--Ads--

ಹಿರಿಯ ಗಾಯಕಿ ಗೀತಾ ಪಟ್ನಾಯಕ್ ನಿಧನ  

On: February 16, 2026 2:57 AM
Follow ಮಾಡಿ
--Ads--

Whatsapp Channel

Join Now

Telegram Group

Join Now

ವಿಜಯ ದರ್ಪಣ ನ್ಯೂಸ್…..

ಹಿರಿಯ ಗಾಯಕಿ ಗೀತಾ ಪಟ್ನಾಯಕ್ ನಿಧನ

ಕಟಕ್: ಒಡಿಯಾ ಸಂಗೀತ ಲೋಕದಲ್ಲಿ ಹೆಸರುವಾಸಿಯಾಗಿದ್ದ, ಹಿರಿಯ ಗಾಯಕಿ ಗೀತಾ ಪಟ್ನಾಯಕ್ (73) ಅವರು ಭಾನುವಾರ (ಫೆ.15) ಸಂಜೆ ಇಲ್ಲಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಕಳೆದ ಕೆಲವು ದಿನಗಳಿಂದ ಬೈನ್ ಸ್ಟೋಕ್ ನಿಂದ ಬಳಲುತ್ತಿದ್ದ ಅವರು ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ ಎಂದು ಅವರ ಕುಟುಂಬದ ಮೂಲಗಳು ತಿಳಿಸಿವೆ.

ಕಳೆದ ಗುರುವಾರ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡಿದ್ದ ಸಂದರ್ಭದಲ್ಲಿ ಗೀತಾ ಅವರು ಹಠಾತ್ ಅನಾರೋಗ್ಯಕ್ಕೆ ಒಳಗಾಗಿದ್ದರು. ತಕ್ಷಣವೇ ಅವರನ್ನು ಭುವನೇಶ್ವರದ ಕ್ಯಾಪಿಟಲ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿನ ವೈದ್ಯಕೀಯ ತಪಾಸಣೆಯ ವೇಳೆ ಅವರಿಗೆ ಟ್ರೈನ್ ಸ್ಟೋಕ್ ಇರುವುದು ದೃಢಪಟ್ಟಿತ್ತು. ನಂತರ ಹೆಚ್ಚಿನ ಚಿಕಿತ್ಸೆಗಾಗಿ ಅವರನ್ನು ಕಟಕ್‌ನ ಖಾಸಗಿ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತಾದರೂ, ಭಾನುವಾರ (ಫೆ.15) ಸಂಜೆ ಅವರು ಮೃತಪಟ್ಟಿರುವುದಾಗಿ ಅವರ ಸಂಬಂಧಿ ಪ್ರದೋಷ್ ಪಟ್ನಾಯಕ್ ಮಾಹಿತಿ ನೀಡಿದ್ದಾರೆ.

ಸೋಮವಾರ ಬೆಳಿಗ್ಗೆ ಅವರ ಪಾರ್ಥಿವ ಶರೀರವನ್ನು ಕಟಕ್‌ನಲ್ಲಿರುವ ನಿವಾಸಕ್ಕೆ ತರಲಾಗುವುದು ಸಾರ್ವಜನಿಕರ ದರ್ಶನದ ನಂತರ ಅಂದೇ ಅವರ ಅಂತ್ಯಕ್ರಿಯೆ ನೆರವೇರಲಿದೆ. ದಶಕಗಳ ಕಾಲ ಒಡಿಯಾ ಚಿತ್ರರಂಗ ಮತ್ತು ಸುಗಮ ಸಂಗೀತದಲ್ಲಿ ಸಕ್ರಿಯರಾಗಿದ್ದ ಗೀತಾ ಪಟ್ನಾಯಕ್ ಅವರು ಅಲ್ಲಿನ ದಂತಕಥೆ ಅಕ್ಷಯ ಮೊಹಾಂತಿ ಅವರೊಂದಿಗೆ ಹಲವಾರು ಜನಪ್ರಿಯ ಗೀತೆಗಳನ್ನು ಹಾಡಿದ್ದರು. ವಿಶೇಷವಾಗಿ ‘ಜಜಾಬರ್‌’ ಚಿತ್ರದ ‘ಫುರ್ ಕಿನಾ ಉಡಿಗಾಲ ಬಾನಿ’ ಎಂಬ ಹಾಡು ಅವರಿಗೆ ದೊಡ್ಡ ಮಟ್ಟದ ಜನಪ್ರಿಯತೆ ತಂದುಕೊಟ್ಟಿತ್ತು. ಅವರ ನಿಧನಕ್ಕೆ ಒಡಿಶಾದ ಗಣ್ಯರು ಹಾಗೂ ಸಂಗೀತ ಪ್ರೇಮಿಗಳು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

WhatsApp

Join Now

Telegram

Join Now

Instagram

Join Now