ಕೆಯುಡಬ್ಲ್ಯುಜೆ ವಾರ್ಷಿಕ ಪ್ರಶಸ್ತಿಗಳು ಪ್ರಕಟ

ವಿಜಯ ದರ್ಪಣ ನ್ಯೂಸ್ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ,(KUWJ) ಕೆಯುಡಬ್ಲ್ಯುಜೆ ವಾರ್ಷಿಕ ಪ್ರಶಸ್ತಿಗಳು ಬೆಂಗಳೂರು ಜನವರಿ 31: ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘದ (ಕೆಯುಡಬ್ಲ್ಯೂಜೆ) 2022-23 ನೇ ಸಾಲಿನ ವಾರ್ಷಿಕ ಪ್ರಶಸ್ತಿಗಳನ್ನು ಪ್ರಕಟಿಸಲಾಗಿದ್ದು, ದಾವಣಗೆರೆಯಲ್ಲಿ ಇದೇ ಫೆ. 3 ಮತ್ತು 4 ರಂದು ನಡೆಯುವ 38ನೇ ರಾಜ್ಯ ಪತ್ರಕರ್ತರ ಸಮ್ಮೇಳನದಲ್ಲಿ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಗುವುದು ಎಂದು ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ತಿಳಿಸಿದ್ದಾರೆ. ಪ್ರಶಸ್ತಿಗಳ ವಿವರ: 1. ಜಿ. ನಾರಾಯಣಸ್ವಾಮಿ ಪ್ರಶಸ್ತಿ (ಅತ್ಯುತ್ತಮ ಗ್ರಾಮಾಂತರ ವರದಿಗೆ)…

Read More

ದೇವನಹಳ್ಳಿ ತಾಲ್ಲೂಕು ಭೂಸ್ವಾಧೀನ ವಿವಾದ: ರೈತ ಬಣಗಳೊಂದಿಗೆ ಸಚಿವದ್ವಯರ ಸಭೆ.

ವಿಜಯ ದರ್ಪಣ ನ್ಯೂಸ್. ಖನಿಜ ಭವನದಲ್ಲಿ ನಡೆದ ಸಭೆ: ಭೂಸ್ವಾಧೀನಕ್ಕೆ ಪರ-ವಿರೋಧ, ಸಿಎಂ ಜತೆ ಅಂತಿಮ ಚರ್ಚೆ. ದೇವನಹಳ್ಳಿ ತಾಲ್ಲೂಕು ಭೂಸ್ವಾಧೀನ ವಿವಾದ: ರೈತ ಬಣಗಳೊಂದಿಗೆ ಸಚಿವದ್ವಯರ ಸಭೆ. ಬೆಂಗಳೂರು ಜನವರಿ 24: ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲ್ಲೂಕಿನ ಚನ್ನರಾಯಪಟ್ಟಣ ಹೋಬಳಿಯ ಪಾಳ್ಯ 2ನೇ ಹಂತದ ಕೈಗಾರಿಕಾ ಪ್ರದೇಶ ಅಭಿವೃದ್ಧಿಗೆ ಸಂಬಂಧಿಸಿದಂತೆ ಭೂಸ್ವಾಧೀನದ ಪರ ಮತ್ತು ವಿರೋಧವಿರುವ ಎರಡೂ ಗುಂಪುಗಳ ರೈತರೊಂದಿಗೆ ಭಾರೀ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ ಬಿ ಪಾಟೀಲ ಮತ್ತು ಜಿಲ್ಲಾ ಉಸ್ತುವಾರಿ…

Read More

ಬೈಕೆರೆ ನಾಗೇಶ್ ನಾಡಿನ ಅಪರೂಪದ ಅಧಿಕಾರಿ.

