ಅನು ಕಾರ್ಯಪ್ಪ ರವರಿಗೆ ಮಾಧ್ಯಮ ಅಕಾಡೆಮಿ ಪ್ರಶಸ್ತಿ.
ವಿಜಯ ದರ್ಪಣ ನ್ಯೂಸ್….
ಅನು ಕಾರ್ಯಪ್ಪ ರವರಿಗೆ ಮಾಧ್ಯಮ ಅಕಾಡೆಮಿ ಪ್ರಶಸ್ತಿ.
ಕರ್ನಾಟಕ ಸರ್ಕಾರದ ಮಾಧ್ಯಮ ಅಕಾಡೆಮಿ ಪ್ರಶಸ್ತಿಗೆ ಈ ಬಾರಿ ರಿಪಬ್ಲಿಕ್ ಕನ್ನಡ ಚಾನಲ್ ನ ಕೊಡಗು ಜಿಲ್ಲಾ ವರದಿಗಾರ ಅನು ಕಾರ್ಯಪ್ಪ ರವರು ಭಾಜನರಾಗಿದ್ದಾರೆ.
ಪೊನ್ನಂಪೇಟೆ ತಾಲೂಕಿನ ಬೆಳ್ಳೂರು ಗ್ರಾಮದ ಬಾಚರಣಿಯಂಡ ಕಾರ್ಯಪ್ಪ-ಪಾರ್ವತಿ ದಂಪತಿಗಳ ಎರಡನೇ ಪುತ್ರ ಬಾಚರಣಿಯಂಡ ಅನುಕಾರ್ಯಪ್ಪ. ಬೆಳ್ಳೂರು ಗ್ರಾಮದಲ್ಲಿ ಪ್ರಾಥಮಿಕ ವಿಧ್ಯಾಭ್ಯಾಸ, ಪ್ರೌಢಶಿಕ್ಷಣ ಹುದಿಕೇರಿ ಜನತಾ ಹೈಸ್ಕೂಲ್,ಗೋಣಿಕೊಪ್ಪಲು ಕಾವೇರಿ ಕಾಲೇಜಿನಲ್ಲಿ ಪದವಿ ಬಳಿಕ ಪತ್ರಕರ್ತನಾಗಿ ವೃತ್ತಿ ಆರಂಭಸಿದರು.
ಬೆಳ್ಳೂರು ಗ್ರಾಮದ ಸರಕಾರಿ ಶಾಲೆಯಲ್ಲಿ ಒಂದು ವರ್ಷ ಗೌರವ ಶಿಕ್ಷಕನಾಗಿ ಕರ್ತವ್ಯ,ಬೆಳ್ಳೂರು ಗ್ರಾಮಾಭಿವೃದ್ದಿ ಸಮಿತಿಯ ಕಾರ್ಯದರ್ಶಿಯಾಗಿ ಐದು ವರ್ಷಗಳ ಸೇವೆ ಸಲಿಸಿದ್ದಾರೆ.
ಕಳೆದ 23 ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ತೊಡಗಿಸಿಕೊಂಡಿರುವ ಅನು ಕಾರ್ಯಪ್ಪ ಸುರ್ವಣ ನ್ಯೂಸ್ ಚಾನಲ್ ಮೂಲಕ ಜಿಲ್ಲಾ ವರದಿಗಾರರಾಗಿ ಕೆಲಸ ಆರಂಭ.ಬಳಿಕ ಸಮಯ ನ್ಯೂಸ್,ನ್ಯೂಸ್18,ಸುದ್ದಿ ಟಿವಿ,ದಿಗ್ವಿಜಯ ನ್ಯೂಸ್ ನಲ್ಲಿ ಜಿಲ್ಲಾ ವರದಿಗಾರನಾಗಿ ಕರ್ತವ್ಯ.ಇದೀಗ ರಿಪಬ್ಲಿಕ್ ಕನ್ನಡದ ಜಿಲ್ಲಾ ವರದಿಗಾರನಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ಕೊಡಗು ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಯ ಜೊತೆಗೆ ಕೊಡಗು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಿಂದ ಹತ್ತಕ್ಕೂ ಹೆಚ್ಚು ಪ್ರಶಸ್ತಿ,ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದಿಂದ ಸೇನಾ ವರದಿಗಾಗಿ 2023 ನೇ ಸಾಲಿನ ಪ್ರಶಸ್ತಿ ಸಿಕ್ಕಿದೆ.ಇದೀಗ ರಾಜ್ಯ ಮಾದ್ಯಮ ಅಕಾಡೆಮಿ ಪ್ರಶಸ್ತಿಗೆ ಭಾಜನರಾಗಿದ್ದಾರೆ
