ಭಾರತದ ಮತದಾರರು ಮತ್ತು ಚುನಾಯಿತ ಜನಪ್ರತಿನಿಧಿಗಳು……..
ವಿಜಯ ದರ್ಪಣ ನ್ಯೂಸ್…. ಭಾರತದ ಮತದಾರರು ಮತ್ತು ಚುನಾಯಿತ ಜನಪ್ರತಿನಿಧಿಗಳು…….. ಇತ್ತೀಚಿನ ಚುನಾವಣಾ ಫಲಿತಾಂಶದ ಹಿನ್ನೆಲೆಯಲ್ಲಿ…… ಭಾರತದ ಮತದಾರರು ಬುದ್ಧಿವಂತರೇ, ದಡ್ಡರೇ, ಮೂರ್ಖರೇ, ಮುಗ್ಧರೇ, ಭ್ರಷ್ಟರೇ, ಸಂವೇದನಾಶೀಲರೇ, ಚಿಂತನಶೀಲರೇ, ಮಾರಾಟವಾಗುವರೇ, ಊಸರವಳ್ಳಿಗಳೇ, ಸಮಯ ಸಾಧಕರೇ, ಅವಕಾಶವಾದಿಗಳೇ, ಸ್ವಾರ್ಥಿಗಳೇ, ಪ್ರಾಮಾಣಿಕರೇ, ನಿಷ್ಠಾವಂತರೇ, ಅಧರ್ಮಿಗಳೇ, ಆಸೆ ಆಮಿಷಗಳಿಗೆ ಬಲಿಯಾಗುವವರೇ, ಅದನ್ನು ಮೀರುವವರೇ, ಹೇಗೆ ಇವರನ್ನು ಅರ್ಥಮಾಡಿಕೊಳ್ಳುವುದು….. ಭಾರತ ಎಂಬುದು ಅತ್ಯಂತ ವೈವಿಧ್ಯಮಯ ದೇಶ. ವಿವಿಧ ಗಣ ರಾಜ್ಯಗಳ ಒಕ್ಕೂಟ. ಬಹುತ್ವ ಸಂಸ್ಕೃತಿಯ ದೇಶ ಎಂಬುದು ಚುನಾವಣಾ ರಾಜಕೀಯದಲ್ಲಿ ಸ್ಪಷ್ಟವಾಗಿ ಗಮನಿಸಬಹುದು….