ಟಿವಿಎಸ್ ಐಕ್ಯೂಬ್ ಎಲೆಕ್ಟ್ರಿಕ್ ಬೈಕ್‍ನಲ್ಲಿ 200 ಕಿ.ಮೀ ಎಲೆಕ್ಟ್ರಿಕ್ ಬೈಕ್ ಯಾನವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ ಮಿಲಿಂದ್ ಸೋಮನ್ .
ವಿಜಯ ದರ್ಪಣ ನ್ಯೂಸ್ , ಬೆಂಗಳೂರು ಡಿಸೆಂಬರ್ 18, 2023: ಸುಸ್ಥಿರ ಸಾರಿಗೆ ವಿಚಾರದಲ್ಲಿ ಮಹತ್ವದ ಸಾಧನೆ ಮಾಡಿರುವ ಮಿಲಿಂದ್ ಸೋಮನ್, ಭಾರತದ ಫಿಟ್ನೆಸ್ ಐಕಾನ್, ಅವರು 200 ಕಿ.ಮೀ ಎಲೆಕ್ಟ್ರಿಕ್ ವಾಹನ (ಇವಿ) ಯಾನವನ್ನು ಬೆಂಗಳೂರಿನಲ್ಲಿ ಪೂರ್ಣಗೊಳಿಸಿದ್ದಾರೆ. ಪರಿಸರ-ಸ್ನೇಹಿ ಸಾರಿಗೆಯನ್ನು ಉತ್ತೇಜಿಸುವ ಮತ್ತು ಮಾಲಿನ್ಯ ತಗ್ಗಿಸಲು ಕಾರ್ಬನ್ ಪ್ರಮಾಣ ಕಡಿಮೆ ಮಾಡುವ ಪ್ರಯತ್ನವಾದ ಗ್ರೀನ್ ರೈಡ್ 3.0 ಅಭಿಯಾನದಲ್ಲಿ ಈ ಮಹತ್ವದ ಮೈಲುಗಲ್ಲು ದಾಖಲಾಗಿದೆ. ಮಿಲಿಂದ್, ಆರೋಗ್ಯಕರ ಮತ್ತು ಪರಿಸರ ಪ್ರಜ್ಞೆಯ ಜೀವನವನ್ನು ಪ್ರತಿಪಾದಿಸುತ್ತಿದ್ದು, ಟಿವಿಎಸ್…