--Ads--

ವಾರದೊಳಗೆ ಸಹಜ ಸ್ಥಿತಿಗೆ ಗ್ಯಾಸ್ ಸಿಲಿಂಡರ್ ಪೂರೈಕೆ: ಸಚಿವ ಮುನಿಯಪ್ಪ

On: March 15, 2026 2:17 AM
Follow ಮಾಡಿ
--Ads--

Whatsapp Channel

Join Now

Telegram Group

Join Now

ವಿಜಯ ದರ್ಪಣ ನ್ಯೂಸ್….

ವಾರದೊಳಗೆ ಸಹಜ ಸ್ಥಿತಿಗೆ ಗ್ಯಾಸ್ ಸಿಲಿಂಡರ್ ಪೂರೈಕೆ: ಸಚಿವ ಮುನಿಯಪ್ಪ

ದೇವನಹಳ್ಳಿ ಬೆಂಗಳೂರು ಗ್ರಾ.ಜಿಲ್ಲೆ, ಮಾ. 14:

ಕೊಲ್ಲಿ ದೇಶಗಳಲ್ಲಿ ಯುದ್ಧದ ಪರಿಸ್ಥಿತಿ ಹಿನ್ನೆಲೆಯಲ್ಲಿ ಉಂಟಾದ ಗೃಹ ಬಳಕೆ ಹಾಗೂ ವಾಣಿಜ್ಯ ಬಳಕೆ ಗ್ಯಾಸ್ ಸಿಲಿಂಡರ್ ಗಳ ಪೂರೈಕೆ ಸಮಸ್ಯೆ ವಾರದೊಳಗೆ ಸಂಪೂರ್ಣ ನಿವಾರಣೆಯಾಗಲಿದೆ ಎಂದು ಆಹಾರ ನಾಗರೀಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಉಸ್ತುವಾರಿ ಸಚಿವರಾದ ಕೆ.ಹೆಚ್. ಮುನಿಯಪ್ಪ ಅವರು ಹೇಳಿದರು.

ದೇವನಹಳ್ಳಿ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಅಭಿವೃದ್ಧಿ ಕಾಮಗಾರಿಗಳ ಭೂಮಿ ಪೂಜೆಯನ್ನು ನೆರವೇರಿಸಿ ಅವರು ಮಾತನಾಡಿದರು.

ಜನರು ಮನೆಗಳಲ್ಲಿ ಅಡುಗೆ ಅನಿಲ ಬಳಕೆಯಲ್ಲಿ ಮಿತಿವ್ಯಯ ಮಾಡುವಲ್ಲಿ ಸಹಕರಿಸಬೇಕು. ಗ್ಯಾಸ್ ಪೂರೈಕೆದಾರರು ಕಾಳಸಂತೆಯಲ್ಲಿ ಗೃಹಬಳಕೆ ಗ್ಯಾಸ್ ಸಿಲಿಂಡರ್ ಮಾರಾಟ ಮಾಡಬಾರದು. ಕಾಳ ಸಂತೆಯಲ್ಲಿ ಗ್ಯಾಸ್ ಮಾರಾಟ ಮಾಡುವವರ ವಿರುದ್ಧ ಕ್ರಮ ಜರುಗಿಸಲಾಗುವುದು ಎಂದರು.

ಕೊಲ್ಲಿ ದೇಶಗಳ ಯುದ್ಧದ ಸಮಯದಲ್ಲಿ ಅನಗತ್ಯವಾಗಿ ಗ್ಯಾಸ್ ಸಿಲಿಂಡರ್ ಪೂರೈಕೆ ಬಗ್ಗೆ ಗೊಂದಲ ಸೃಷ್ಟಿಸಿದ್ದಾರೆ. ವಾರದಲ್ಲಿ ಎಲ್ಲಾ ಗೊಂದಲ ಬಗೆಹರಿಯಲಿದೆ ಎಂದರು.

ದೇವನಹಳ್ಳಿ ತಾಲ್ಲೂಕು ರಾಷ್ಟ್ರೀಯ ಹೆದ್ದಾರಿ- 44 ರಿಂದ ಅರದೇಶನಹಳ್ಳಿ ಸೇರುವ ರಸ್ತೆಯ ಮಾರ್ಗ ಕನ್ನಮಂಗಲ, ಪೂಜನಹಳ್ಳಿ ರಸ್ತೆ ಅಭಿವೃದ್ಧಿ ಅಂದಾಜು ವೆಚ್ಚದ 3.60 ಕೋಟಿ ರೂ.ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿದರು.

ದೇವನಹಳ್ಳಿ ತಾಲ್ಲೂಕಿನ ರಾಷ್ಟ್ರೀಯ ಹೆದ್ದಾರಿ-207 ರಿಂದ ಕೊಂಡೇನಹಳ್ಳಿ ಗೇಟ್ (ರಾಜ್ಯ ಹೆದ್ದಾರಿ-104) ಸೇರುವ ರಸ್ತೆಯ ಮಾರ್ಗ ಗಂಗವಾರ-ಚೌಡಪ್ಪನಹಳ್ಳಿ, ಕಗ್ಗಲಹಳ್ಳಿ ರಸ್ತೆಯ 2.55 ಕಿ.ಮೀ ಮತ್ತು 1 ಕಿ.ಮೀ ರಸ್ತೆ ಅಭಿವೃದ್ಧಿ ಅಂದಾಜು ವೆಚ್ಚ 4.90 ಕೋಟಿ ರೂ. ಕಾಮಗಾರಿಯ ಭೂಮಿ ಪೂಜೆ ನೆರವೇರಿಸಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಗ್ಯಾ.ಯೋ.ಅ. ಸಮಿತಿ ಅಧ್ಯಕ್ಷ ಬಿ.ರಾಜಣ್ಣ ,  ಜಿ.ಪಂ ಮಾಜಿ ಸದಸ್ಯ ಮಂಜುನಾಥ್, ಗ್ರಾ.ಪಂ ಮಾಜಿ ಅಧ್ಯಕ್ಷ ನಾಗೇಶ್ ತಾ .ಪ. ಇಒ ಶ್ರೀನಾಥ್ ಗೌಡ ,  ಮುಖಂಡರಾದ ಕನ್ನಮಂಗಲ ಪಟಾಲಪ್ಸ , ಭುವನಹಳ್ಳಿ ಮುನಿರಾಜು, ಚಿನ್ನಪ್ಪ ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.

WhatsApp

Join Now

Telegram

Join Now

Instagram

Join Now