--Ads--

ಹೊಸಕೋಟೆಯಲ್ಲೂ ಹೂವಿನ ಮಾರುಕಟ್ಟೆ

On: March 13, 2026 5:27 PM
Follow ಮಾಡಿ
--Ads--

Whatsapp Channel

Join Now

Telegram Group

Join Now
ವಿಜಯ ದರ್ಪಣ ನ್ಯೂಸ್…..

ಹೊಸಕೋಟೆಯಲ್ಲೂ ಹೂವಿನ ಮಾರುಕಟ್ಟೆ

ಬೆಂಗಳೂರು: ಚಿಕ್ಕಬಳ್ಳಾಪುರದಲ್ಲಿ 20 ಎಕರೆ ಪ್ರದೇಶದಲ್ಲಿ ಸುಸಜ್ಜಿತ ಹೂವಿನ ಮಾರುಕಟ್ಟೆ ನಿರ್ಮಾಣಕ್ಕೆ ಅನುಮೋದನೆ ನೀಡಲಾಗಿದ್ದು, ಈ ಯೋಜನೆಯ ನಂತರದಲ್ಲಿ ಹೊಸಕೋಟೆಯಲ್ಲೂ ಹೂವಿನ ಮಾರುಕಟ್ಟೆ ನಿರ್ಮಾಣ ಬೇಡಿಕೆಯನ್ನು ಪರಿಗಣಿಸಲಾಗುವುದು ಎಂದು ಕಬ್ಬು ಅಭಿವೃದ್ಧಿ, ಸಕ್ಕರೆ, ಜವಳಿ ಹಾಗೂ ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ ಭರವಸೆ ನೀಡಿದ್ದಾರೆ.

ಶುಕ್ರವಾರ ವಿಧಾನಸಭೆಯಲ್ಲಿ ಪ್ರಶ್ನೋತ್ತರ ವೇಳೆಯಲ್ಲಿ ಶಾಸಕ ಶರತ್‌ಕುಮಾರ್‌ ಬಚ್ಚೇಗೌಡ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಚಿಕ್ಕಬಳ್ಳಾಪುರದಲ್ಲಿ ಹೂವಿನ ಮಾರುಕಟ್ಟೆಗೆ ಆರ್‌ಐಡಿಎಫ್‌ -31 ಯೋಜನೆ ಅಡಿಯಲ್ಲಿ 20 ಕೋಟಿ ರೂ. ಅನುದಾನ ಮಂಜೂರಾಗಿದ್ದು ಟೆಂಡರ್‌ ಪ್ರಕ್ರಿಯೆ ಜಾರಿಯಲ್ಲಿದೆ ಎಂದು ತಿಳಿಸಿದರು.

ಹೊಸಕೋಟೆ ತಾಲೂಕಿನಲ್ಲಿ ಒಟ್ಟು 25 ಎಕರೆ ಪ್ರದೇಶದಲ್ಲಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗೆ ಪ್ರಾಂಗಣ ನಿರ್ಮಾಣಕ್ಕೆ ಭೂಮಿ ಮಂಜೂರು ಮಾಡಲಾಗಿದೆ. ಸುಮಾರು 30 ಕೋಟಿ ರೂ. ವೆಚ್ಚದಲ್ಲಿ ಗೋದಾಮು, ಮುಚ್ಚು ಹರಾಜು ಕಟ್ಟೆ, ಆಡಳಿತ ಕಚೇರಿ, ಆರ್‌ಸಿಸಿ ಡ್ರೈನ್‌, ವಿದ್ಯುತ್‌ ಕಾಮಗಾರಿಗಳನ್ನು ಕೈಗೊಳ್ಳಲಾಗಿದ್ದು, ಪ್ರಗತಿಯಲ್ಲಿದೆ ಎಂದು ವಿವರಿಸಿದರು.

