--Ads--

17 ನೇ ಬಜೆಟ್ ನಲ್ಲಿಯೂ ಬಯಲುಸೀಮೆಯ ಶಾಶ್ವತ ನೀರಾವರಿಗೆ ಸೊನ್ನೆ ಸುತ್ತಿದ ಸಿದ್ದರಾಮಯ್ಯ

On: March 6, 2026 3:59 PM
Follow ಮಾಡಿ
--Ads--

Whatsapp Channel

Join Now

Telegram Group

Join Now

ವಿಜಯ ದರ್ಪಣ ನ್ಯೂಸ್…..

17 ನೇ ಬಜೆಟ್ ನಲ್ಲಿಯೂ ಬಯಲುಸೀಮೆಯ ಶಾಶ್ವತ ನೀರಾವರಿಗೆ ಸೊನ್ನೆ ಸುತ್ತಿದ ಸಿದ್ದರಾಮಯ್ಯ

ನೀರಿಗಾಗಿಯಾದರೂ ಒಗ್ಗಟ್ಟಾಗಿ ಒತ್ತಡ ಹೇರುವಲ್ಲಿ ವಿಫಲರಾದ ಜನಪ್ರತಿನಿಧಿಗಳು”

ಶಿಡ್ಲಘಟ್ಟ : ಕರ್ನಾಟಕದ ಸರ್ಕಾರದಿಂದ ಪೆನ್ನಾರ್ ಜಲಾನಯನ ಪ್ರದೇಶದ ಬರಪೀಡಿತ ಜಿಲ್ಲೆಗಳ ಕನ್ನಡಿಗರ ಕಡೆಗಣನೆ, ಗಡಿ ಜಿಲ್ಲೆಗಳಿಗೆ ದಶಕಗಳಿಂದ ಮುಂದುವರೆದ ನೀರಾವರಿ ತಾರತಮ್ಯ, ಸರ್ಕಾರಕ್ಕೆ ನಾವು ಕಟ್ಟುವ ತೆರಿಗೆ ಬೇಕು, ನಮ್ಮ ರೈತರ ಭೂಮಿ ಬೇಕು, ನಮ್ಮ ಜಿಲ್ಲೆಗಳ ಅಂತರ್ಜಲ ಈಗಾಗಲೇ ಪಾತಾಳ ತಲುಪಿದೆ, ಕುಡಿಯುವ ನೀರಿನ ಮೂಲಗಳು ವಿಷಮಯವಾಗಿವೆ, ಕುಡಿಯುವ ನೀರಿನಲ್ಲಿ ಯುರೇನಿಯಂ ಪತ್ತೆಯಾಗಿರುವ ಬಗ್ಗೆಯೂ ಸರ್ಕಾರಕ್ಕೆ ಕನಿಷ್ಠ ಕನಿಕರವಿಲ್ಲ  ಎಂದು ಶಾಶ್ವತ ನೀರಾವರಿ ಹೋರಾಟ ಸಮಿತಿ ಅಧ್ಯಕ್ಷ ಆರ್ ಆಂಜನೇಯ ರೆಡ್ಡಿ ಹೇಳಿದರು.

ಸಿ‌ಎ.ಜಿ.ವರದಿಯಲ್ಲಿ ಎತ್ತಿನಹೊಳೆಯ ಕರ್ಮಕಾಂಡ ಬಟಾಬಯಲಾಗಿದ್ದರೂ ಬಜೆಟ್ ನಲ್ಲಿ ಮುಂದುವರೆದ ಎತ್ತಿನಹೊಳೆ ಯೋಜನೆಯ ಭಜನೆ, ಚುನಾವಣೆ ಗೆಲ್ಲಲು ಮಾತ್ರ ಮೂರನೇ ಹಂತದ ಶುದ್ಧೀಕರಣದ ಪೊಳ್ಳು ಭರವಸೆ, ಬಜೆಟ್ ನಲ್ಲಿ ಕೆ.ಸಿ.ವ್ಯಾಲಿ ಮತ್ತು ಹೆಚ್.ಎನ್. ವ್ಯಾಲಿ ಯೋಜನೆಗಳ ಮೂರನೇ ಹಂತದ ಶುದ್ಧೀಕರಣಕ್ಕೆ ಮುಂದಾಗದೆ ಮೊಂಡಾಟ, ಕೆರೆ ಕುಂಟೆ ಕಾಲುವೆಗಳ ಸಮಗ್ರ ಅಭಿವೃದ್ಧಿಗಾದರೂ ಪ್ಯಾಕೇಜ್ ನೀಡಿಲ್ಲ, ತುರ್ತಾಗಿ ಕುಡಿಯುವ ನೀರಿನ ದಾಹವನ್ನು ತಣಿಸಬಲ್ಲ ಕೃಷ್ಣಾ- ಪೆನ್ನಾರ್ ನದಿ ಜೋಡಣೆ ಬಗ್ಗೆಯೂ ಚಕಾರವೆತ್ತಿಲ್ಲ.

