ರಾಹುಲ್‌ಗಾಂಧಿ ಕಂಡುಹಿಡಿಯುವ ಬಂಗಾರ ಮೇಕಿಂಗ್ ಮೆಷಿನ್….
ವಿಜಯ ದರ್ಪಣ ನ್ಯೂಸ್
ರಾಹುಲ್‌ಗಾಂಧಿ ಕಂಡುಹಿಡಿಯುವ ಬಂಗಾರ ಮೇಕಿಂಗ್ ಮೆಷಿನ್….
ಆರೇಳು ವರ್ಷಗಳ ಹಿಂದಿನ ಮಾತು, ನೂರಾ ಮೂವತ್ತೇಳು ವರ್ಷದ ಇತಿಹಾಸವಿರುದ ಕಾಂಗ್ರೆಸ್ ಪಕ್ಷದ ಅನಭಿಷಿಕ್ತ ದೊರೆ ರಾಹುಲ್ ಗಾಂಧಿಯವರು ಒಂದು ಸಾರ್ವಜನಿಕ ಸಭೆಯಲ್ಲಿ ನಾನೊಂದು ಮೆಷಿನ್ ಕಂಡು ಹಿಡಿತೀನಿ. ಅದರಲ್ಲಿ ಈ ಕಡೆಯಿಂದ ಆಲೂಗೆಡ್ಡೆ ತುರುಕಿದರೆ ಆ ಕಡೆಯಿಂದ ಬಂಗಾರ ಬರುತ್ತೆ. ಎಲ್ರೂ ಅದನ್ನೇ ಮಾಡಿ ದುಡ್ಮೇಲ್ ದುಡ್ಡು, ದುಡ್ಮೇಲ್ ದುಡ್ಡು ಎಂದು ಹೇಳಿ ಚಪ್ಪಾಳೆ ಗಿಟ್ಟಿಸಿಕೊಂಡಿದ್ದರು. ಹೌದಲ್ಲಾ!!!! ಐಡಿಯಾ ಚೆನ್ನಾಗಿದೆ ಎಂದು ಒಂದಷ್ಟು ಜನ ರಾಹುಲ್ ಗಾಂಧಿಯವರಿಗೆ ಕೇಜಿಗಟ್ಟಲೇ ಆಲೂಗೆಡ್ಡೆ ಕಳಿಸಿಕೊಟ್ಟರು. ಉಲ್ಟಾ ಹೊಡೆದ ರಾಹುಲ್ ಅದು ನನ್ನ ಮಾತಲ್ಲ. ನರೇಂದ್ರ ಮೋದಿ ಜನಗಳಿಗೆ ಹಾಗೆ ಹೇಳಿ ಓಟ್ ಗಿಟ್ಟಿಸಿಕೊಂಡುಬಿಟ್ಟಿದ್ದಾರೆ. ಅದನ್ನ ನಾನೇ ಹೇಳಿದೆ ಅಂತ ಮಾಧ್ಯಮದವರು ಅಪಪ್ರಚಾರ ಮಾಡ್ತಿದ್ದಾರೆ ಎಂದು ಹೇಳಿ ತಾನು ಮೊಸರನ್ನು ತಿಂದು ಮೇಕೆ ಗಡ್ಡಕ್ಕೆ ಒಂದಿಷ್ಟನ್ನ ಬಳಿದಿದ್ದರು.
ತೀರಾ ಇತ್ತೀಚೆಗೆ ಬಡವರಷ್ಟೇ ಸೈನ್ಯ ಸೇರಿಕೊಳ್ಳೋದು. ಕೇವಲ ಪೆಕ್ಷನ್‌ಗೋಸ್ಕರ, ಕ್ಯಾಂಟೀನ್‌ನಲ್ಲಿ ಸಿಗುವ ಕಡಿಮೆ ಬೆಲೆಯ ವಸ್ತುಗಳಿಗಾಗಿ, ಸೇನಾ ಸೇವೆಯಿಂದ ನಿವೃತ್ತಿಯಾದಾಗ ಸಿಗುವ ಸವಲತ್ತುಗಳಿಗಾಗಿ ಕೆಲ ಜನರು ಸೇನೆ ಸೇರುತ್ತಿದ್ದಾರೆ ಎಂದು ಹೇಳಿದ್ದರು. ಲಕ್ಷಾಂತರ ಸೈನಿಕರಿಗೆ ಅವಮಾನ ಮಾಡಿದ್ದರು.
