ಬೈಲುಕುಪ್ಪೆ ಪೊಲೀಸರ ದಾಳಿ: 30 ಕೆ. ಜಿ. ಗಾಂಜಾ ವಶ ಆರೋಪಿಗಳ ಬಂಧನ.
ವಿಜಯ ದರ್ಪಣ ನ್ಯೂಸ್,
ಮೈಸೂರು ಜಿಲ್ಲೆ ಆಗಸ್ಟ್ 08
ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ತಾಲೂಕಿನ ಬೈಲುಕುಪ್ಪೆಯ 1ನೇ ಟಿಬೆಟ್ ಕ್ಯಾಂಪಿನ ಟಿ. ಸಿ. ಎಸ್. ಆವರಣದಲ್ಲಿ ಮಂಗಳವಾರ ಮುಂಜಾನೆ ಖಚಿತ ಮಾಹಿತಿ ಮೇರೆಗೆ ಸಾರ್ವಜನಿಕರಿಗೆ ಅಕ್ರಮವಾಗಿ ಮಾರಾಟ ಮಾಡುವ ಉದ್ದೇಶದಿಂದ ತಂದಿರುವ ಕೇರಳ ರಾಜ್ಯದ ವಾಹನ ನೋಂದಣಿ ಸಂಖ್ಯೆ ಕೆ ಎಲ್ 58 ಬಿ 2983 ಸಿಪ್ಟ್ ಕಾರಿನಲ್ಲಿದ್ದ 30 ಕೆ.ಜಿ. ಗಾಂಜಾ ಹಾಗೂ ಕಾರನ್ನು ದಾಳಿ ನಡೆಸಿ ವಶಪಡಿಸಿಕೊಂಡಿದ್ದೇವೆ ಎಂದು ಮೈಸೂರು ಪೊಲೀಸ್ ಅಧೀಕ್ಷಕಿ ಶ್ರೀಮತಿ ಸೀಮಾ ಲಾಟ್ಕಾರ್ ಬೈಲುಕುಪ್ಪೆ ಪೊಲೀಸ್ ಠಾಣೆಯ ಪೊಲೀಸ್ ಮೈದಾನದಲ್ಲಿ ನಡೆಸಿದ ಸುದ್ದಿ ಗೋಷ್ಟಿಯಲ್ಲಿ ತಿಳಿಸಿದರು.
ಮುಂದಿನ ದಿನಗಳಲ್ಲಿ ಸಾರ್ವಜನಿಕರಲ್ಲಿ ಹಾಗೂ ಕಾಲೇಜುಗಳಲ್ಲಿ ಮಾದಕ ವಸ್ತುಗಳ ಬಗ್ಗೆ ಅಭಿಯಾನ ಹಮ್ಮಿಕೊಂಡು ಜಾಗೃತಿ ಮೂಡಿಸಲಾಗುವುದು ಎಂದರು.
ಆರೋಪಿಗಳಾದ ಒಡಿಸ್ಸಾ ರಾಜ್ಯದ ಬಿಕ್ರಂ ನಾಯಕ್, ಕುಶಾಲನಗರ ಇಂದಿರಾ ಬಡಾವಣೆಯ ನಯನ್ ದೀಪು , ಮಡಿಕೇರಿ ತಾಲೂಕು ಕಡಕದಾಳು ಗ್ರಾಮದ ಜಂಶೀರ್ , ಪಿರಿಯಪಟ್ಟಣ ತಾಲೂಕಿನ ಆಲನಹಳ್ಳಿ ಗ್ರಾಮದ ಅನಿಲ್ ಕುಮಾರ್, ಕೊಪ್ಪ ಗುಡ್ಡನಹಳ್ಳಿ ಗ್ರಾಮದ ಭರತ್ ಕುಮಾರ್ ರವರನ್ನು ಬಂಧಿಸಿದ್ದೇವೆ ಎಂದರು
ಸುದ್ದಿಗೋಷ್ಠಿಯಲ್ಲಿ ಹುಣಸೂರು ಡಿವೈಎಸ್ಪಿ ಮಹೇಶ್, ಬೈಲುಕೊಪ್ಪೆ ವೃತ್ತ ನಿರೀಕ್ಷಕ ಪ್ರಕಾಶ್, ಪಿಎಸ್ಐ ಅಜಯ್ ಕುಮಾರ್ ಉಪಸ್ಥಿತರಿದ್ದರು .
ಕಾರ್ಯಾಚರಣೆಯಲ್ಲಿ ಬೈಲುಕೊಪ್ಪ ಪೊಲೀಸ್ ಠಾಣೆಯ, ಪಿಎಸ್ಐ ಅಜಯ್ ಕುಮಾರ್ , ಅಪರಾಧ ವಿಭಾಗದ ಪಿಎಸ್ಐ ಮಾಲಿಂಗಯ್ಯ, ಸಿಬ್ಬಂದಿಗಳಾದ ಅಜಯ್ ಕುಮಾರ್, ಚೇತನ್ ಕುಮಾರ್,ಮುದ್ದುರಾಜ್, ಕುಮಾರಸ್ವಾಮಿ, ರವಿ, ವೀರೇಶ್ ಕೆ.ಹೆಮಹದೇವಪ್ಪ, ರವಿ ಕುಮಾರ್, ಸುರೇಶ್, ರಾಜೇಶ್ ಭಾಗವಹಿಸಿದ್ದರು.
–ರಾಮೇಗೌಡ ವರದಿಗಾರರು ಪಿರಿಯಾಪಟ್ಟಣ