Editor VijayaDarpana

ಅತ್ತಿಗೋಡು ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ಗಂಗಾಧರ್ ಉಪಾಧ್ಯಕ್ಷರಾಗಿ ರೇಖಾ ಚಂದ್ರಹಾಸ್.

ವಿಜಯ ದರ್ಪಣ ನ್ಯೂಸ್ ಮೈಸೂರು ಜಿಲ್ಲೆ  ಪಿರಿಯಾಪಟ್ಟಣ ತಾಲೂಕು ಜುಲೈ 28.  ಪಿರಿಯಾಪಟ್ಟಣ ತಾಲೂಕಿನ ಅತ್ತಿಗೋಡು ಗ್ರಾಮ ಪಂಚಾಯಿತಿಯಲ್ಲಿ  ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಸ್ಥಾನಗಳಿಗೆ ಚುನಾವಣೆ ನಡೆಯಿತು. ಅಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಗಂಗಾಧರ್ ಹಾಗೂ ಜೆಡಿಎಸ್ ಬೆಂಬಲಿತ ಅಭ್ಯರ್ಥಿ ಎಂ.ಎಂ ರುದ್ರೇಶ್ ನಾಮಪತ್ರ ಸಲ್ಲಿಸಿದ್ದು, ಗಂಗಾಧರ್ ರವರು 14 ಮತಗಳನ್ನು ಪಡೆಯುವ ಮೂಲಕ ಜಯಶೀಲರಾದರು. ಎಂ.ಎಂ ರುದ್ರೇಶ್ 5 ಮತಗಳನ್ನು ಪಡೆದು ಪರಾವಕೊಂಡರು. ಒಂದು ಮತ ತಿರಸ್ಕಾರಗೊಂಡಿದೆ. ಉಪಾಧ್ಯಕ್ಷ ಸ್ಥಾನಕ್ಕೆ ಒಬ್ಬರೇ ನಾಮಪತ್ರ ಸಲ್ಲಿಸಿದ್ದರಿಂದ…

Read More

ದಕ್ಷಿಣ ಭಾರತದ ಗಾನ ಕೋಗಿಲೆಗೆ ಅರವತ್ತರ ಜನ್ಮದಿನದ ಸಂಭ್ರಮ.

ವಿಜಯ ದರ್ಪಣ ನ್ಯೂಸ್  ದಕ್ಷಿಣ ಭಾರತದ ನೈಟಿಂಗೇಲ್ ಗೆ ಅರವತ್ತರ ಜನ್ಮದಿನದ ಸಂಭ್ರಮ. *************************************** ಕೆಲವು ವ್ಯಕ್ತಿಗಳು ಮತ್ತವರ ವ್ಯಕ್ತಿತ್ವವೆಂಬುದು ದೇಶ ಭಾಷೆ, ಜಾತಿ, ಧರ್ಮ …ಎಲ್ಲವನ್ನೂ‌ ಮೀರಿ ನಮ್ಮ ಮನದೊಳಗೆ ಒಂದು ಅಳಿಸಲಾಗದ ಅಭಿಮಾನದ ಹಾಗೂ ಮೆಚ್ಚುಗೆಯ ಮುದ್ರೆಯನ್ನೊತ್ತಿ ಬಿಡುತ್ತದೆ. ಅವರ ಮೇಲಿನ ಅಂತಹಾ ಅಗಾಧವಾದ ಪ್ರೀತಿಗೆ ಕಾರಣವೇ ಬೇಕಿಲ್ಲ. ಅವರನ್ನು ಎಷ್ಟು ಹಚ್ಚಿಕೊಂಡು‌ ಆರಾಧಿಸುತ್ತವೆಂದರೆ ಅವರೂ ಸಹ ನಮ್ಮ‌ ಬದುಕಿನ‌ ಭಾಗವೆಂಬಂತೆ, ಕುಟುಂಬದ ಸದಸ್ಯರೆಂಬಂತಹ ಸಾಮೀಪ್ಯದ ಕಕ್ಕುಲತಿ ಹೃದಯದಲ್ಲಿ ಸರಾಗವಾಗಿ ಸ್ಥಾನ‌ಪಡೆದಿರುತ್ತದೆ. ಅಂತಹ ಅಭಿಮಾನವೆಂಬುದು…

