--Ads--

ಹಾಪ್‌ಕಾಮ್ಸ್‌ಗೆ  ಸರ್ಕಾರದಿಂದ 12 ಕೋಟಿ ರೂ. ದುಡಿಯುವ ‘ಬಂಡವಾಳ ಕೋಡಿಸಲಾಗಿದೆ : ಸಚಿವ ಡಾ.ಎಂ.ಸಿ. ಸುಧಾಕರ್ 

On: March 18, 2026 1:39 AM
Follow ಮಾಡಿ
--Ads--

Whatsapp Channel

Join Now

Telegram Group

Join Now
ವಿಜಯ ದರ್ಪಣ ನ್ಯೂಸ್….

 ಹಾಪ್‌ಕಾಮ್ಸ್‌ಗೆ  ಸರ್ಕಾರದಿಂದ 12 ಕೋಟಿ ರೂ. ದುಡಿಯುವ ‘ಬಂಡವಾಳ ಕೋಡಿಸಲಾಗಿದೆ : ಸಚಿವ ಡಾ.ಎಂ.ಸಿ. ಸುಧಾಕರ್ 

ಶಿಡ್ಲಘಟ್ಟ : ನಷ್ಟದಲ್ಲಿದ್ದ ಹಾಪ್‌ಕಾಮ್ಸ್‌ಗೆ 6 ತಿಂಗಳ ಹಿಂದೆ 12 ಕೋಟಿ ರೂ.ಗಳು ದುಡಿಯುವ ‘ಬಂಡವಾಳವನ್ನು ಸರ್ಕಾರದಿಂದ ಕೊಡಿಸಲಾಗಿದೆ ಇದರಿಂದ ವಿವಿಧ ಕಾರ್ಯ ಚಟುವಟಿಕೆಗಳನ್ನು ಹಮ್ಮಿಕೊಳ್ಳಬಹುದಾಗಿದೆ
ಎಂದು ಜಿಲ್ಲಾ ಉಸ್ತುವಾರಿ ಮಂತ್ರಿ ಡಾ.ಎಂ.ಸಿ.ಸುಧಾಕರ್ ತಿಳಿಸಿದರು.

ಬೆಂಗಳೂರಿನ ಗೃಹ ಕಚೇರಿಯಲ್ಲಿ ಭೇಟಿಯಾದ ಹಾಪ್‌ಕಾಮ್ ನ ನೂತನ ಅಧ್ಯಕ್ಷ ಮುತ್ತೂರು ಚಂದ್ರೇಗೌಡ ಅವರೊಂದಿಗೆ ಹಾಪ್‌ಕಾಮ್ಸ್‌ನ ಕಾರ್ಯ ಚಟುವಟಿಕೆಗಳು, ನಷ್ಟದಲ್ಲಿರುವ ಹಾಪ್ ಕಾಮ್ಸ್‌ನ್ನು ಲಾಭದಾಯಕದತ್ತ ಕೊಂಡೊಯ್ಯುವ ಬಗ್ಗೆ ಚರ್ಚಿಸಿದರು.

ತೋಟಗಾರಿಕೆ ಬೆಳೆಗಳಿಗೆ ಉತ್ತಮ ಬೆಲೆ ಸಿಗಬೇಕು, ಗುಣಮಟ್ಟದ ಬೆಳೆಗಳನ್ನು ಬೆಳೆಯುವಂತೆ ರೈತರನ್ನು ಪ್ರೋತ್ಸಾಹಿಸುವುದಕ್ಕೆ ಇನ್ನಷ್ಟು ಕಾರ್ಯಕ್ರಮಗಳು ನಡೆಯಬೇಕು ಎಂದು ಹೇಳಿದರು.

ತೋಟಗಾರಿಕೆ ಫಸಲನ್ನು ಪೂರೈಸಿರುವ ರೈತರಿಗೆ ದಿನ ದಿನಕ್ಕೂ ಹಣ ಪಾವತಿಸಲು ನೆರವಾಗಲಿದೆ ಕೆಲ ನೌಕರರು ಗ್ರಾಚ್ಯುಟಿ ಫಂಡ್ ನೀಡಿಲ್ಲ ಎಂದು ನ್ಯಾಯಾಲಯದ ಮೊರೆ ಹೋಗಿದ್ದು ಅವರಿಗೆ ಗ್ರಾಚ್ಯುಟಿ ಫಂಡ್ ಮತ್ತು ಪಿ.ಎಫ್ ಫಂಡ್ ನೀಡಲು ಈ ಅನುದಾನ ಸಹಾಯಕ್ಕೆ ಬರಲಿದೆ ಎಂದರು.

ಚನ್ನಪಟ್ಟಣ, ಚಿಕ್ಕಬಳ್ಳಾಪುರ, ಕೋಲಾರದಲ್ಲಿ ಹಾಪ್ ಕಾಮ್ಸ್ ಗೆ ಸೇರಿದ ಜಾಗ, ಗೋದಾಮು, ಶೇಖರಣಾ ಘಟಕಗಳಿದ್ದು ಅವುಗಳನ್ನು ಬಳಸಿಕೊಂಡು ಈ ಬೇಸಿಗೆಯಲ್ಲಿ ಮಾವಿನ ಹಣ್ಣಿನ ಪಲ್ಸ್ ತಯಾರಿಸುವ ಬಗ್ಗೆ ಚರ್ಚಿಸಲಾಯಿತು.

ಈ ವೇಳೆ ಮುತ್ತೂರು ಚಂದ್ರೇಗೌಡ ಹಾಪ್‌ಕಾಮ್ಸ್‌ನ ನೂತನ ಅಧ್ಯಕ್ಷರಾದ ನಂತರ ಡಾ.ಎಂ.ಸಿ.ಸುಧಾಕರ್ ಅವರನ್ನು ಭೇಟಿಯಾಗಿ ಸನ್ಮಾನಿಸಿದರು.

ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡ ಎಂ.ಶಶಿಧರ್ ಮುನಿಯಪ್ಪ, ಕೋಚಿಮುಲ್ ಮಾಜಿ ನಿರ್ದೇಶಕ ಆರ್.ಶ್ರೀನಿವಾಸ್, ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಮೇಲೂರು ಮುರಳಿ, ಭಕ್ತರಹಳ್ಳಿ ಚಿದಾನಂದಮೂರ್ತಿ
ಹಾಜರಿದ್ದರು.

WhatsApp

Join Now

Telegram

Join Now

Instagram

Join Now