ಕನ್ನಡಿಗನ ಅದ್ಭುತ ಸಾಧನೆ: ತೈಲ ವರ್ಣ ಚಿತ್ರಗಳ ಮೂಲಕ ಪೌರಾಣಿಕ ಕಥೆಗಳ ಅನಾವರಣ.
ವಿಜಯ ದರ್ಪಣ ನ್ಯೂಸ್ ಬೆಂಗಳೂರು, ಜನವರಿ 5, 2024: ಭಾರತೀಯ ಪುರಾಣಗಳ ಶ್ರೀಮಂತ ಇತಿಹಾಸದಲ್ಲಿ ಮಹಾಭಾರತವು ಸದಾ ಪ್ರಸ್ತುತವಾಗಿರುವ ಮಹಾಕಾವ್ಯವಾಗಿದೆ. ಮಹಾಭಾರತವು ಕುರುವಂಶದ ಕಥೆ, ಕುರುಕ್ಷೇತ್ರ ಯುದ್ಧದಲ್ಲಿ ಕೌರವರು ಮತ್ತು ಪಾಂಡವರ ನಡುವಿನ ಧರ್ಮಯುದ್ಧದ ಕತೆಯನ್ನು ಮಹಾಭಾರತ ನವಿರಾಗಿ ಹೇಳುತ್ತದೆ. ಶೌರ್ಯ, ನೈತಿಕತೆ ಮತ್ತು ಬ್ರಹ್ಮಾಂಡದ ಸಮತೋಲನವೇ ಮಹಾಭಾರತದ ಮೂಲತಿರುಳಾಗಿದೆ. ಶ್ರೀ ಸ್ವಾಮಿ ಸಿ.ಜೆ ಅವರ ಮಹಾಭಾರತ ಸರಣಿಯು ಕೇವಲ ತೈಲ ವರ್ಣ ಚಿತ್ರಗಳ ಸಂಗ್ರಹವಲ್ಲ, ಬದಲಿಗೆ ಕಾಲಾತೀತವಾದ ಸಾಹಸಗಾಥೆಯ ಸೊಗಸಾದ ನಿರೂಪಣೆಯಾಗಿದೆ. ಶ್ರೀ ಸ್ವಾಮಿ ಅವರು…