ವಿಜಯ ದರ್ಪಣ ನ್ಯೂಸ್ ಸಜ್ಜನ ಸಹೃದಯಿ ಬೈಕೆರೆ ನಾಗೇಶ್ (72) ಇಷ್ಟು ಬೇಗ ನಮ್ಮನ್ನು ಅಗಲುವರು ಎಂದು ನಿರೀಕ್ಷಿಸಿರಲಿಲ್ಲ. ಸಕಲೇಶಪುರ ತಾಲ್ಲೂಕು ಕುಗ್ರಾಮ ಬೈಕೆರೆಯಿಂದ ದೆಹಲಿ ತನಕ ನಾಗೇಶ್ ಪಯಣಿಸಿದ ಹಾದಿ ನೋಡಿದರೆ ಎಂಥವರಿಗೂ ನಿಬ್ಬೆರಗಾಗುವಂತಾದ್ದು. ಯಾರ ವೈರತ್ವವನ್ನು ಕಟ್ಟಿಕೊಳ್ಳದ ಮುಗುಳ್ನಗೆ ಸ್ನೇಹತ್ವದಲ್ಲಿಯೇ ತನ್ನವರನ್ನಾಗಿಸಿಕೊಂಡು ಎಲ್ಲರೊಳಗೂ ಸರಳ ವ್ಯಕ್ತಿತ್ವದ ಛಾಪು ಮೂಡಿಸುತ್ತಿದ್ದ ನಾಗೇಶ್ ನಾಡಿನ ಅಪರೂಪದ ಕ್ರಿಯಾಶೀಲ ಅಧಿಕಾರಿ. ಜಾಫರ್ ಷರೀಫ್ ಬಳಿ ಆಪ್ತ ಕಾರ್ಯದರ್ಶಿಯಾಗಿ ದೆಹಲಿಯತ್ತ ಮುಖ ಮಾಡಿದವರು ಮತ್ತೆ ರಾಜ್ಯ ಸೇವೆಗೆ ಹಿಂತಿರುಗಲಿಲ್ಲ. ದೆಹಲಿಯನ್ನು…

Read More

ಮಂತ್ರಾಕ್ಷತೆ ಎಂಬುದು ಲೋಕಾಸಭಾ ಚುನಾವಣೆಯ ತಂತ್ರಾಕ್ಷತೆ

ವಿಜಯ ದರ್ಪಣ ನ್ಯೂಸ್ ಸುಮಾರು ಇಪ್ಪತ್ತೊಂದು  ಸಾವಿರ ಮೂಟೆ ಅಕ್ಕಿಯಲ್ಲಿ ಇನ್ನೂರೈವತ್ತು ಮೂಟೆ ಅರಿಶಿಣವನ್ನು ಬೆರೆಸಿದ ಮಂತ್ರಾಕ್ಷತೆ ಎಂಬುದು ರಾಜಕೀಯ ಪಕ್ಷವೊಂದರ ಚುನಾವಣಾ ಗಿಮಿಕ್ ಆಗಿದ್ದು ಅದು ಜನಮಾನಸದಲ್ಲಿ ಸಾರಾಸಗಟಾಗಿ ಬಯಲಾಗುತ್ತಿದೆ. ಇದೇ ವರ್ಷ ಏಪ್ರಿಲ್ ತಿಂಗಳಿನಲ್ಲಿ ನಡೆಯುವ ಲೋಕಸಭಾ ಚುನಾವಣೆಯನ್ನು ಹಿಂದೂಗಳ ಹಿಂದೂ ಸಂಪ್ರದಾಯದಲ್ಲಿ ಬದುಕಿರುವವರ ಮನ ಸೆಳೆಯಲು ರಾಜಕೀಯ ಪಕ್ಷವೊಂದು ಹುನ್ನಾರ ನಡೆಸಿದೆ. ಅಯೋಧ್ಯೆಯಲ್ಲಿ ಇನ್ನೂ ರಾಮನ ದೇವಸ್ಥಾನವಿಲ್ಲ. ರಾಮನ ದೇವಸ್ಥಾನದಲ್ಲಿ ಮಂತ್ರಾಕ್ಷತೆ ಕೊಡುವ ಪದ್ಧತಿ ಇಲ್ಲಿಯವರೆಗೂ ಇರಲಿಲ್ಲ. ದೇವಸ್ಥಾನದ ಗರ್ಭಗುಡಿಯಲ್ಲಿ ತಯಾರಾಗಬೇಕಾದ ಮಂತ್ರಾಕ್ಷತೆ…

