ಮುಂಬೈನಲ್ಲಿ ಇಂದು ಇಂಡಿಯಾ ಗೇಟ್ ವೀಕ್ಷಣೆ ಮಾಡಿದ ಸಹಕಾರಿಗಳು

ಮುಂಬಯಿನಲ್ಲಿ ಇಂದು ಇಂಡಿಯಾ ಗೇಟ್ ವೀಕ್ಷಣೆ ಮಾಡಿದ ಸಹಕಾರಿಗಳು

ವಿಜಯ ದರ್ಪಣ ನ್ಯೂಸ್ 

ಮುಂಬಯಿ ನವೆಂಬರ್ 01

ಇಂದು ಮುಂಬೈನಲ್ಲಿ  ಸಹಕಾರಿಗಳು ಇಂಡಿಯಾ  ಗೇಟ್  ವೀಕ್ಷಣೆ ಮಾಡಿ ಸಂಭ್ರಮಿಸಿದರು 

ಬೆಂಗಳೂರು ಸಹಕಾರಿ ಹಾಲು ಒಕ್ಕೂಟದ ಸಹಯೋಗದಲ್ಲಿ ಹೈನುಗಾರಿಕೆ ಅಧ್ಯಯನ ಪ್ರವಾಸವನ್ನು ಕೈಗೊಂಡಿರುವ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲ್ಲೂಕಿನ ಸಹಕಾರ ಸಂಘಗಳ ಮುಖ್ಯ ಕಾರ್ಯನಿರ್ವಾಹಕರುಗಳು  ಇಂದು ಮುಂಬಯಿ ನಲ್ಲಿರುವ  ಹಲವು ಪ್ರೇಕ್ಷಣೀಯ ಮತ್ತು ಶೈಕ್ಷಣಿಕ ಸ್ಥಳಗಳನ್ನು ನೋಡಿದರು.

ಇದೇ ಸಂದರ್ಭದಲ್ಲಿ 68ನೇ ಕನ್ನಡ ರಾಜ್ಯೋತ್ಸವ ಆಚರಣೆ  ಅಂಗವಾಗಿ  ಕರ್ನಾಟಕ  ಏಕೀಕರಣಕ್ಕೆ ಶ್ರಮಿಸಿದವರೆಲ್ಲರಿಗೂ ನುಡಿ ನಮನಗಳನ್ನು ಸಲ್ಲಿಸಿದರು.

ಬೆಂಗಳೂರು ಸಹಕಾರಿ ಹಾಲು ಒಕ್ಕೂಟದ ವಿಸ್ತರಣಾಧಿಕಾರಿಗಳಾದ ವಿಜಯಕುಮಾರ್ ಅವರ ನೇತೃತ್ವದಲ್ಲಿ ಪ್ರವಾಸವನ್ನು ಕೈಗೊಂಡಿತ್ತು.