Read More

ಡಾ.ಎ.ಪಿ.ಜೆ .ಅಬ್ದುಲ್ ಕಲಾಂರವರ ಪುಣ್ಯ ಸ್ಮರಣೆ

ವಿಜಯ ದರ್ಪಣ ನ್ಯೂಸ್, ವಿಜಯಪುರ.        ಬೆಂಗಳೂರು ಗ್ರಾ ಜಿಲ್ಲೆ  ಜುಲೈ 28 ಭಾರತ ದೇಶದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ದುಡಿದ ಮಹಾತ್ಮ ಗಾಂಧಿ, ಜವಾಹರ್ ಲಾಲ್ ನೆಹರು ,ಸುಭಾಷ್ ಚಂದ್ರ ಬೋಸ್, ಲಾಲ್ ಬಹದ್ದೂರ್ ಶಾಸ್ತ್ರಿರವರ ಪಂಥಕ್ಕೆ ಸೇರಿದ ಡಾಎಪಿಜೆ ಅಬ್ದುಲ್ ಕಲಾಂ ರವರೆಂದು ವರ್ಣನೆ ಮಾಡುತ್ತಾ ವಿದ್ಯಾರ್ಥಿಗಳು ಸಹ ಅವರು ಹಾಕಿ ಕೊಟ್ಟ ಮಾರ್ಗದಲ್ಲಿ ನಡೆಯಬೇಕೆಂದು ವಿಶ್ರಾಂತ ಶಿಕ್ಷಕ ಕೆ.ಎಚ್ ಚಂದ್ರಶೇಖರ್ ರವರು ತಿಳಿಸಿದರು ವಿಜಯಪುರ ಅಖಿಲ ಕರ್ನಾಟಕ ಮಿತ್ರ ಸಂಘದ ವತಿಯಿಂದ…

Read More

ಹಲಗನಹಳ್ಳಿ ಗ್ರಾಮ ಪಂಚಾಯಿತಿ ನೂತನ ಅಧ್ಯಕ್ಷರಾಗಿ ಸುರಗಹಳ್ಳಿ ವೀಣಾ ವೆಂಕಟೇಶ್ ಮತ್ತು ಉಪಾಧ್ಯಕ್ಷರಾಗಿ ಮೀನಾಕ್ಷಿ ಆಯ್ಕೆ..

ವಿಜಯ ದರ್ಪಣ ನ್ಯೂಸ್  ಪಿರಿಯಾಪಟ್ಟಣ,ಮೈಸೂರು ಜಿಲ್ಲೆ    ಪಿರಿಯಾಪಟ್ಟಣ ತಾಲೂಕಿನ ಹಲಗನಹಳ್ಳಿ ಗ್ರಾಮ ಪಂಚಾಯಿತಿಯ ನೂತನ ಅಧ್ಯಕ್ಷರಾಗಿ ಸುರಗಹಳ್ಳಿ ವೀಣಾ ವೆಂಕಟೇಶ್ ಮತ್ತು ಉಪಾಧ್ಯಕ್ಷರಾಗಿ ಮೀನಾಕ್ಷಿರವರು ಆಯ್ಕೆಯಾಗಿದ್ದಾರೆ. ಅಧ್ಯಕ್ಷರ ಸ್ಥಾನಕ್ಕೆ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಸುರಗಹಳ್ಳಿ ವೀಣಾ ವೇಕಟೇಶ್ ಜೆಡಿಎಸ್ ಬೆಂಬಲಿತ ಅಭ್ಯರ್ಥಿ ರಾಜನ ಬೆಳಗುಲಿ ಸಂತೋಷ್ ಸ್ಪರ್ಧಿಸಿದ್ದರು. ಸುರಗಹಳ್ಳಿ ವೀಣಾ ವೇಕಟೇಶ್ 10 ಮತಗಳನ್ನು ಪಡೆದು ಅಧ್ಯಕ್ಷರಾಗಿ ಆಯ್ಕೆಯಾದರೆ ಪ್ರತಿಸ್ಪರ್ಧಿ ರಾಜನ ಬಿಳಗೂಲಿ ಸಂತೋಷ್ 8 ಮತಗಳನ್ನು ಪಡೆದು ಪರಭವಗೊಂಡರು. ಉಪಾಧ್ಯಕ್ಷರ ಸ್ಥಾನಕ್ಕೆ ಮೀನಾಕ್ಷಿ ಒಬ್ಬರೇ…

