ಚರ ಜಂಗಮನಾಗಿ ಕಾಡಿನಲ್ಲಿ ನಡೆಯುತ್ತಾ ಇರುವಾಗ…..
ವಿಜಯ ದರ್ಪಣ ನ್ಯೂಸ್ ಬೆಂಗಳೂರು ಜನವರಿ 05 : ಚರ ಜಂಗಮನಾಗಿ ಕಾಡಿನಲ್ಲಿ ನಡೆಯುತ್ತಾ ಇರುವಾಗ….. ದಟ್ಟ ಕಾನನದ ನಡುವೆ, ನಿಶ್ಯಬ್ದ ನೀರವತೆಯ ಒಳಗೆ, ನಿರ್ಜನ ಪ್ರದೇಶದ ಹಾದಿಯಲ್ಲಿ, ಏರಿಳಿವ ತಿರುವುಗಳ ದಾರಿಯಲ್ಲಿ, ಸಣ್ಣ ಭೀತಿಯ ಸುಳಿಯಲ್ಲಿ, ಪಕ್ಷಿಗಳ ಕಲರವ, ಕೀಟಗಳ ಗುಂಯ್ಗೂಡುವಿಕೆ, ಪ್ರಾಣಿಗಳ ಕೂಗಾಟ, ಹಾವುಗಳ ಸರಿದಾಟ, ಗಿಡಮರಗಳ ನಲಿದಾಟ, ಮೋಡಗಳ ನೆರಳು ಬೆಳಕಿನಾಟ, ಮಿಂಚು ಗುಡುಗುಗಳ ಆರ್ಭಟ, ಮಳೆ ಹನಿಗಳ ಚೆಲ್ಲಾಟ, ವಾಹನಗಳ ಸುಳಿದಾಟ, ನರ ಮನುಷ್ಯರ ಅಲೆದಾಟ, ಹೊಳೆ ಕಾಲುವೆಗಳ ಜುಳು ಜುಳು…