ಶೋಷಿತ ಸಮುದಾಯದ ಅಭಿವೃದ್ಧಿ ಗಾಗಿ ಕರ್ನಾಟಕ ಮಾದರ ಮಹಾಸಭಾವನ್ನು ಕಟ್ಟಿದ್ದೇವೆ: ಸಚಿವ ಕೆಹೆಚ್. ಮುನಿಯಪ್ಪ

ವಿಜಯ ದರ್ಪಣ ನ್ಯೂಸ್….

ಶೋಷಿತ ಸಮುದಾಯದ ಅಭಿವೃದ್ಧಿ ಗಾಗಿ ಕರ್ನಾಟಕ ಮಾದರ ಮಹಾಸಭಾವನ್ನು ಕಟ್ಟಿದ್ದೇವೆ: ಸಚಿವ ಕೆಹೆಚ್. ಮುನಿಯಪ್ಪ

ಬೆಳಗಾವಿ.25

ಕರ್ನಾಟಕ ಮಾದರ ಮಾಹಾಸಭಾ ವತಿಯಿಂದ ಆಯೋಜಿಸಿದ್ದ ಸಮುದಾಯದ ಮುಖಂಡರ ಸಭೆಯ ಕಾರ್ಯಕ್ರಮವನ್ನು ಉದ್ಘಾಟಿಸಿದ ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಸಚಿವ ಕೆಹೆಚ್. ಮುನಿಯಪ್ಪ‌ರವರು.ಬೆಳಗಾವಿಯ ಪ್ರೆಸಿಡೆನ್ಸಿ ಹೋಟಲ್ ಕ್ಲಬ್ ನಲ್ಲಿ ಆಯೋಜಿಸಿದ ಕಾರ್ಯಕ್ರಮದಲ್ಲಿ ಮಾತನಾಡಿದ ಸಚಿವರು ಕರ್ನಾಟಕ ಮಾದರ ಮಹಾಸಭಾ ಸಂಘವನ್ನು ಸ್ಥಾಪಿಸಿದ್ದು,

ನಂತರ ಮಾತನಾಡಿದ ಸಚಿವರು
ಶೋಷಿತ ವರ್ಗಗಳಲ್ಲಿ ಶೋಷಿತ ವಾಗಿರುವ ಸಮುದಾಯದ ಅಭಿವೃದ್ಧಿಗಾಗಿ ಈ ಕರ್ನಾಟಕ ಮಾದರ ಮಹಾಸಭಾವನ್ನು ಹುಟ್ಟು ಹಾಕಿದ್ದು ಇದರಲ್ಲಿ ಯಾವುದೇ ಪಕ್ಷಬೇದಭಾವವಿಲ್ಲದೆ ಎಲ್ಲಾ ಪಕ್ಷಗಳ ರಾಜ್ಯಮಟ್ಟದ ನಾಯಕಾರದ ಗೋವಿಂದ ಕಾರಜೋಳ,ರಮೇಶ್ ಜಿಗಜಿಣಿಗಿ,ಆರ್.ಬಿ.ತಿಮ್ಮಾಪುರ್, ಎಲ್.ಹನುಮಂತಯ್ಯ, ಹೆಚ್.ಆಂಜನೇಯ, ಚಂದ್ರಪ್ಪ ,ತಿಮ್ಮರಾಯಪ್ಪ ಮುಂತಾದ ನಾಯಕರು ಈ ಸಂಘದ ಸದಸ್ಯರಾಗಿದ್ದು ಇದರ ಮುಖ್ಯ ಉದ್ದೇಶ ಈ ಶೋಷಿತ ಸಮುದಾಯದ ಅಭಿವೃದ್ಧಿಗಾಗಿ ಈ‌ ಮಹಾ ಸಭಾದಲ್ಲಿ ಎಲ್ಲಾ ಸಂಘಟನೆಗಳು ದಲಿತ ಸಂಘರ್ಷ ಸಮಿತಿ,ಮಾದಿಗ ದಂಡೋರಾ,ಎಲ್ಲಾ ಹೋರಾಟ ಸಮಿತಿಗಳು ಇದರ ಸದಸ್ಯರಾಗಿದ್ದು ಇದರ ಮೂಲ ಉದ್ದೇಶ ಈ ಸಮುದಾಯದ ಅಭಿವೃದ್ಧಿ ಹಾಗೂ ಮಕ್ಕಳಿಗೆ ಉನ್ನತ ಮಟ್ಟದ ವಿದ್ಯಾಭ್ಯಾಸ ಹಾಗೂ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿಯನ್ನು ನೀಡಿ ಅವರನ್ನು ಮುಂದುವರೆದ ಸಮುದಾಯಗಳೊಂದಿಗೆ ಪ್ರೀತಿ ವಿಶ್ವಾಸ ದಿಂದ ಹೋಗಳು ತಯಾರುಮಾಡುವುದಾಗಿದ್ದು ಇವರೂ ಮುಂಚೂಣಿ ಸಮುದಾಯಗಳ ಸಮವಾಗಿ ಬೆಳೆಯಲು ಸಹಕಾರಿಯಾಗುತ್ತದೆ ಎಂದರು

ನಾವೆಲ್ಲರೂ ಸೇರಿ ಕಟ್ಟಿರುವ ಈ ಮಹಾಸಭಾ ದಲ್ಲಿ ಎಲ್ಲಾರೂ ಸದಸ್ಯರಾಗಿ ರ ನೊಂದಣಿ ಮಾಡಿಕೊಳ್ಳ ಬೇಕು ಮತ್ತು ರಾಜ್ಯದ ಎಲ್ಲಾ ಪ್ರತಿ ತಾಲ್ಲೂಕು ಮಟ್ಟದಲ್ಲಿ200 ರಿಂದ 500 ಕ್ಕೂ ಹೆಚ್ಚು ಸದಸ್ಯರು ನೊಂದಣಿ ಮಾಡಿಕೊಳ್ಳಬೇಕು

