮನೋಭಾವದವರು, ವಿಶ್ವದ ಬಲಿಷ್ಠ ಸೈನಿಕ ಶಕ್ತಿಯ ನಾಯಕರು, ವಿಶ್ವದ ಇಂದಿನ ಅತ್ಯಂತ ಆತಂಕಕಾರಿ ಪರಿಸ್ಥಿತಿಯಲ್ಲಿ ಹೇಗೆ ಮಾತುಕತೆ ನಡೆಸಿರಬಹುದು ಎಂಬುದನ್ನು ಕಾಲ್ಪನಿಕವಾಗಿ, ನನ್ನ ತಾಯಿ ಭಾಷೆಯಲ್ಲಿ, ಹೀಗೆ ಭಾವನಾ ರೂಪದಲ್ಲಿ ವ್ಯಕ್ತಪಡಿಸುತ್ತಿದ್ದೇನೆ.
ಈ ಮಾತುಗಳು ಅವರಿಬ್ಬರೂ ಆಡಿರಬಹುದು ಎನ್ನುವ ಕಲ್ಪನೆಗೆ ಮಾತ್ರ ಸೀಮಿತವಾಗಿದೆ. ಕೆಟ್ಟ ಪದಗಳಿಗೆ ಕ್ಷಮೆ ಇರಲಿ. ಡೊನಾಲ್ಡ್ ಟ್ರಂಪ್ ಮಾತು ಕೆಲವೊಮ್ಮೆ ಅಶ್ಲೀಲವಾಗಿರುತ್ತದೆ.
ದೂರವಾಣಿ ರಿಂಗ್ ಆಗುತ್ತದೆ. ಪುಟಿನ್ ಕರೆ ಸ್ವೀಕರಿಸುತ್ತಾರೆ.
ಡೊನಾಲ್ಡ್ ಟ್ರಂಪ್ :
Hi Mr. Putin, How are you ?
ಪುಟಿನ್ :
Hi Mr. Don, I am fine. What about you.
ಟ್ರಂಪ್ :
Ya Ya, I M too good, Enjoying..
ಪುಟಿನ್ :
ನೀವೇನೋ ಎಂಜಾಯ್ ಮಾಡುತ್ತಿರುವಿರಿ. ಆದರೆ ನಿಮ್ಮ ಆಕ್ರಮಣದಿಂದ ಇರಾನಿನ ಜನ ಸಾಯುತ್ತಿದ್ದಾರೆ.
ಡೊನಾಲ್ಡ್ ಟ್ರಂಪ್ : ಬಾಸ್ಟರ್ಡ್ ಖಮೇನಿ ನನ್ನ ಮಾತು ಕೇಳಲೇ ಇಲ್ಲ. ಎಷ್ಟು ಬಾರಿ ಎಚ್ಚರಿಕೆ ಕೊಟ್ಟೆ. ನಿರ್ಲಕ್ಷಿಸಿ ಬಿಟ್ಟ. ದುರಹಂಕಾರಿ, ಸರ್ವಾಧಿಕಾರಿ, ಮತಾಂಧ. ಅದಕ್ಕೆ ಉಡಾಯಿಸಿಬಿಟ್ಟೆ.
ಪುಟಿನ್ :
ತಪ್ಪು ಮಾಡಿದಿರಿ ಟ್ರಂಪ್. ನಿಮ್ಮದು ಅತಿಯಾಯಿತು. ವೆನಿಜುಲಾ ದೇಶದ ಅಧ್ಯಕ್ಷನನ್ನೇ ನೀವು ಅಕ್ರಮವಾಗಿ ಕಿಡ್ನ್ಯಾಪ್ ಮಾಡಿದಿರಿ. ಈಗ ಇನ್ನೊಂದು ಸಾರ್ವಭೌಮ ದೇಶ ಇರಾನ್ ಸರ್ವೋಚ್ಚ ನಾಯಕನನ್ನು ಕೊಂದಿದ್ದೀರಿ. ಇದು ಅನ್ಯಾಯ. ಅಂತರರಾಷ್ಟ್ರೀಯ ಕಾನೂನುಗಳನ್ನು ಮುರಿದಿದ್ದೀರಿ. ನಿಮ್ಮನ್ನೂ ಜನ ಕೆಟ್ಟ ಪದಗಳಿಂದ ನಿಂದಿಸುತ್ತಿದ್ದಾರೆ.