Read More

ಸರ್ಕಾರದ ಯೋಜನೆಗಳನ್ನು ಜನರಿಗೆ ತಲುಪಿಸಲು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಸಲ್ಮಾ ಕೆ ಫಾತಿಮ ಸೂಚನೆ.

ವಿಜಯ ದರ್ಪಣ ನ್ಯೂಸ್ ದೇವನಹಳ್ಳಿ  ಬೆಂಗಳೂರು ಗ್ರಾ  ಜಿಲ್ಲೆ . ಜುಲೈ 26 ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರದ ಯೋಜನೆಗಳನ್ನು ಅನುಷ್ಠಾನಗೊಳಿಸಿ ಪ್ರತಿಯೊಬ್ಬ ಫಲಾನುಭವಿಗೂ ತಲುಪುವಂತೆ ತ್ವರಿತ ಗತಿಯಲ್ಲಿ ಕಾರ್ಯನಿರ್ವಹಿಸಿ ಯೋಜನೆಗಳು ಯಶಸ್ವಿಯಾಗಲು ಕ್ರಮ ಕೈಗೊಳ್ಳಬೇಕು ಎಂದು ಪಶುಸಂಗೋಪನೆ ಮತ್ತು ಮೀನುಗಾರಿಕೆ ಇಲಾಖೆ ಕಾರ್ಯದರ್ಶಿ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆ ಉಸ್ತುವಾರಿ ಕಾರ್ಯದರ್ಶಿ ಸಲ್ಮಾ ಕೆ ಫಾಹಿಂ ಅವರು ಅಧಿಕಾರಿಗಳಿಗೆ ಸೂಚಿಸಿದರು ದೇವನಹಳ್ಳಿ ತಾಲೂಕಿನ ಬೀರಸಂದ್ರ ಗ್ರಾಮದ ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತ ಭವನದಲ್ಲಿರುವ ಜಿಲ್ಲಾ ಪಂಚಾಯಿತಿ…

Read More

ದೌರ್ಜನ್ಯ ಪ್ರಕರಣಗಳನ್ನು ಶೀಘ್ರ ಇತ್ಯರ್ಥಪಡಿಸಲು ಡಾ.ಅನುರಾಧ ಸೂಚನೆ

ವಿಜಯ ದರ್ಪಣ ನ್ಯೂಸ್ ,ದೇವನಹಳ್ಳಿ            ಬೆಂಗಳೂರು ಗ್ರಾ ಜಿಲ್ಲೆ . ಜುಲೈ 25 ಸಾಂತ್ವನ ಯೋಜನೆ ಯಡಿ ದಾಖಲಾಗುವ ವರದಕ್ಷಿಣೆ ಕಿರುಕುಳ, ಲೈಂಗಿಕ ಕಿರುಕುಳ, ಕೌಟುಂಬಿಕ ದೌರ್ಜನ್ಯ, ಅತ್ಯಾಚಾರ ಪ್ರಕರಣ, ಮುಂತಾದ ವಿವಿಧ ರೀತಿಯ ದೌರ್ಜನ್ಯ ಪ್ರಕರಣಗಳನ್ನು ಶೀಘ್ರ ಇತ್ಯರ್ಥಪಡಿಸಲು ಕ್ರಮ ಕೈಗೊಳ್ಳುವಂತೆ ಬೆಂಗಳೂರು ಗ್ರಾಮಾಂತರ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಅನುರಾಧ ಕೆ.ಎನ್ ಅವರು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು. ದೇವನಹಳ್ಳಿ ತಾಲೂಕಿನ ಬೀರಸಂದ್ರ ಗ್ರಾಮದ ಬೆಂಗಳೂರು…

Read More

ಗುರು ಪೂರ್ಣಿಮೆ ಆಚರಣೆ ಭಕ್ತಿ ಮಾರ್ಗಕ್ಕೆ ಪೂರಕವಾಗಿದೆ.