Read More

ಎಳ್ಳು ಬೆಲ್ಲ ತಿಂದು ಒಳ್ಳೆಯ ಮಾತಾಡು……

ವಿಜಯ ದರ್ಪಣ ನ್ಯೂಸ್ ಎಳ್ಳು ಬೆಲ್ಲ ತಿಂದು ಒಳ್ಳೆಯ ಮಾತಾಡು…… ಸಂಕ್ರಾಂತಿಯ ಸವಿ ನುಡಿಯಿದು….. ವಿಷಯ ಯಾವುದೇ ಇರಲಿ ಕನಿಷ್ಠ ಒಳ್ಳೆಯ ಮಾತನ್ನಾದರು ಆಡಿದರೆ ಎಷ್ಟೋ ಸಮಸ್ಯೆಗಳ ದುಷ್ಪರಿಣಾಮಗಳು ಕಡಿಮೆಯಾಗುತ್ತದೆ…… ದ್ವೇಷವನ್ನು ಸ್ವಲ್ಪ ಕಡಿಮೆ ಮಾಡಿಕೊಳ್ಳೋಣ , ಪ್ರೀತಿಯನ್ನು ಸ್ವಲ್ಪ ಹೆಚ್ಚು ಮಾಡಿಕೊಳ್ಳೋಣ . ಕೋಪವನ್ನು ಸ್ವಲ್ಪ ಕಡಿಮೆ ಮಾಡಿಕೊಳ್ಳೋಣ , ತಾಳ್ಮೆಯನ್ನು ಸ್ವಲ್ಪ ಹೆಚ್ಚು ಮಾಡಿಕೊಳ್ಳೋಣ . ಸ್ವಾರ್ಥವನ್ನು ಸ್ವಲ್ಪ ಕಡಿಮೆ ಮಾಡಿಕೊಳ್ಳೋಣ , ತ್ಯಾಗವನ್ನು ಸ್ವಲ್ಪ ಹೆಚ್ಚು ಮಾಡಿಕೊಳ್ಳೋಣ. ಗಲಾಟೆಗಳನ್ನು ಸ್ವಲ್ಪ ಕಡಿಮೆ ಮಾಡಿಕೊಳ್ಳೋಣ…

Read More

ಕನ್ನಡಿಗನ ಅದ್ಭುತ ಸಾಧನೆ: ತೈಲ ವರ್ಣ ಚಿತ್ರಗಳ ಮೂಲಕ ಪೌರಾಣಿಕ ಕಥೆಗಳ ಅನಾವರಣ.

ವಿಜಯ ದರ್ಪಣ ನ್ಯೂಸ್ ಬೆಂಗಳೂರು, ಜನವರಿ 5, 2024: ಭಾರತೀಯ ಪುರಾಣಗಳ ಶ್ರೀಮಂತ ಇತಿಹಾಸದಲ್ಲಿ ಮಹಾಭಾರತವು ಸದಾ ಪ್ರಸ್ತುತವಾಗಿರುವ ಮಹಾಕಾವ್ಯವಾಗಿದೆ. ಮಹಾಭಾರತವು ಕುರುವಂಶದ ಕಥೆ, ಕುರುಕ್ಷೇತ್ರ ಯುದ್ಧದಲ್ಲಿ ಕೌರವರು ಮತ್ತು ಪಾಂಡವರ ನಡುವಿನ ಧರ್ಮಯುದ್ಧದ ಕತೆಯನ್ನು ಮಹಾಭಾರತ ನವಿರಾಗಿ ಹೇಳುತ್ತದೆ. ಶೌರ್ಯ, ನೈತಿಕತೆ ಮತ್ತು ಬ್ರಹ್ಮಾಂಡದ ಸಮತೋಲನವೇ ಮಹಾಭಾರತದ ಮೂಲತಿರುಳಾಗಿದೆ. ಶ್ರೀ ಸ್ವಾಮಿ ಸಿ.ಜೆ ಅವರ ಮಹಾಭಾರತ ಸರಣಿಯು ಕೇವಲ ತೈಲ ವರ್ಣ ಚಿತ್ರಗಳ ಸಂಗ್ರಹವಲ್ಲ, ಬದಲಿಗೆ ಕಾಲಾತೀತವಾದ ಸಾಹಸಗಾಥೆಯ ಸೊಗಸಾದ ನಿರೂಪಣೆಯಾಗಿದೆ. ಶ್ರೀ ಸ್ವಾಮಿ ಅವರು…

Read More

ಮತ್ತೆ ಬಿಗ್ ಬಾಸ್ ಸುದ್ದಿ……..