ಟ್ರಂಪ್ :
ನೀವೇನು ಮಹಾ ಸಾಚಾ. ಅನಾವಶ್ಯಕವಾಗಿ ಪಕ್ಕದ ಉಕ್ರೇನ್ ಮೇಲೆ ದಾಳಿ ಮಾಡುತ್ತಿಲ್ಲವೇ. ನಿಮಗೆ ಇದನ್ನು ಕೇಳಲು ಯಾವ ನೈತಿಕತೆ ಇದೆ. ನಮ್ಮ ರಕ್ಷಣೆಗೆ ನಾವು ಯುದ್ಧ ಮಾಡಲೇಬೇಕು.
ಪುಟಿನ್ :
ಉಕ್ರೇನ್ ನಮ್ಮ ಪ್ರದೇಶದ ಸಾರ್ವಭೌಮತ್ವಕ್ಕೆ ಧಕ್ಕೆ ತರುತ್ತಿತ್ತು. ಅದಕ್ಕೂ ನೀವೇ ಕಾರಣ. ನಮ್ಮ ಪಕ್ಕದ ಉಕ್ರೇನ್ ದೇಶವನ್ನು ನ್ಯಾಟೋಗೆ ಸೇರಿಸಿಕೊಳ್ಳಲು ನಿಮಗ್ಯಾವ ನೈತಿಕತೆ ಇದೆ. ಈಗ ಇರಾನ್ ಮೇಲಿನ ನಿಮ್ಮ ದಾಳಿ ಮೂರನೇ ಮಹಾಯುದ್ಧಕ್ಕೆ ಕಾರಣವಾಗಬಹುದು. ಅದಕ್ಕೆ ನೀವೇ ಹೊಣೆಯಾಗುತ್ತೀರಿ. ಚೈನಾ ಮತ್ತು ಉತ್ತರ ಕೊರಿಯಾದವರು ನನ್ನೊಂದಿಗೆ ನೇರ ಸಂಪರ್ಕದಲ್ಲಿದ್ದಾರೆ. ನಾವು ಸಂಯಮದಿಂದಿದ್ದೇವೆ. ಈ ಯುದ್ಧ ನಿಲ್ಲದಿದ್ದರೆ ನಮ್ಮ ಪ್ರವೇಶವು ಅನಿವಾರ್ಯವಾಗಬಹುದು.
ಟ್ರಂಪ್ :
ಮಿಸ್ಟರ್ ಪುಟಿನ್, ಏನು ನಮ್ಮನ್ನು ಹೆದರಿಸುತ್ತಿದ್ದೀರಾ ? ನೋಡಿ ನೀವು ಉಕ್ರೇನ್ ಮೇಲೆ ಅಕ್ರಮಣ ಮಾಡಿದಾಗ ನಾವು ನೇರವಾಗಿ ನಿಮ್ಮ ಮೇಲೆ ಯುದ್ಧ ಮಾಡಬಹುದಿತ್ತು. ಆದರೆ ಮಾಡಲಿಲ್ಲ. ಪರೋಕ್ಷವಾಗಿ ಉಕ್ರೇನ್ಗೆ ಬೆಂಬಲಿಸುತ್ತಿದ್ದೇವೆ. ಈಗ ನೀವು ಅಷ್ಟೇ. ನಮ್ಮ ನಡುವೆ ನೇರ ಯುದ್ಧ ಬೇಡ. ಅಂತರರಾಷ್ಟ್ರೀಯವಾಗಿ ಬೇಕಾದರೆ ಇರಾನ್ ಅನ್ನು ಬೆಂಬಲಿಸಿ. ಅಲ್ಲಿಂದ ಮುಂದೆ ಒಂದು ಹೆಜ್ಜೆಯೂ ನೀವು ಇಡುವಂತಿಲ್ಲ.
ಪುಟಿನ್ :
ಮಿಸ್ಟರ್ ಟ್ರಂಪ್, ನಿಮ್ಮ ಬೆದರಿಕೆಗೆ ನಾವು ಬಗ್ಗುವುದಿಲ್ಲ. ನೀವು ಹೇಳಿದಂತೆ ಕೇಳಲು ನಾವೇನು ನಿಮ್ಮ ಗುಲಾಮರಲ್ಲ. ನಮ್ಮ ಬಳಿ ನಿಮಗಿಂತ ಹೆಚ್ಚು ಅಣುಬಾಂಬ್, ಹೈಡ್ರೋಜನ್ ಬಾಂಬ್ ಇವೆ ಎಂಬುದನ್ನು ಮರೆಯದಿರಿ. ನಾವು ವೆನಿಜುಲಾ, ಇರಾನ್, ಇರಾಕ್, ಆಫ್ಘಾನಿಸ್ತಾನ ಅಲ್ಲ. ಅದೂ ಅಲ್ಲದೆ ಇದು 1945 ಅಲ್ಲ 2026 ನೆನಪಿರಲಿ.
