--Ads--

ಹೆತ್ತವರಿಗೆ ,ಓದಿದ ಶಾಲೆಗೆ ಹಾಗು ಹುಟ್ಟಿದ ಊರಿಗೆ ಕೀರ್ತಿ ತರುವಂತ ಕೆಲಸ‌ ಮಾಡಿ : ನಿವೃತ್ತ ಶಿಕ್ಷಕ ಪಿ.ವೆಂಕಟೇಶ್ 

On: March 9, 2026 3:09 PM
Follow ಮಾಡಿ
--Ads--

Whatsapp Channel

Join Now

Telegram Group

Join Now

ವಿಜಯ ದರ್ಪಣ ನ್ಯೂಸ್……

ಹೆತ್ತವರಿಗೆ ,ಓದಿದ ಶಾಲೆಗೆ ಹಾಗು ಹುಟ್ಟಿದ ಊರಿಗೆ ಕೀರ್ತಿ ತರುವಂತ ಕೆಲಸ‌ ಮಾಡಿ : ನಿವೃತ್ತ ಶಿಕ್ಷಕ ಪಿ.ವೆಂಕಟೇಶ್ 

ಶಿಡ್ಲಘಟ್ಟ : ಹೆತ್ತವರಿಗೆ ,ಓದಿದ ಶಾಲೆಗೆ ಹಾಗು ಹುಟ್ಟಿದ ಊರಿಗೆ ಕೀರ್ತಿ ತರುವಂತ ಕೆಲಸ‌ ಮಾಡಿ ಆ ಕೆಲಸವೇ ಶಿಕ್ಷಕರಿಗೆ ನೀಡುವ ಗೌರಯುತ ಗುರುದಕ್ಷಿಣೆ ಎಂದು ನಿವೃತ್ತ ಶಿಕ್ಷಕ ಪಿ.ವೆಂಕಟೇಶ್ ತಿಳಿಸಿದರು.

ತಾಲ್ಲೂಕಿನ ಮೇಲೂರು ಗ್ರಾಮದ ಸರ್ಕಾರಿ ಪ್ರಾಥಮಿಕ, ಮಾಧ್ಯಮಿಕ ಮತ್ತು ಪ್ರೌಢಶಾಲೆಯ ಹಳೆಯ ವಿದ್ಯಾರ್ಥಿಗಳಿಂದ ಹಮ್ಮಿಕೊಂಡಿದ್ದ ಗುರು ವಂದನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ವಿದ್ಯಾರ್ಥಿಗಳು ಶಾಲೆಯಿಂದ ಹೊರಹೋದ ನಂತರ ಜೀವನದಲ್ಲಿ ಹಲವು ಏಳು ಬೀಳುಗಳನ್ನು ಕಂಡು ಎತ್ತರೆತ್ತರಕ್ಕೆ ಬೆಳೆಯುವ ಜತೆಗೆ ಶಿಕ್ಷಕರನ್ನು ಗೌರವಿಸುವುದು ಸಂತಸ ಸಂಗತಿ ವಿದ್ಯಾರ್ಥಿಗಳು ಸಮಾಜದಲ್ಲಿ ಎತ್ತರದ ಸ್ಥಾನ ತಲುಪಿ ಇತರರಿಗೆ ಮಾದರಿಯಾಗಿ ಬದುಕಬೇಕೆಂದು ಹೇಳಿದರು.

ದಶಕಗಳ ನಂತರ ಒಂದಾದ ಗುರು-ಶಿಷ್ಯರ ಅಪೂರ್ವ ಮಿಲನಕ್ಕೆ ಕಾರ್ಯಕ್ರಮ ಸಾಕ್ಷಿಯಾಯಿತು.
ಇದೇ ವೇಳೆ 1990 ರಿಂದ 1996ರ ವರೆಗಿನ ಪ್ರಾಥಮಿಕ, ಮಾಧ್ಯಮಿಕ ಮತ್ತು 1996 ರಿಂದ 1999ರ ವರೆಗಿನ ಪ್ರೌಢಶಾಲಾ ಹಂತದಲ್ಲಿ ಅಕ್ಷರ ಕಲಿಸಿದ ಹಿರಿಯ ಶಿಕ್ಷಕರನ್ನು ಹಳೆಯ ವಿದ್ಯಾರ್ಥಿಗಳು ಸನ್ಮಾನಿಸಿ ಗೌರವಿಸಿದರು.

ಈ ಸಂದರ್ಭದಲ್ಲಿ ನಿವೃತ್ತ ಶಿಕ್ಷಕರಾದ ಎಲ್.ಅಶ್ವತ್ಥನಾರಾಯಣ, ಜಿ.ಚಂದ್ರೆಗೌಡ, ಪಿ.ವೆಂಕಟೇಶ್, ಡಿ.ಧನಂಜಯ, ಡಿ.ನರಸಿಂಹಯ್ಯ, ಟಿ.ವಿಜಯ್ ಕುಮಾರ್, ಜಿ.ರವಿಕುಮಾರ್, ಆರ್.ಟಿ.ವೆಂಕಟೇಶ್, ಲೀಲಾವತಿ, ಗಿರಿಜಮ್ಮ, ಗ್ರಾಮ ಪಂಚಾಯತಿ ಮಾಜಿ ಅದ್ಯಕ್ಷ ಆರ್.ಎ.ಉಮೇಶ್, ಎಚ್‌.ಎನ್‌.ಜ್ಯೋತಿ, ತಿರುಮಲೇಶ್‌, ಬಾಲಮುರಳಿಕೃಷ್ಣ ಮುಂತಾದವರು ಪಾಲ್ಗೊಂಡಿದ್ದರು.

WhatsApp

Join Now

Telegram

Join Now

Instagram

Join Now