ಅತ್ತಿಗೋಡು ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ಗಂಗಾಧರ್ ಉಪಾಧ್ಯಕ್ಷರಾಗಿ ರೇಖಾ ಚಂದ್ರಹಾಸ್.

ವಿಜಯ ದರ್ಪಣ ನ್ಯೂಸ್

ಮೈಸೂರು ಜಿಲ್ಲೆ  ಪಿರಿಯಾಪಟ್ಟಣ ತಾಲೂಕು ಜುಲೈ 28.

 ಪಿರಿಯಾಪಟ್ಟಣ ತಾಲೂಕಿನ ಅತ್ತಿಗೋಡು ಗ್ರಾಮ ಪಂಚಾಯಿತಿಯಲ್ಲಿ  ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಸ್ಥಾನಗಳಿಗೆ ಚುನಾವಣೆ ನಡೆಯಿತು.

ಅಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಗಂಗಾಧರ್ ಹಾಗೂ ಜೆಡಿಎಸ್ ಬೆಂಬಲಿತ ಅಭ್ಯರ್ಥಿ ಎಂ.ಎಂ ರುದ್ರೇಶ್ ನಾಮಪತ್ರ ಸಲ್ಲಿಸಿದ್ದು, ಗಂಗಾಧರ್ ರವರು 14 ಮತಗಳನ್ನು ಪಡೆಯುವ ಮೂಲಕ ಜಯಶೀಲರಾದರು. ಎಂ.ಎಂ ರುದ್ರೇಶ್ 5 ಮತಗಳನ್ನು ಪಡೆದು ಪರಾವಕೊಂಡರು. ಒಂದು ಮತ ತಿರಸ್ಕಾರಗೊಂಡಿದೆ.
ಉಪಾಧ್ಯಕ್ಷ ಸ್ಥಾನಕ್ಕೆ ಒಬ್ಬರೇ ನಾಮಪತ್ರ ಸಲ್ಲಿಸಿದ್ದರಿಂದ ಅವಿರೋಧವಾಗಿ ಕಾಂಗ್ರೆಸ್ ಬೆಂಬಲಿತ ರೇಖಾ ಚಂದ್ರಹಾಸ್ ಆಯ್ಕೆಯಾದರು.

ನೂತನ ಅಧ್ಯಕ್ಷ ಗಂಗಾಧರ್ ಮಾತನಾಡಿ ನನ್ನನ್ನು ಅಧ್ಯಕ್ಷರಾಗಿ ಆಯ್ಕೆ ಮಾಡಿದ ಎಲ್ಲಾ ಗ್ರಾಮ ಪಂಚಾಯತಿ ಸದಸ್ಯರಿಗೆ ಹಾಗೂ ಪಶು ಸಂಗೋಪನೆ ಸಚಿವ ಕೆ. ವೆಂಕಟೇಶ್ ರವರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು.

ಚುನಾವಣಾ ಅಧಿಕಾರಿಯಾಗಿ ಹಾರಂಗಿ ಇಲಾಖೆಯ ಎಇಇ ಲೋಹಿತ್ ಕಾರ್ಯನಿರ್ವಹಿಸಿದರು.
ಚುನಾವಣಾ ಫಲಿತಾಂಶ ಪ್ರಕಟವಾದ ಬಳಿಕ ಕಾಂಗ್ರೆಸ್ ಕಾರ್ಯಕರ್ತರು ಪಟಾಕಿ ಸಿಡಿಸಿ, ಸಿಹಿ ವಿತರಿಸಿ ಸಂಭ್ರಮಿಸಿದರು.

ಈ ಸಂದರ್ಭದಲ್ಲಿ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಮನು,ಗ್ರಾಮ ಪಂಚಾಯಿತಿ ಸದಸ್ಯರಾದ ಮಂಜುಳಾ, ಸರೋಜಮ್ಮ, ಶಾರದಮ್ಮ, ಶೇಖರ್, ಲಲಿತಾರಮೇಶ್, ಹರೀಶ್, ಮಲ್ಲೇಶ್, ಪ್ರೀತಿ, ಸರಸ್ವತಿ, ರಾಜೇಗೌಡ, ಗಾಯಿತ್ರಿ, ಲಕ್ಷ್ಮಿ, ಅಶೋಕ್, ಸೌಮ್ಯ, ಮುರಳಿಧರ್, ಸುಬ್ರಹ್ಮಣ್ಯ, ಬಸವರಾಜು, ಹಿರಿಯ ಹಿರಿಯ ಕಾಂಗ್ರೆಸ್ ಮುಖಂಡ ಹೊಲದಪ್ಪ, ಸರಸ್ವತಿ ಕಾರ್ಯದರ್ಶಿ ಶಿವಣ್ಣ ಇದ್ದರು.