ವಿಜಯ ದರ್ಪಣ ನ್ಯೂಸ್ ಮತ್ತೆ ಬಿಗ್ ಬಾಸ್ ಸುದ್ದಿ…….. ಸುಮಾರು ‌72 ಲಕ್ಷ ಜನರು ಒಬ್ಬ ಬಿಗ್ ಬಾಸ್ ಸ್ಪರ್ಧಿಯ ಪರವಾಗಿ ಮೊಬೈಲ್ ಆಪ್ ಮ‌ೂಲಕ ತಮ್ಮ ಬೆಂಬಲ ಸೂಚಿಸಿದ್ದಾರೆ ಎಂದು ಜನಪ್ರಿಯ ಬಿಗ್ ಬಾಸ್ ನಿರೂಪಕ ನಟ ಸುದೀಪ್ ಹೇಳಿದ್ದಾರೆ. ಉಳಿದ ಸ್ಪರ್ಧಿಗಳ ಬೆಂಬಲ ಎಲ್ಲವನ್ನೂ ಒಟ್ಟು ಮಾಡಿದರೆ ಸುಮಾರು ಒಂದು ಕೋಟಿ ಆಗಬಹುದು. ಅವರ ಮಾತುಗಳು ಸತ್ಯ ಇರಬಹುದು ಎಂಬ ಭರವಸೆಯೊಂದಿಗೆ,… ಕರ್ನಾಟಕದ ಒಟ್ಟು ಜನಸಂಖ್ಯೆ ಸುಮಾರು 7 ಕೋಟಿ. ಅದರಲ್ಲಿ ಮತದಾರರ ಸಂಖ್ಯೆ…

Read More

ಬೆಂಗಳೂರು ಮಲ್ಲೇಶ್ವರದಲ್ಲಿ ಕರವೇ ಕಾರ್ಯಕರ್ತರಿಂದ ಕನ್ನಡದ ಕಹಳೆ

ವಿಜಯ ದರ್ಪಣ ನ್ಯೂಸ್    ಬೆಂಗಳೂರು ಮಲ್ಲೇಶ್ವರಂ ನ ಸಂಪಿಗೆ ರಸ್ತೆಯಲ್ಲಿ ನಾರಾಯಣಗೌಡ ಬಳಗದ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಮೆರವಣಿಗೆಯ ಮೂಲಕ ಸಾಗುತ್ತ ಅಂಗಡಿ ಮುಂಗಟ್ಟುಗಳ ನಾಮಫಲಕಗಳಲ್ಲಿ ಕಡ್ಡಾಯವಾಗಿ ಕನ್ನಡ ಬಳಸುವಂತೆ ಕೋರಿದರು. ಕೆಲ ಕಾರ್ಯಕರ್ತರು ಅಂಗಡಿಗಳ ಮುಂಭಾಗದಲ್ಲಿ ಅಳವಡಿಸಿದ್ದ ಎಲ್‌ಇಡಿ ಆಂಗ್ಲ ಫಲಕಗಳನ್ನು ಹೊಡೆದು ಹಾಕುತ್ತಿದ್ದರು. ರಸ್ತೆಬದಿಯಲ್ಲಿದ್ದ ಬೃಹತ್ ಆಂಗ್ಲ ಜಾಹಿರಾತು ಫಲಕಗಳನ್ನು ಸಹ ಹರಿದು ಹಾಕುತ್ತಿದ್ದರು. ಈ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಸೂಕ್ಷ್ಮ ಬಿಗಿ ಬಂದೋಬಸ್ತನ್ನು ಸಹ ಪೊಲೀಸರು ಮಾಡಿದ್ದರು. ಕೆಲಕಡೆ ಟ್ರಾಫಿಕ್…

Read More

ಸರ್ಕಾರ ಪತ್ರಕರ್ತರ ಬೇಡಿಕೆ ಈಡೇರಿಸಲಿ : ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿ ಗೋಪಾಲ ಗೌಡರು

