ಕನ್ನಡ ರಾಜ್ಯೋತ್ಸವದ ಆಚರಣೆ ಅರ್ಥಪೂರ್ಣವಾಗಿರಲಿ. ಇದು ಕೇವಲ ಮನರಂಜನಾ ಹಬ್ಬವಲ್ಲ…….
ವಿಜಯ ದರ್ಪಣ ನ್ಯೂಸ್… ಕನ್ನಡ ರಾಜ್ಯೋತ್ಸವದ ಆಚರಣೆ ಅರ್ಥಪೂರ್ಣವಾಗಿರಲಿ. ಇದು ಕೇವಲ ಮನರಂಜನಾ ಹಬ್ಬವಲ್ಲ……. ನವೆಂಬರ್ ತಿಂಗಳೆಂದರೆ ಬಹುತೇಕ ಇಡೀ ತಿಂಗಳು ಕರ್ನಾಟಕದಾದ್ಯಂತ ರಾಜ್ಯೋತ್ಸವ ಸಂಭ್ರಮ. ಎಲ್ಲೆಲ್ಲೂ ಕನ್ನಡದ ಹಬ್ಬವನ್ನು ಆಚರಿಸಲಾಗುತ್ತದೆ. ಬಹುತೇಕ ಮಧ್ಯಮ, ಕೆಳ ಮಧ್ಯಮ, ಬಡವರು ಕಾರ್ಖಾನೆಗಳ ಕಾರ್ಮಿಕ ವರ್ಗದ ಕನ್ನಡ ಸಂಘ ಸಂಸ್ಥೆಗಳು, ವಾಹನ ಚಾಲಕರು, ಕನ್ನಡ ಹೋರಾಟಗಾರರು, ವಿವಿಧ ಸಾಂಸ್ಕೃತಿಕ ಸಂಘಟನೆಗಳು ಮುಂತಾದ ಎಲ್ಲರೂ ಅನೇಕ ವರ್ಷಗಳಿಂದ ಕನ್ನಡ ರಾಜ್ಯೋತ್ಸವವನ್ನು ಕೆಲವು ಕಡೆ ಸರಳವಾಗಿ, ಮತ್ತೆ ಕೆಲವು ಕಡೆ ವಿಜೃಂಭಣೆಯಿಂದ ಆಚರಿಸುತ್ತಾರೆ….
