ಪ್ರೀತಿ ಮತ್ತು ಜಾತಿ… ಸಂಸ್ಕಾರ ಮತ್ತು ಬೆತ್ತಲೆ… ಮಣಿಪುರ ಮತ್ತು ಕರ್ನಾಟಕ…..
ವಿಜಯ ದರ್ಪಣ ನ್ಯೂಸ್ ಎಳೆಯ ಮಕ್ಕಳ ಪ್ರೀತಿಗೆ ಪ್ರತಿಯಾಗಿ ಅವರ ತಾಯಿಯನ್ನು ಬೆತ್ತಲೆಗೊಳಿಸಿ ಊರಿನಲ್ಲಿ ಮೆರವಣಿಗೆ ಮಾಡಿ ಕಂಬಕ್ಕೆ ಕಟ್ಟಿ ಸಾರ್ವಜನಿಕವಾಗಿ ಥಳಿಸುವುದು, ಅದರಲ್ಲಿ ಕೆಲವು ಮಹಿಳೆಯರು ಸಹ ಭಾಗಿಯಾಗುವುದು ಯಾವ ಸಂಸ್ಕಾರ ಎಂದು ಮನಸ್ಸು ಕಾಡಲಾರಂಭಿಸಿದೆ. ಹುಡುಗನ ಜೊತೆ ಇವರ ರಾಕ್ಷಸ ಪ್ರವೃತ್ತಿಗೆ ಹೆದರಿ ಪರಾರಿಯಾದ ಯುವತಿ ಸಹ ಹೆಣ್ಣಲ್ಲವೇ… ದೂರದ ಮಣಿಪುರದ ಘಟನೆಗೆ ಮಿಡಿದ ನಮ್ಮ ಹೃದಯಗಳು ಈಗ ನಮ್ಮ ನೆಲದಲ್ಲಿಯೇ ಆ ರೀತಿಯ ಘಟನೆ ನಡೆದಿರುವಾಗ ನಾವು ಹೇಗೆ ಪ್ರತಿಕ್ರಿಯಿಸುವುದು……… ಇಲ್ಲಿ ಯೋಚಿಸಬೇಕಾದ…