ನೀತಿ ಭ್ರಷ್ಟ ಶಿವಮೂರ್ತಿ ಸ್ವಾಮೀಜಿ ಕೂಡಲೇ ಪೀಠ ತ್ಯಾಗ ಮಾಡಲಿ : ಮಾಜಿ ಸಚಿವ ಹೆಚ್ ಏಕಾಂತಯ್ಯ .
ವಿಜಯ ದರ್ಪಣ ನ್ಯೂಸ್, ಚಿತ್ರದುರ್ಗ ಸಬ್‌ರಿಜಿಸ್ಟಾರ್ ಕಚೇರಿಯ ಮಾರ್ಗಸೂಚಿ ಬೆಲೆಗಿಂತ ಕಡಿಮೆ ಬೆಲೆಗೆ ಮುರುಘಾಮಠದ ಆಸ್ತಿಗಳನ್ನು ಮಾರಾಟ ಮಾಡಿರುವ ನೀತಿ ಭ್ರಷ್ಟ ಡಾ.ಶಿವಮೂರ್ತಿ ಸ್ವಾಮೀಜಿ ನೈತಿಕ ಹೊಣೆ ಹೊತ್ತು ಪೀಠ ತ್ಯಾಗ ಮಾಡಲಿ. ಇಲ್ಲವಾದಲ್ಲಿ ಕೊನೆಯುಸಿರಿರುವತನಕ ಕಾನೂನು ಹೋರಾಟ ಮಾಡಲಾಗುವುದು ಎಂದು ಎಸ್.ಜೆ.ಎಂ.ವಿದ್ಯಾಪೀಠದ ಗೌರ್ವಿನಿಂಗ್ ಕೌನ್ಸಿಲ್ ಮೆಂಬರ್, ಮಾಜಿ ಸಚಿವ ಹೆಚ್.ಏಕಾಂತಯ್ಯ ಹೇಳಿದರು. ಪತ್ರಕರ್ತರ ಭವನದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಹೆಚ್.ಏಕಾಂತಯ್ಯ ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ಕಿರುಕುಳ ಎಸಗಿರುವ ಆರೋಪದ ಮೇಲೆ ಡಾ.ಶಿವಮೂರ್ತಿ ಶರಣರು ಜೈಲು…