ವಿಜಯ ದರ್ಪಣ ನ್ಯೂಸ್ ಬೆಂಗಳೂರು : ರಾಜ್ಯದ ಪತ್ರಕರ್ತರ ನ್ಯಾಯಯುತ ಬೇಡಿಕೆಗಳನ್ನು ಶೀಘ್ರವಾಗಿ ರಾಜ್ಯ ಸರ್ಕಾರ ಈಡೇರಿಸಬೇಕು ಎಂದು ಸರ್ವೋಚ್ಛ ನ್ಯಾಯಾಲಯದ ನಿವೃತ್ತ ನ್ಯಾಯ ಮೂರ್ತಿಗಳಾದ ವಿ. ಗೋಪಾಲ ಗೌಡ ಸರ್ಕಾರವನ್ನು ಒತ್ತಾಯಿಸಿದ್ದಾರೆ. ಅವರು ಡಿಸೆಂಬರ್ 23ರಂದು ಬೆಂಗಳೂರಿನ ರವೀಂದ್ರ ಕಲಾ ಕ್ಷೇತ್ರದಲ್ಲಿ ರಾಜ್ಯ ಕಾರ್ಯ ನಿರತ ಪತ್ರಕರ್ತರ ಧ್ವನಿ ಸಂಘಟನೆಯಿಂದ ಆಯೋಜಿಸಲಾದ `ರಾಜ್ಯಮಟ್ಟದ ಪತ್ರಕರ್ತರ ಕಾರ್ಯಾಗಾರ, ಪ್ರತಿಭಾ ಪುರಸ್ಕಾರ, ಸಾಂಸ್ಕøತಿಕ ಉತ್ಸವ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭ’ವನ್ನು ಉದ್ಘಾಟಿಸಿ  ಮಾತನಾಡಿದರು. “ಪತ್ರಿಕಾರಂಗವನ್ನು ಪ್ರಜಾಪ್ರಭುತ್ವದ ನಾಲ್ಕನೇ ಅಂಗ…

Read More

ಜೆಎನ್-1 ವೈರಸ್ ಕೊರೋನಾ ವೈರಸ್‌ನಷ್ಟು ಆಘಾತಕಾರಿಯಲ್ಲ

ವಿಜಯ ದರ್ಪಣ ನ್ಯೂಸ್ ಬೆಂಗಳೂರು ಡಿಸೆಂಬರ್:ಇದನ್ನು ನಮ್ಮಲ್ಲೇ ಕೆಲವು ವೈದ್ಯರು ಡಂಗೂರ ಬಾರಿಸಿಕೊಂಡು ಹೇಳುತ್ತಿದ್ದರೂ ಕೆಲವು ದೃಶ್ಯಮಾಧ್ಯಮಗಳು ಜನರಿಗೆ ಅರಿವು ಮೂಡಿಸುವ ಭ್ರಮೆಯಿಂದ ಭಯೋತ್ಪಾದಕರಂತೆ ಭಯದ ಉತ್ಪಾದನೆ ಮಾಡುತ್ತಿವೆ. ಇದೊಂದು ಕೋವಿಡ್-19, ಓಮಿಕ್ರಾನ್ ತಳಿಯ ಮುಂದಿನ ಮಾರ್ಪಟ್ಟ ಇನ್ನೊಂದು ವೈರಸ್ ಅಷ್ಟೆ. ಚಳಿಗಾಲದಲ್ಲಿ ಸಾಮಾನ್ಯವಾಗಿ ವೈರಸ್ ಅಟ್ಯಾಕ್ ಆಗುತ್ತಲೇ ಇರುತ್ತದೆ. ನವೆಂಬರ್, ಡಿಸೆಂಬರ್, ಜನವರಿ ಚಳಿಗಾಲವಾದ್ದರಿಂದ ಈ ಕಾಲವು ವೈರಸ್‌ಗಳಿಗೆ ಅನುಕೂಲಕರವಾಗಿರುವುದರಿಂದ ಮನುಷ್ಯನ ಉಸಿರಾಟದಿಂದ ಒಬ್ಬರಿಂದ ಮತ್ತೊಬ್ಬರಿಗೆ ಸುಲಭವಾಗಿ ಹರಡುತ್ತದೆ. ಈಗಂತೂ ಜನರಲ್ಲಿ ವೈರಸ್ ಅಂದರೆ ಭಯಭೀತರಾಗುವ…

Read More