10ರಂದು ಅಬ್ಬಿಗೇರಿ ದಂಪತಿಯ 15 ಕೃತಿ ಲೋಕಾರ್ಪಣೆ

ವಿಜಯ ದರ್ಪಣ ನ್ಯೂಸ್ 

ಬೆಳಗಾವಿ: ಜಿಲ್ಲಾ ಲೇಖಕಿಯರ ಸಂಘ ಬೆಳಗಾವಿ ಹಾಗೂ ಲೋಕವಿದ್ಯಾ ಪ್ರಕಾಶನ ಸಂಕೇಶ್ವರ ಇವರ ಸಂಯುಕ್ತ ಆಶ್ರಯದಲ್ಲಿ ಉಪನ್ಯಾಸಕಿ, ಲೇಖಕಿ ಜಯಶ್ರೀ ಮತ್ತು ಜಯಪ್ರಕಾಶ ಅಬ್ಬಿಗೇರಿ ದಂಪತಿಗಳ 15 ಕೃತಿಗಳ ಲೋಕಾರ್ಪಣೆ ಸಮಾರಂಭ ಡಿಸೆಂಬರ್ 10ರಂದು ಬೆಳಿಗ್ಗೆ 10.30 ಗಂಟೆಗೆ ನಗರದ ಕನ್ನಡ ಸಾಹಿತ್ಯ ಭವನದಲ್ಲಿ ನಡೆಯಲಿದೆ.


ಉಪನ್ಯಾಸಕಿ, ಚಿಂತಕಿ, ಅಂಕಣಕಾರ್ತಿ, ಲೇಖಕಿ ಜಯಶ್ರೀ ಅಬ್ಬಿಗೇರಿ ಅವರ ನಿಮ್ಮನ್ನು ನೀವು ಯಶಸ್ವಿ ವ್ಯಕ್ತಿ ಎಂದು ಭಾವಿಸಿ, ಮೆಲ್ಲ ಮೆಲ್ಲ ಈ ಪ್ರೀತಿ ಮೆಲ್ಲುವಾ, ಜೀವನದಿ, ಜೀವ ನೀಡುವ ಜೀವ ಅಪಾಯದಲ್ಲಿದೆ, ವಚನ ವಾಹಿನಿ, ಸೋಲಿನ ಸುಳಿಯಲ್ಲಿ ಗೆಲುವಿನ ತುದಿ ಇದೆ, ಕುಂತರೂ ನಿಂತರೂ ನಿನ್ನದೇ ತುಂತುರು, ಹಬ್ಬ ಬಂತು ಹಬ್ಬ, ಸೋಲು ಒಪ್ಪಿಕೊಳ್ಳುವ ಮುನ್ನ ಕೊಂಚ ಪ್ರಶ್ನಿಸಿಕೊಳ್ಳಿ, ಮನೋಲ್ಲಾಸ ಭಾಗ-1, ಮನೋಲ್ಲಾಸ ಭಾಗ-2 ಹಾಗೂ ಹಾಸ್ಯ ಸಾಹಿತಿ ಜಯಪ್ರಕಾಶ ಅವರ ಶ್ರೀಮತಿಗಳ ಶೃಂಗಸಭೆಗಳು, ಬಾನುಲಿ ನಗೆ, ಹೃದಯವೀಣೆ ಮಿಡಿದಾಗ ಡಾ. ಸಿದ್ದನಗೌಡ ಪಾಟೀಲ ಕೃತಿಗಳ ಲೋಕಾರ್ಪಣೆ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.