ವಿಜಯ ದರ್ಪಣ ನ್ಯೂಸ್….
ಗೋವಾದಲ್ಲಿ ಕನ್ನಡಿಗರ 16ನೇ ಸಾಂಸ್ಕೃತಿಕ ಸಮ್ಮೇಳನ’: ಪ್ರೇಕ್ಷಕರನ್ನು ರಂಜಿಸಿದ ಕೊತ್ತನೂರು ಕಲಾಜ್ಯೋತಿ ಜಾನಪದ ಕಲಾ ತಂಡ

ಶಿಡ್ಲಘಟ್ಟ : ಗೋವಾದಲ್ಲಿ ನಡೆದ ‘ಕನ್ನಡಿಗರ 16ನೇ ಸಾಂಸ್ಕೃತಿಕ ಸಮ್ಮೇಳನ ‘ ದಲ್ಲಿ ಕೊತ್ತನೂರು ಕಲಾಜ್ಯೋತಿ ಜಾನಪದ ಕಲಾ ಸಂಸ್ಥೆಯ ಕಲಾವಿದರು ವೀರಗಸೆ ಕಲಾ ವೈಭವ ಕಾರ್ಯಕ್ರಮ ನಡೆಸಿಕೊಟ್ಟು ಸಭಿಕರ ಮನಗೆದ್ದಿದ್ದು ಕರುನಾಡಿನ ಕೀರ್ತಿಯನ್ನು ಗೋವಾದಲ್ಲೂ ಗಮನ ಸೆಳೆದಿದ್ದಾರೆ.
ಗೋವಾದ ಕರ್ಮಭೂಮಿ ಕನ್ನಡ ಸಂಘ, ಬೀಚೋಲಿಯಂ ಗೋವಾ, ಕರ್ನಾಟಕ ಗಡಿಪ್ರದೇಶ ಅಭಿವೃದ್ಧಿ ಪ್ರಾಧಿಕಾರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಶ್ರಯದಲ್ಲಿ ‘ಗೋವಾದಲ್ಲಿ ಕನ್ನಡಿಗರ 16ನೇ ಸಾಂಸ್ಕೃತಿಕ ಸಮ್ಮೇಳನ’ ಕಾರ್ಯಕ್ರಮ ಆಯೋಜಿಸಲಾಗಿತ್ತು.
ತಾಲ್ಲೂಕಿನ ಕೊತ್ತನೂರಿನ “ಕಲಾ ಜ್ಯೋತಿ ಜಾನಪದ ಕಲಾ ತಂಡದ ಗಂಗಾಧರ್” ಹಾಗು ತಂಡದವರು ವೀರಗಾಸೆ ಕಾರ್ಯಕ್ರಮ ನೀಡಿ ಪ್ರೇಕ್ಷಕರ ಮನ ಸೂರೆಗೊಂಡಿದ್ದಾರೆ.
ಕಾರ್ಯಕ್ರಮದಲ್ಲಿ ಉತ್ತಮ ಪ್ರದರ್ಶನ ನೀಡಿದ್ದಕ್ಕಾಗಿ ಕಾರ್ಯಕ್ರಮದ ಆಯೋಜಕರು ವೀರಗಾಸೆ ತಂಡದ ಎಲ್ಲರಿಗೂ “ಕರುನಾಡ ಪದ್ಮಶ್ರೀ ಪ್ರಶಸ್ತಿ” ನೀಡಿ ಗೌರವಿಸಿದ್ದಾರೆ.
ಕಾರ್ಯಕ್ರಮದಲ್ಲಿ ಗೋವಾ ಮುಖ್ಯಮಂತ್ರಿ ಡಾ.ಪ್ರಮೋದ್ ಸಾವಂತ್, ಕರ್ನಾಟಕ ಗಡಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸೋಮಣ್ಣ ಬೇವಿನ ಮರದ, ಚಟಸ್ಥಲ ಬ್ರಹ್ಮ ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿ, ಹಿರೇಮಠ ಉಕ್ಕೇರಿ ಮತ್ತಿತರರು ಪಾಲ್ಗೊಂಡಿದ್ದರು.