₹₹₹₹₹₹₹₹₹₹₹₹₹₹₹₹₹₹₹₹₹₹₹₹₹₹₹₹₹₹₹₹₹₹₹

ಬಜೆಟ್ನಲ್ಲಿ    ನೀರಾವರಿ, ಕೃಷಿಕರ ಹಿತಕ್ಕಾಗಿ ಏನನ್ನೂ ರೂಪಿಸಿಲ್ಲ: ಬಿಜೆಪಿ ಜಿಲ್ಲಾಧ್ಯಕ್ಷ ಸೀಕಲ್ ರಾಮಚಂದ್ರಗೌಡ

ಶಿಡ್ಲಘಟ್ಟ : 17 ನೇ ಸಿದ್ದರಾಮಯ್ಯ ಬಜೆಟ್ ನಿರಾಸೆ ಬಜೆಟ್, ನೀರಾವರಿ, ಕೃಷಿಕರ ಹಿತಕ್ಕಾಗಿ ಏನನ್ನೂ ರೂಪಿಸಿಲ್ಲ , ಇರುವ ಯೋಜನೆಗಳಿಗೆ ಅನುದಾನ ಒದಗಿಸದೆ ಒದ್ದಾಡುತ್ತಿರುವ ಸರಕಾರ ಹೊಸ ಯೋಜನೆಗಳನ್ನು ಅನುಷ್ಟಾನ ಮಾಡುತ್ತದೆ ಎಂದರೆ ಅದು ಹಾಸ್ಯಾಸ್ಪದವೇ ಸರಿ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಸೀಕಲ್ ರಾಮಚಂದ್ರಗೌಡ ಹೇಳಿದರು.

ಸಿದ್ದರಾಮಯ್ಯ ಅವರು ಇಡೀ ರಾಜ್ಯದ ಜನರನ್ನು ಹಾಗೂ ಜನರ ಬದುಕನ್ನು ದೃಷ್ಟಿಯಲ್ಲಿಟ್ಟುಕೊಂಡು ಮಂಡಿಸಿದ ಬಜೆಟ್ ಅಲ್ಲ,ಕೇವಲ ಒಂದು ಧರ್ಮ, ಒಂದು ವರ್ಗವನ್ನು ಮಾತ್ರ ದೃಷ್ಟಿಯಲ್ಲಿಟ್ಟುಕೊಂಡು ಅವರಿಗಾಗಿ ಮಾತ್ರ ಮಂಡಿಸಿದ ಬಜೆಟ್ ಇದಾಗಿದೆ. 56 ಸಾವಿರ ಉದ್ಯೋಗ ಸೃಷ್ಟಿಸುವುದಾಗಿ ಹೇಳಲಾಗಿದೆ. ಇದು ಈ ಸರಕಾರ ಇರುವವರೆಗೂ ಸಾಧ್ಯವೇ ಇಲ್ಲ.

########################:

ಜನಪರ ಬಜೆಟ್ : ರಾಜೀವ್ ಗೌಡ 

ಶಿಡ್ಲಘಟ್ಟ : ರೇಷ್ಮೆ ಕೃಷಿ ಮತ್ತು ರೇಷ್ಮೆ ಉದ್ದಿಮೆಯನ್ನು ಕೈಗೊಂಡಿರುವ ನೂರಾರು ಕುಟುಂಬಗಳನ್ನು ಗಮನದಲ್ಲಿಟ್ಟುಕೊಂಡು “ಸಿಲ್ಕ್ ಪಾರ್ಕ್” ಮಾಡುವುದಾಗಿ ಬಜೆಟ್‍ನಲ್ಲಿ ಘೋಷಿಸಿರುವುದು ಸಂತಸದ ವಿಷಯ ಎಂದು ಎಬಿಡಿ ಟ್ರಸ್ಟ್ ಅಧ್ಯಕ್ಷ ರಾಜೀವ್ ಗೌಡ ವ್ಯಕ್ತಪಡಿಸಿದರು.

ಇದು ಉತ್ತೇಜನಕಾರಿಯಾಗಲಿದ್ದು ಜಾಗತಿಕವಾಗಿ ಇನ್ನಷ್ಟು ಅಭಿವೃದ್ದಿಗೆ ಇದು ಪೂರಕ. ಕಾಲೇಜುಗಳ ವಿದ್ಯಾರ್ಥಿ ಸಂಘಟನೆಗಳಿಗೆ ಚುನಾವಣೆ ನಡೆಸುವಂತ ತೀರ್ಮಾನದಿಂದ ವಿದ್ಯಾರ್ಥಿಗಳಲ್ಲಿ ಪ್ರಜಾಪ್ರಭುತ್ವದ ವ್ಯವಸ್ಥೆ ಬಗ್ಗೆ ಇನ್ನಷ್ಟು ಅರಿವು ಮೂಡಿಸಿ ದೇಶ ಕಟ್ಟುವ ಕೆಲಸ ಆಗಲಿದೆ. ಶಾಲಾ ಮಕ್ಕಳ ಮೊಬೈಲ್ ಬಳಕೆ ನಿಷೇಧ ಸ್ವಾಗತಾರ್ಹ ಎಂದರು.

 

 

WhatsApp

Join Now

Telegram

Join Now

Instagram

Join Now