ಅಂಬೇಡ್ಕರ್ – ಗಾಂಧಿ…., ಶತ್ರುಗಳೇ – ಮಿತ್ರರೇ…. ಉದಾಹರಣೆ ಮತ್ತು ಎಚ್ಚರಿಕೆ……
ವಿಜಯ ದರ್ಪಣ ನ್ಯೂಸ್ ಅಂಬೇಡ್ಕರ್ – ಗಾಂಧಿ…., ಶತ್ರುಗಳೇ – ಮಿತ್ರರೇ…. ಉದಾಹರಣೆ ಮತ್ತು ಎಚ್ಚರಿಕೆ…… ಭಾರತೀಯ ಸಮಾಜದಲ್ಲಿ ಅಸ್ಪೃಶ್ಯತೆ, ಜಾತಿ ಪದ್ದತಿಯ ನಿರ್ಮೂಲನೆಯಾಗಿ ಸಮ ಸಮಾಜ ನಿರ್ಮಾಣವಾಗಬೇಕೆಂಬುದು ಎಷ್ಟು ಮುಖ್ಯವೋ, ಸುಮಾರು ನೂರು ವರ್ಷಗಳ ಹಿಂದೆ ಭಾರತದ ಸ್ವಾತಂತ್ರ್ಯ ಗಳಿಸುವುದು ಸಹ ಅಷ್ಟೇ ಮುಖ್ಯವಾಗಿತ್ತು ಎಂದು ಭಾವಿಸುವವರಿಗೆ ಅಂಬೇಡ್ಕರ್ ಮತ್ತು ಗಾಂಧಿ ಇಬ್ಬರು ಮಹತ್ವದ ವ್ಯಕ್ತಿಗಳಾಗಿ ಕಾಣುತ್ತಾರೆ… ಹಾಗೆಯೇ ಸಂವಿಧಾನಾತ್ಮಕ ಪ್ರಜಾಪ್ರಭುತ್ವವನ್ನು ಉಳಿಸುವ ಮತ್ತು ನೈತಿಕ ಮೌಲ್ಯಗಳನ್ನು ಬೆಳೆಸುವ ಮನಸ್ಸಿರುವವರಿಗೆ ಗಾಂಧಿ ಮತ್ತು ಅಂಬೇಡ್ಕರ್ ಆದರ್ಶಗಳಾಗಿಯೇ…