ಅವರಿಗಸ್ಟೇ ಅಲ್ಲ ಎಲ್ಲರಿಗೂ ತಿಳಿದಿರಲಿ ಎಷ್ಟೋ ಜನ ಶ್ರೀಮಂತರ ಮಕ್ಕಳು, ಕೊಡಗಿನ ವೀರರು ತಮ್ಮ ಮಕ್ಕಳು ಸೈನ್ಯ ಸೇರಲಿ, ದೇಶ ಸೇವೆ ಮಾಡಲಿ ಎಂದು ತಾವೇ ಮುತುವರ್ಜಿ ವಹಿಸಿ ಸೇನಾ ಆಫೀಸಿನ ಗೇಟ್‌ವರೆಗೂ ಬಿಟ್ಟು ಬರುತ್ತಾರೆ. ಸೈನಿಕರು ಸಮಸ್ಯೆಗಳಿಗೆ, ಎದುರಾಳಿಗೆ ಎದೆಕೊಟ್ಟು ನಿಲ್ಲುತ್ತಾರೆಯೇ ಹೊರತು ರಾಜಕೀಯ ನಾಯಿ ಕರು ಗಳಂತೆ ಬೆನ್ನು ತೋರಿಸುವುದಿಲ್ಲ.
ಕಾಂಗ್ರೆಸ್ ನಾಯಕರು, ಕಾಂಗ್ರೆಸ್ ಕಾರ್ಯಕರ್ತರು, ಕಾಂಗ್ರೆಸ್ ನಾಯಕರ ಬೂಟು ನೆಕ್ಕುವರಂತೂ ರಾಹುಲ್‌ಗಾಂಧಿಯನ್ನು ಬಿಟ್ಟುಕೊಡುವುದಿಲ್ಲ. ಬೇಡಾ ಅವರಿಗೆ ಅಪರಿಮಿತ ಪ್ರೀತಿ ಆತನ ಮೇಲೆ.
ಆದರೆ ನಮ್ಮಂಥ ಬಡ ಮತದಾರರಿಗೆ, ಪಾಮರರಿಗೆ ರಾಹುಲ್‌ಗಾಂಧಿ ಆಲೂಗೆಡ್ಡೆಯಿಂದ ಚಿನ್ನ ತೆಗೆಯುವ ಮೆಷಿನ್ ಕಂಡುಹಿಡಿಯುವವರೆಗೂ ಆತನು ಪ್ರಧಾನಮಂತ್ರಿ ಕುರ್ಚಿಯಲ್ಲಿ ಕುಳಿತುಕೊಳ್ಳುವುದನ್ನು ನೋಡಲು ಇಷ್ಟಪಡುವುದಿಲ್ಲ. ಹಾಗೆಯೇ ಸ್ವಿಸ್ ಬ್ಯಾಕ್‌ನಿಂದ ಲಕ್ಷಾಂತರ ಕೋಟಿ ಕೇಸರಿ ಹಣವನ್ನು ತಂದು ನಮ್ಮೆಲ್ಲರ ಬ್ಯಾಂಕ್ ಅಕೌಂಟಿಗೆ ಹದಿನೈದು ಲಕ್ಷ ಹಾಕುವವರೆಗೂ ನರೇಂದ್ರ ಮೋದಿಯನ್ನು ಪ್ರಧಾನಮಂತ್ರಿ ಹುದ್ದೆಯಿಂದ ಆಚೆ ಹೋಗುವುದಕ್ಕೆ ಬಿಡುವುದಿಲ್ಲ.
– ಬಿ.ಆರ್. ನರಸಿಂಹಮೂರ್ತಿ
– 9448174932