ಹೂವಿನ ಮಾರುಕಟ್ಟೆ ಅಭಿವೃದ್ಧಿಪಡಿಸಲು ಈಗಾಗಲೇ ಡಿಪಿಆರ್‌ ಪಡೆದಿದ್ದು, ಮಾರುಕಟ್ಟೆ ಪ್ರಾಂಗಣ ಅಭಿವೃದ್ಧಿ ನಂತರದಲ್ಲಿ ಹೂವು, ತರಕಾರಿ ಹಾಗೂ ಇತರ ಅಧಿಸೂಚಿತ ಕೃಷಿ ಉತ್ಪನ್ನಗಳ ವ್ಯಾಪಾರ ವಹಿವಾಟಿಗೆ ಪೂರಕ ಸೌಲಭ್ಯಗಳನ್ನು ಕಲ್ಪಿಸಲಾಗುವುದು ಎಂದು ವಿವರಿಸಿದರು.

&&&&&&&&&&&&&&&&&&&&&&&&&&
ಬಮೂಲ್ ಮಾಜಿ ಉಪಾಧ್ಯಕ್ಷ  ಇರಿಗೇನಹಳ್ಳಿ ಬಿ. ಶ್ರೀನಿವಾಸ್ ಅವರಿಗೆ ಪಿತೃ ವಿಯೋಗ 
ದೇವನಹಳ್ಳಿ : ಬೆಂಗಳೂರು ಸಹಕಾರ ಹಾಲು ಒಕ್ಕೂಟ ನಿಯಮಿತ (ಬಮೂಲ್) ಮಾಜಿ ಉಪಾಧ್ಯಕ್ಷ ಇರಿಗೇನಹಳ್ಳಿ ಬಿ. ಶ್ರೀನಿವಾಸ್  ಅವರ ತಂದೆ ಟಿ ಎ ಪಿ ಸಿ ಎಂ ಎಸ್ ಮಾಜಿ ನಿರ್ದೇಶಕ, ಜೆಡಿಎಸ್ ಹಿರಿಯ ಮುಖಂಡ ಟಿ.ಬೈಯಣ್ಣ ವಯೊಸಹಜ ಕಾಯಿಲೆಯಿಂದ ಬಳಲುತ್ತಿದ್ದ ಅವರು ನೆನ್ನೆ ಗುರುವಾರ  ರಾತ್ರಿ ನಿಧನರಾಗಿದ್ದಾರೆ.
ಮೃತರು  ಪುತ್ರ  ಇರಿಗೇನಹಳ್ಳಿ ಬಿ. ಶ್ರೀನಿವಾಸ್ , ಮೂವರು ಪುತ್ರಿಯರನ್ನು   ಹಾಗೂ ಅಪಾರ ಬಂಧು ಬಳಗ ಮಿತ್ರರನ್ನು ಅಗಲಿದ್ದಾರೆ. ವೃತ್ತಿಯಲ್ಲಿ ಕೃಷಿಕರಾಗಿದ್ದ ಅವರು  ದೇವನಹಳ್ಳಿ  ತಾಲೂಕು ವ್ಯವಸಾಯೋತ್ಪನ್ನಗಳ  ಮಾರಾಟ ಸಹಕಾರ ಸಂಘದ ನಿರ್ದೇಶಕರಾಗಿ ಕಾರ್ಯನರ್ವಹಿಸಿದ್ದರು. ಟಿ. ಬೈಯಣ್ಣ ಅವರಿಗೆ 96 ವರ್ಷ ವಯಸ್ಸಾಗಿತ್ತು.
ಮೃತರ ಅಂತಿಮ ವಿಧಿ ವಿಧಾನಗಳು  ಇಂದು ಶುಕ್ರವಾರ ಮಧ್ಯಾಹ್ನ 1  ಗಂಟೆಗೆ ಇರಿಗೇನಹಳ್ಳಿ ಗ್ರಾಮದ ರುದ್ರಭೂಮಿಯಲ್ಲಿ ನಡೆಯಿತು ಎಂದು ಕುಟುಂಬದ ಮೂಲಗಳಿಂದ ತಿಳಿದು ಬಂದಿದೆ.

WhatsApp

Join Now

Telegram

Join Now

Instagram

Join Now