ವಿಜಯ ದರ್ಪಣ ನ್ಯೂಸ್, ವಿಜಯಪುರ,          ಬೆಂಗಳೂರು ಗ್ರಾ ಜಿಲ್ಲೆ  ಹಿಂದು ಪಂಚಾಂಗ ಆಶಾಡ ಮಾಸದ ಹುಣ್ಣಿಮೆಯನ್ನು ಹಿಂದುಗಳು ಸಂಪ್ರದಾಯಕವಾಗಿ ಗುರುಪೂರ್ಣಿಮೆ ಆಚರಿಸುತ್ತಾರೆ. ಈ ದಿನದಂದು ಹಿಂದೂಗಳು ಮತ್ತು ಬೌದ್ಧರು ನಮ್ಮ ಗುರುವಿಗೆ ಪೂಜೆ ಸರಸುತ್ತಾರೆ. ಗುರು ಪೂರ್ಣಿಮಿಯ ದಿನ ಗುರುಸೂತ್ರ ಪ್ರಭಾವ ಬೇರೆ ದಿನಗಳಿಗಿಂತ ಸಾವಿರ ಪಟ್ಟು ಹೆಚ್ಚು ಪ್ರಭಾವಶಾಲಿ ಆಗಿರುತ್ತದೆ ಎಂದು ಸೇವಾ ಸಮಿತಿಯ ಸಂಚಾಲಕ ವಿ.ಎನ್ ವೆಂಕಟೇಶ್  ತಿಳಿಸಿದರು. ಬೆಂಗಳೂರು ಗ್ರಾಮಾಂತರ ಜಿಲ್ಲೆ ವಿಜಯಪುರ ಪಟ್ಟಣದಲ್ಲಿರುವ ಪುರಾಣ ಪ್ರಸಿದ್ಧ…

Read More

ಕೆಂಗಣ್ಣು (ಮದ್ರಾಸ್ ಐ)

ಕೆಂಗಣ್ಣು ====== ಸಾಮಾನ್ಯವಾಗಿ ಚಳಿಗಾಲದಲ್ಲಿ ಕಾಣಿಸಿ ಕೊಳ್ಳುತ್ತಿದ್ದ ಕೆಂಪು ಕಣ್ಣು ಎಲ್ಲಾ ಕಡೆ ಈಗ ಮಳೆಗಾಲದಲ್ಲಿ ಶುರುವಾಗಿದ್ದು, ಮಳೆಯ ಬಗ್ಗೆ ಮಾತನಾಡುತ್ತಿರುವವರೆಲ್ಲ ಈ “ಮದ್ರಾಸ್ ಐ” ಬಗ್ಗೆ ಮಾತನಾಡ ತೊಡಗಿದ್ದಾರೆ. ಈಗ ಇದು ಸಾಧಾರಣವಾಗಿ ಮಕ್ಕಳಲ್ಲಿ ಹೆಚ್ಚು ಕಾಣಿಸಿ ಕೊಳ್ಳುತ್ತಿದೆ. ಇದು ವೈರಸ್ನಿಂದ ಬರುವ ರೋಗ. ಈ ವೈರಸ್ ಗಳು ಬಹಳ ಬೇಗ ಒಬ್ಬರಿಂದ ಇನ್ನೊಬ್ಬರಿಗೆ ಹರಡುವುದರಿಂದ ಶಾಲೆಗಳಲ್ಲಿ ಮತ್ತು ವಿದ್ಯಾರ್ಥಿಗಳು ಜೊತೆಯಾಗಿರುವ ಹಾಸ್ಟೆಲ್ಗಳಲ್ಲಿ ಬಹಳ ಬೇಗ ಹರಡಿ, ಜನರು ಚಿಂತೆಗೆ ಒಳಗಾಗುತ್ತಿದ್ದಾರೆ. ಕುಟುಂಬದಲ್ಲಿ ಒಬ್ಬರಿಗೆ ಬಂದರೆ,…

Read More

ಹಾಸ್ಯ ಸಾರ್ವಭೌಮನ ಜನ್ಮ ಶತಮಾನೋತ್ಸವ.