ಟ್ರ್ಂಪ್ :
ಮಿಸ್ಟರ್ ಪುಟಿನ್, ಅಮೇರಿಕಾ ಇಡೀ ವಿಶ್ವದಲ್ಲಿ ಅತ್ಯಂತ ಬಲಶಾಲಿ ದೇಶ. ನಾವು ವಿಶ್ವದ ಯಾವ ಮೂಲೆಯನ್ನು ಬೇಕಾದರೂ ತಲುಪಬಹುದು. ನಮಗೆ ಎಂದು ಸೋಲಿಲ್ಲ. ನಾವು ಸೋಲಿಲ್ಲದ ಸರದಾರರು.
ಪುಟಿನ್ :
ನೀವು ಇತಿಹಾಸ ಮರೆತಿರಬಹುದು ಟ್ರಂಪ್. ವಿಯೆಟ್ನಾಂನಲ್ಲಿ ನಿಮಗಾದ ಸೋಲು ನಮಗೆ ತಿಳಿದಿಲ್ಲವೇ. ಇರಾಕ್, ಆಫ್ಘಾನಿಸ್ತಾನದಿಂದ ನೀವು ಪರಾರಿಯಾಗಿಲ್ಲವೇ. ಸಾಕು ಮಾಡಿ ನಿಮ್ಮ ಪ್ರತಾಪ. ಈಗ ತಕ್ಷಣ ಕದನ ವಿರಾಮ ಘೋಷಿಸಿ ಮಾತುಕತೆಗೆ ಬನ್ನಿ. ಇಲ್ಲದಿದ್ದರೆ ಎಲ್ಲರಿಗೂ ತುಂಬಾ ತೊಂದರೆಯಾಗುತ್ತದೆ.
ಟ್ರಂಪ್ :
ಮಿಸ್ಟರ್ ಪುಟಿನ್, ನೀವೇನು ಹೆಚ್ಚು ತಲೆ ಕೆಡಿಸಿಕೊಳ್ಳಬೇಡಿ. ನಿಮ್ಮ ಚೈನಾ ಮತ್ತು ಉತ್ತರ ಕೊರಿಯಾ ಸ್ನೇಹಿತರನ್ನು ಹೇಗೋ ಮ್ಯಾನೇಜ್ ಮಾಡಿ. ಇನ್ನು ಕೆಲವೇ ದಿನಗಳಲ್ಲಿ ಇರಾನ್ ನನ್ನ ಕೈಗೆ ಬರುತ್ತದೆ. ಅನಂತರ ನಾವಿಬ್ಬರು ಕುಳಿತು ಅಲ್ಲಿನ ಆಡಳಿತವನ್ನು ನಿರ್ಧರಿಸೋಣ. ನಿಮಗೆ ನಾನೇನು ಅನ್ಯಾಯ ಮಾಡುವುದಿಲ್ಲ.
ಪುಟಿನ್ :
ಅದೆಲ್ಲ ಬೇಡ. ಟ್ರಂಪ್. ಈಗ ತಕ್ಷಣ ಯುದ್ಧ ನಿಲ್ಲಿಸಿ
ಟ್ರಂಪ್ :
ನಾನು ನಿಲ್ಲಿಸಿದರು ಇಸ್ರೇಲ್ ನ ಬೆಂಜಮಿನ್ ನೆತನ್ಯಾಹು ನಿಲ್ಲಿಸುವುದಿಲ್ಲ. ಆತ ತುಂಬಾ ಅಕ್ರಮಣಕಾರಿ. ಈ ಬಾರಿ ಇರಾನ್ ಮತ್ತು ಲೆಬನಾನ್ ಸಂಪೂರ್ಣ ನಾಶ ಮಾಡುವುದು ಅವನ ಗುರಿ. ನೀವು ಮಧ್ಯಪ್ರವೇಶಸದಿರಿ.