ಕೊಡಗು ಕೇರಳದವರು ಆಚರಣೆ ಮಾಡುವ ಬೈತೂರು ಉತ್ಸವದ ಬಗ್ಗೆ ಡಾಕ್ಯುಮೆಂಟರಿ (ಡಿವಿಡಿ) ಹೊರತರಲಾಗಿದ್ದು, ಕೊಡವ ಕೌಟುಂಬಿಕ ಹಾಕಿ ಪಂದ್ಯಾವಳಿಯ ಬಗ್ಗೆ ಪುಸ್ತಕವನ್ನು ಹೊರತಂದಿದ್ದಾರೆ.ಕಳೆದ 6 ವರ್ಷದಿಂದ ಕೊಡಗು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ಗಣರಾಜ್ಯೋತ್ಸವ ಪಥಸಂಚಲನದಲ್ಲಿ ಭಾಗವಹಿಸಲಿರುವ ಕೊಡಗಿನ ಇಬ್ಬರು ವಿದ್ಯಾರ್ಥಿಗಳು
ಜನವರಿ 26/1/2025ರಂದು ದೆಹಲಿಯಲ್ಲಿ ನಡೆಯುವ ಗಣರಾಜ್ಯೋತ್ಸವ ಪಥ ಸಂಚಲನದಲ್ಲಿ ಕೊಡಗಿನ ಇಬ್ಬರು ವಿದ್ಯಾರ್ಥಿಗಳು ಆಯ್ಕೆಯಾಗಿದ್ದಾರೆ.
ಕರ್ನಾಟಕ19 ಬೆಟಾಲಿಯನ್ಆರ್ಮಿ ವಿಂಗ್ ಗೆ ಮಡಿಕೇರಿಯ ಎಫ್. ಎಮ್. ಸಿ ಕಾಲೇಜಿನ ವಿದ್ಯಾರ್ಥಿ ಹೇಮಂತ್ ಎಂ ಆರ್ ಆಯ್ಕೆಯಾಗಿದ್ದಾರೆ
ಪ್ರಸ್ತುತ ಇವರು ತೃತೀಯ ವರ್ಷದ
ಬಿ. ಸಿ. ಎ ವಿದ್ಯಾರ್ಥಿಯಾಗಿದ್ದು ಕಾಟಕೇರಿ ಗ್ರಾಮದ ಮಜ್ಜೇಗೌಡನ ಶ್ರೀಮತಿ ಪ್ರಮೀಳಾ & ಶ್ರೀ ರಾಜೇಶ್ ರವರ ಪುತ್ರರಾಗಿರುತ್ತಾರೆ.
ಗಣರಾಜ್ಯೋತ್ಸವ ಪಥಸಂಚಲನದಲ್ಲಿ ಕೊಡಗಿನ ಕುವರಿ ಮನ್ನೆರ ಪ್ರಶಸ್ತಿ ಅವರು NCC ಕರ್ನಾಟಕ ಮತ್ತು ಗೋವಾ ಬೆಟಾಲಿಯನ್ ಏರ್ ವಿಂಗ್ ನಿಂದ ಆಯ್ಕೆಯಾಗಿದ್ದಾರೆ.
ಇವರು ಮೂಲತಃ ಪೊನ್ನಂಪೇಟೆ ತಾಲೂಕು ಹರಿಹರ ಗ್ರಾಮದ ನಿವಾಸಿ ಮುನ್ನೆರ ಮನು ಮತ್ತು ಸೌಮ್ಯ ದಂಪತಿಗಳ ಪುತ್ರಿಯಾಗಿದ್ದು ಇವರು ಪ್ರಸ್ತುತ ಮೂಡಬಿದ್ರೆಯ ಆಳ್ವಾಸ್ ಕಾಲೇಜಿನಲ್ಲಿ ದ್ವಿತೀಯ ವರ್ಷದ ಇಂಜಿನಿಯರಿಂಗ್ ವಿದ್ಯಾರ್ಥಿಯಾಗಿದ್ದಾಳೆ.