ವಿಜಯ ದರ್ಪಣ ನ್ಯೂಸ್  ಹಾಸ್ಯ ಸಾರ್ವಭೌಮ ನರಸಿಂಹರಾಜು ಜನ್ಮ ಶತಮಾನೋತ್ಸವ. ************************** ನವರಸಗಳ ಅಭಿನಯದಲ್ಲಿ ಆತ್ಯಂತ ಸವಾಲಿನದು ಎಂದರೆ ಅದು ಹಾಸ್ಯರಸದ ಆಭಿವ್ಯಕ್ತಿ ! ಮತ್ತೊಬ್ಬರನ್ನು ನಗಿಸುವ ಕೆಲಸ ಎಂದರೆ ನಾವು ನಕ್ಕಷ್ಟು ಸುಲಭವಲ್ಲ. ನಗಿಸುವುದಕ್ಕೆ ವಿಶೇಷವಾದ ಪ್ರತಿಭೆ ಬೇಕು, ಮಾತುಗಳಲ್ಲಿ ಪಂಚಿಂಗ್ ಹಾಗೂ ಡೈಲಾಗ್ ಡಿಲಿವರಿಯಲ್ಲಿ ಟೈಮಿಂಗ್ಸ್ ಇರಬೇಕು ! ಇವೆಲ್ಲದರ ಜೊತೆಗೆ ಮತ್ತೊಬ್ಬರಿಗೆ ನೋವಾಗದಂತೆ ಹಾಗೂ ಸಭ್ಯತೆಯ ಎಲ್ಲೆ ಮೀರದಂತೆ ನಗಿಸುವುದು ಎಂದರೆ ಅದಕ್ಕೆ ಕಲಾವಿದನಾದವನು ಪರಿಪಕ್ವನಾಗಿರಬೇಕು . ಹಾಸ್ಯಕ್ಕಿರುವ ಮಹತ್ವವನ್ನು ಅರಿತೇ ಬಹುಶಃ…

Read More

ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಯಡಿ ರೈತರು ನೋಂದಾಯಿಸಿ ಕೊಳ್ಳಲು ಜಿಲ್ಲಾಧಿಕಾರಿ ಕರೆ.

ವಿಜಯ ದರ್ಪಣ ನ್ಯೂಸ್, ದೇವನಹಳ್ಳಿ  ಬೆಂಗಳೂರು ಗ್ರಾ ಜಿಲ್ಲೆ, ಜುಲೈ 24  2023 ನೇ ಸಾಲಿನ “ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಬಿಮಾ (ವಿಮಾ) ಯೋಜನೆಯನ್ನು 2023 ರ ಮುಂಗಾರು ಹಂಗಾಮಿಗೆ ಕೃಷಿ ಇಲಾಖೆಯಿಂದ ಅನುಷ್ಠಾನಗೊಳಿಸುತ್ತಿದ್ದು ಅಧಿಸೂಚಿತ ಬೆಳೆಗಳನ್ನು ಬೆಳೆಯುವ ರೈತರು ಈ ಯೋಜನೆಯಡಿ ಹೆಚ್ಚಿನ ಸಂಖ್ಯೆಯಲ್ಲಿ ನೋಂದಣಿ ಮಾಡಿಕೊಳ್ಳುವಂತೆ ರೈತರಲ್ಲಿ ಅರಿವು ಮೂಡಿಸಿ ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಡಾ. ಶಿವಶಂಕರ.ಎನ್ ಅವರು ಅಧಿಕಾರಿಗಳಿಗೆ ಸೂಚಿಸಿದರು. ದೇವನಹಳ್ಳಿ ತಾಲ್ಲೂಕಿನ ಬೀರಸಂದ್ರ ಗ್ರಾಮದ ಬೆಂಗಳೂರು…

Read More