ಪುಟಿನ್ :
ನೋಡಿ ಟ್ರಂಪ್ ಇಸ್ರೇಲ್ನ ಆ ಯಹೂದಿಗಳು ನಮಗೆ ಯಾವ ಲೆಕ್ಕ. ಆದರೆ ನಾವು ಅವರನ್ನು ಗೌರವಿಸುತ್ತೇವೆ. ಅವರ ಹೆಸರೇಳಿ ನೀವು ಯುದ್ಧ ಮುಂದುವರಿಸದಿರಿ. ಅವರಿಗೆ ಬೇಕಾದರೆ ನಾನು ಹೇಳುತ್ತೇನೆ. ನಮ್ಮ ವಿರೋಧ ಕಟ್ಟಿಕೊಂಡರೆ ಇಸ್ರೆಲ್ ಗೆ ಉಳಿಗಾಲವಿಲ್ಲ.
ಟ್ರಂಪ್ :
ಪುಟಿನ್ ದಯವಿಟ್ಟು ಕೇಳಿಸಿಕೊಳ್ಳಿ. ಇರಾನ್ ಆ ಭಾಗದಲ್ಲಿ ನಮ್ಮ ಹಿಡಿತಕ್ಕೆ ಬಂದರೆ ಇಡೀ ಮಧ್ಯಪ್ರಾಚ್ಯ ಅಂದರೆ ಪರ್ಷಿಯನ್ ಸಾಮ್ರಾಜ್ಯ ಹಾಗೂ ಅರಬ್ ಸಾಮ್ರಾಜ್ಯ ನಮ್ಮ ಹಿಡಿತಕ್ಕೆ ಬರುತ್ತದೆ. ನೀವು ಕೂಡ ನಮ್ಮೊಂದಿಗೆ ಕೈಜೋಡಿಸಿದರೆ ನಾವು ಇಡೀ ವಿಶ್ವವನ್ನೇ ಆಳಬಹುದು, ಯೋಚಿಸಿ.
ಪುಟಿನ್ :
ಮಿಸ್ಟರ್ ಟ್ರಂಪ್, ನೀವು ಅಷ್ಟೆಲ್ಲಾ ಕನಸು ಕಾಣಬೇಡಿರಿ. ಇದು ಕೃತಕ ಬುದ್ಧಿಮತ್ತೆಯ ಆಧುನಿಕ ಕಾಲ. ನಿಮಗಿರುವ ಅಧಿಕಾರ ಇನ್ನು ಕೇವಲ ಮೂರು ವರ್ಷಗಳು ಮಾತ್ರ. ಜಗತ್ತಿನ ಎರಡು ಬೃಹತ್ ಸಮುದಾಯಗಳ ನಡುವೆ ನೀವು ಆಟ ಆಡಬೇಡಿ. ವಿಶ್ವದಲ್ಲಿ ಶಾಂತಿ, ಸೌಹಾರ್ದತೆ ಮೂಡಿಸಲು ಪ್ರಯತ್ನಿಸಿ. ಈ ಕೂಡಲೇ ಯುದ್ಧ ನಿಲ್ಲಿಸಿ.
ಟ್ರಂಪ್ :
ಭೂತದ ಬಾಯಲ್ಲಿ ಬೈಬಲ್ ಕೇಳಿದಂತಾಯಿತು. ಪುಟಿನ್ ನಾನು ಯಾರ ಮಾತನ್ನು ಕೇಳುವುದಿಲ್ಲ. ಇರಾನ್ ಬೇಷರತ್ತಾಗಿ ಶರಣಾದರೆ ಅದನ್ನು ಕ್ಷಮಿಸಿ ನಮಗೆ ಇಷ್ಟವಾದ ವ್ಯಕ್ತಿಯನ್ನು ಅಧ್ಯಕ್ಷರನ್ನಾಗಿ ಮಾಡುತ್ತೇವೆ. ಅವರೊಂದಿಗೆ ಅನೇಕ ಒಪ್ಪಂದಗಳನ್ನು ಮಾಡಿಕೊಳ್ಳುತ್ತೇವೆ. ಇರಾನ್ ಪುನರ್ ರಚನೆಗೆ ಆರ್ಥಿಕವಾಗಿ ಸಹಾಯ ಮಾಡುತ್ತೇವೆ. ಈ ವಿಷಯವನ್ನು ನೀವು ತಿಳಿಸಿ ಸಂಧಾನ ಮಾಡಿ. ಶಾಂತಿ, ಸಹನೆ, ಸಂಯಮ ನನಗೆ ಗೊತ್ತಿಲ್ಲ. ನಾನು ಭಾರತ – ಪಾಕಿಸ್ತಾನ ಸೇರಿದಂತೆ ಎಷ್ಟೊಂದು ಯುದ್ಧ ತಡೆದಿದ್ದೇನೆ. ಆದರೆ ಆ ಲೋಫರ್ ನೊಬೆಲ್ ಶಾಂತಿ ಪ್ರಶಸ್ತಿಯವರು ನನ್ನ ಹೆಸರು ಪರಿಗಣಿಸಲೇ ಇಲ್ಲ. ಅದಕ್ಕೆ ಯಾಕಾಗಿ ಶಾಂತಿ ಸ್ಥಾಪಿಸಬೇಕು ಹೇಳಿ.