ಈ ನೊಂದಣಿ ಪ್ರಕ್ರಿಯೆಯು ಜನವರಿ 15 ರೊಳಗೆ ಮುಗಿಯಬೇಕು ಎಂದರು

ವೀರೇಶೈವ ಸಂಘ,ಒಕ್ಕಲಿಗರ ಸಂಘ,ಕುರಬ ಸಂಘ,ಈ ರೀತಿಯ ಲ್ಲಿ ನಮ್ಮ ಸಮುದಾಯದ ಸಂಘವು ಸಹಾ ಬಯಲಾ ಪ್ರಕಾರವೇ ರಚಿಸಿದ್ದು ಜಿಲ್ಲಾ ವಾರು 2 ರಿಂದ ಮೂರು ಜನರು ನಿರ್ದೇಶಕರಿದ್ದು, ಜಿಲ್ಲಾವಾರು ತಾಲ್ಲೂಕುವಾರು ಸಮಿತಿಗಳಲ್ಲಿ ಎರಡರಿಂದ ಮೂರು ಜನ ನಿರ್ದೇಶಕರನ್ನು ಒಳಗೊಂಡ ಒಂದು ಸಂಘವಾಗಿದ್ದು ಇದರ ಮೂಲ ಉದ್ದೇಶ ಶೋಷಿತ ಸಮುದಾಯದ ಅಭಿವೃದ್ಧಿ ಮತ್ತು ಮುಂದುವರೆದ ಸಮುದಾಯಗಳ ಜೊತೆ ಸರಿ ಸಮವಾಗಿ ನಡೆಯಬೇಕು ಎಂಬ ಮಹತ್ತರವಾದ ಯೋಜನೆಯಿಂದಾಗ ನಾವೆಲ್ಲರೂ ಈ ಮಾದರ ಮಹಾ ಸಭಾವನ್ನು ಕಟ್ಟಿದ್ದೇವೆ.

ಆಂಜನೇಯ ರವರ ನೇತೃತ್ವದಲ್ಲಿ ಅಂದು ಮುಖ್ಯಮಂತ್ರಿ ಸಿದ್ದರಾಮಯ್ಯ ರವರು ಬಾಬು ಜಗಜೀವನ್ ರಾಂ ರವರ ಸಂಶೋಧನಾ ಸಂಸ್ಥೆ ಗೆ 100 ಕೋಟಿ ರೂಗಳನ್ನು ಬಿಡುಗಡೆ ಮಾಡಿ ಬೆಂಗಳೂರಿನಲ್ಲಿ ಒಂದು ಭವ್ಯ ಸಂಶೋಧನಾ ಸಂಸ್ಥೆಯನ್ನು ಕಟ್ಟಿದ್ದು ಸಮುದಾಯದ ವಿದ್ಯಾರ್ಥಿಗಳಿಗೆ ಉನ್ನತ ಮಟ್ಟದ ವಿದ್ಯಾಭ್ಯಾಸ ವಾದ IAS,KAS,NEET ಹಾಗೂ ಇನ್ನಿತರೆ ಉನ್ನತ ವ್ಯಾಸಾಂಗಗಳಿಗೆ ನೆರವಾಗುವ ರೀತಿಯಲ್ಲಿ ನಿರ್ಮಿಸಿದ್ದು ಅದರ ಸದುಪಯೋಗ ಪಡಸಿಕೊಳ್ಳಲು ಸಹಕಾರಿಯಾಗುತ್ತದೆ ಎಂದರು.

ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿಕೆ.ಶಿವಕುಮಾರ್ ರವರ ನೇತೃತ್ವದ ನಮ್ಮ ಸರ್ಕಾರ ಪರಿಶಿಷ್ಟ ಜಾತಿಯವತಿಗೆ 1 ಕೋಟಿರೂಗಳಲ್ಲಿ ಗುತ್ತಿಗೆ ಕೆಲಸ ಮಾಡಿಸಲು(Contract ) ಆಧಿ ಜಾಂಭವ ಅಭಿವೃದ್ಧಿ ನಿಗಮದ ವತಿಯಿಂದ ಬಡ್ಡಿ ರಹಿತವಾಗಿ ಸಾಲ ವನ್ನು ನೀಡಿ ನಂತರ ಅವರು ಆ ಹಣವನ್ನು ಕಟ್ಟಲು ಸಹಕರಿಸಿದ್ದು ಈ ಮಹತ್ತರ ಯೋಜನೆಯಿಂದ ಸಣ್ಣ ಪ್ರಮಾಣದ ಗುತ್ತಿಗೆ ದಾರರು ಬೆಳವಣಿಗೆಯಾಗಲು ಸಹಕಾರಿಯಾಗುತ್ತದೆ ಎಂದರು.

ಈ ಸಂದರ್ಭದಲ್ಲಿ ಮಾಜಿ ಸಂಸದ ಬಿ ಎನ್.ಚಂದ್ರಪ್ಪ, ಜಿಎಸ್.ಮಂಜುನಾಥ, ಜಿಲ್ಲಾ ಪರಿಶಿಷ್ಟ ವರ್ಗದ ಅಧ್ಯಕ್ಷ ಹನಂತ ಬ್ಯಾಕೊಡ, ರಾಮಪ್ರಸಾದ್,ಹಾಗೂ ಮಹಿಳಾ ಮುಖಂಡರು ಹಾಗೂ ಸಮುದಾಯದ ಹಿರಿಯ ನಾಯಕರು ಉಪಸ್ಥಿತರಿದ್ದರು.