--Ads--

2025 ರ ಸಾಲಿನ ಡಾ.ಸಿಸಿರಾ ಸಾಹಿತ್ಯ ಮತ್ತು ಸಾಂಸ್ಕೃತಿಕ ಸಂಘಟನಾ ಯುವ ಪ್ರಶಸ್ತಿಗೆ ಆಹ್ವಾನ

On: March 14, 2026 5:31 PM
Follow ಮಾಡಿ
--Ads--

Whatsapp Channel

Join Now

Telegram Group

Join Now
ವಿಜಯ ದರ್ಪಣ ನ್ಯೂಸ್…..

2025 ರ ಸಾಲಿನ ಡಾ.ಸಿಸಿರಾ ಸಾಹಿತ್ಯ ಮತ್ತು ಸಾಂಸ್ಕೃತಿಕ ಸಂಘಟನಾ ಯುವ ಪ್ರಶಸ್ತಿಗೆ ಆಹ್ವಾನ

ಬೆಂಗಳೂರು : ಸಾಹಿತಿ, ಪ್ರಾಧ್ಯಾಪಕ ಮತ್ತು ಸಾಂಸ್ಕೃತಿಕ ಸಂಘಟಕ, ಅವಿಭಜಿತ ಬೆಂಗಳೂರು ಗ್ರಾಮಾಂತರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷರ ಹೆಸರಿನಲ್ಲಿ ಅವರ ಸ್ನೇಹಿತರು, ಶಿಷ್ಯರು ಕೂಡಿ ಸ್ಥಾಪಿಸಿಕೊಂಡಿರುವ ಡಾ.ಸಿಸಿರಾ ಸ್ನೇಹ ಬಳಗ
ಕಳೆದ ಐದಾರು ವರ್ಷಗಳಿಂದ ಕೊಡಮಾಡುತ್ತಿರುವ ಡಾ.ಸಿಸಿರಾ ಯುವ ಸಾಹಿತಿ ಮತ್ತು ಯುವ ಸಂಘಟಕ ಪ್ರಶಸ್ತಿಗೆ ಈ ವರ್ಷವೂ ನೀಡುತ್ತಿದೆ. ನಿಜವಾದ ಸಾಧಕರನ್ನು ಗುರುತಿಸಿ ಶಿಫಾರಸು ಮಾಡಲು ಸಾರ್ವಜನಿಕರು, ಸಂಘಸಂಸ್ಥೆಗಳ ಪದಾಧಿಕಾರಿಗಳಲ್ಲಿ ಮನವಿ ಮಾಡಿದೆ. 2025 ರ ಸಾಲಿಗೆ ತಲಾ ಒಬ್ಬರು ಯುವ ಸಾಹಿತಿಗೆ ಮತ್ತು ಸಾಂಸ್ಕೃತಿಕ ಸಂಘಟಕ ಸಾಧಕರಿಗೆ ನೀಡಲಾಗುತ್ತದೆ.
ಇದೂವರೆಗೂ ಯಾವುದೇ ಪ್ರಶಸ್ತಿಗೆ ಆಯ್ಕೆ ಆಗಿರದ 45 ವಯೋಮಾನದೊಳಗಿನ ಸಾಹಿತಿಗಳು, ಸಂಘಟಕರನ್ನು ಸಂಬಂಧಿಸಿದವರು ಇದೇ ಮಾರ್ಚ್ 20 ರ ಒಳಗೆ ಸಾಧಕರ ಕಿರು ಪರಿಚಯ, ಫೋಟೋ ಜೊತೆಗೆ ಈ ಕೆಳಗೆ ನೀಡಿರುವ ಯಾವುದಾದರೂ ಒಂದು ಮೊಬೈಲ್ ಸಂಖ್ಯೆಗೆ ಕಳುಹಿಸಿ ಶಿಫಾರಸು ಮಾಡಬಹುದಾಗಿದೆ.
ಆಯ್ಕೆ ಆದವರನ್ನು ಕರೆ ಮಾಡಿ ಆಹ್ವಾನಿಸಲಾಗುವುದು.ಪ್ರಶಸ್ತಿಯು ನಗದು, ಶಾಲು, ಹಾರ,ಫಲ,ಪಲಕ ಒಳಗೊಂಡಿರುತ್ತದೆ, ಏಪ್ರಿಲ್ 19 ರಂದು ಭಾನುವಾರ ಬೆಂಗಳೂರಿನ ಗಾಂಧಿ ಭವನದಲ್ಲಿ ಆಯೋಜಿಸಿರುವ ಸಮಾರಂಭದಲ್ಲಿ ಗಣ್ಯರಿಂದ ಪ್ರದಾನ ಮಾಡಲಾಗುವುದೆಂದು ಬಳಗದ ಸಂಚಾಲಕರಾದ ಸಾಹಿತಿ
ಡಾ.ಕೃಷ್ಣ ಹಾನ್ ಬಾಳ್ ಮತ್ತು ಉದ್ಯಮಿ ಎ.ವಿ.ಗುರುತೇಜಸ್ , ಪ್ರೊ.ವೀಣಾವಿನೋದ್ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಮಾಹಿತಿಗಾಗಿ
ಮೊ : * 9535187323,
*9449115371,
*9448880985

WhatsApp

Join Now

Telegram

Join Now

Instagram

Join Now