ಪುಟಿನ್ :
ನೊಬೆಲ್ ಶಾಂತಿ ಪ್ರಶಸ್ತಿ, ಅದೂ ನಿಮಗೆ, ಅ ಹ ಅ ಹಾ ಹಾ….
ನೋಡಿ ಟ್ರಂಪ್, ಕೊನೆಯದಾಗಿ ಹೇಳುತ್ತಿದ್ದೇನೆ. ಹಠ ಬಿಡಿ, ದುರಾಂಕಾರ ಬಿಡಿ, ಕೂಡಲೇ ಯುದ್ಧ ನಿಲ್ಲಿಸಿ. ಇಲ್ಲ ಮೂರನೇ ಮಹಾಯುದ್ಧಕ್ಕೆ ಸಿದ್ದರಾಗಿ. ಇನ್ನು ಹೆಚ್ಚು ದಿನ ನಿಮ್ಮ ಆಟ ನಡೆಯುವುದಿಲ್ಲ. ಇಡೀ ಮುಸ್ಲಿಂ ಸಮುದಾಯ ನಿಮ್ಮ ವಿರುದ್ಧ ಬೀಳಲಿದೆ. ಈಗಾಗಲೇ ಅರಬ್ ರಾಷ್ಟ್ರಗಳಿಗೆ ನಿಮ್ಮ ಮೇಲೆ ಅಸಮಾಧಾನ ಉಂಟಾಗಿದೆ. ಒಂದು ವೇಳೆ ನಾವು ಯುದ್ಧ ಪ್ರವೇಶಿಸಿದರೆ ಅವರು ನಮಗೆ ಬೆಂಬಲ ಕೊಡುತ್ತಾರೆ. ಇಡೀ ವಿಶ್ವ ರಣರಂಗವಾಗಿ ಜಗತ್ತು ನಾಶವಾಗಲಿದೆ ಯೋಚಿಸಿ.
ಟ್ರಂಪ್ :
ಮಿಸ್ಟರ್ ಪುಟಿನ್, ರಷ್ಯಾದವರಷ್ಟು ಕ್ರೂರಿಗಳು ಜಗತ್ತಿನಲ್ಲೇ ಇಲ್ಲ. ಅಂತಹುದರಲ್ಲಿ ಸ್ವಾತಂತ್ರ್ಯ, ಸಮಾನತೆಯ ಅಮೆರಿಕನ್ನರಿಗೆ ನೀವು ಬುದ್ಧಿ ಹೇಳುವುದೇ ! ಎಂತಹ ವಿಪರ್ಯಾಸ. ಆದರೂ ಚಿಂತೆ ಮಾಡಬೇಡಿ. ಬೇಗ ಯುಧ್ಧ ನಿಲ್ಲಿಸುತ್ತೇನೆ. ಏನಾದರೂ ತುರ್ತು ಇದ್ದರೆ ನನಗೆ ಕಾಲ್ ಮಾಡಿ. ನಮ್ಮ ಮೇಲೆ ಯುದ್ಧ ಮಾಡುವ ಯಾವುದೇ ಸಾಹಸ ಮಾಡಬೇಡಿ. All the best take care.
ಪುಟಿನ್ :
ನಿಮಗೂ ಒಳ್ಳೆಯದಾಗಲಿ. ಟೇಕ್ ಕೇರ್……
ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ – ಮನೆಗಳಲ್ಲಿ – ಮತಗಳಲ್ಲಿ – ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ,

ವಿವೇಕಾನಂದ. ಎಚ್. ಕೆ.
9663750451…….
9844013068…….






