ಶ್ರೀ ಸುಬ್ರಮಣ್ಯೇಶ್ವರ ಕೋ-ಆಪರೇಟಿವ್ ಬ್ಯಾಂಕ್ ವತಿಯಿಂದ ಬೃಹತ್ ಉಚಿತ ತಪಾಸಣಾ ಶಿಬಿರ
ವಿಜಯ ದರ್ಪಣ ನ್ಯೂಸ್…….
ಶ್ರೀ ಸುಬ್ರಮಣ್ಯೇಶ್ವರ ಕೋ-ಆಪರೇಟಿವ್ ಬ್ಯಾಂಕ್ ವತಿಯಿಂದ ಬೃಹತ್ ಉಚಿತ ತಪಾಸಣಾ ಶಿಬಿರ

ಬೆಂಗಳೂರು: ಚಾಮರಾಜು ಕಲ್ಯಾಣ ಮಂಟಪದಲ್ಲಿ ಶ್ರೀ ಸುಬ್ರಮಣ್ಯೇಶ್ವರ ಕೋ-ಆಪರೇಟಿವ್ ಬ್ಯಾಂಕ್ ಲಿಮಿಟಿಡ್ ವತಿಯಿಂದ ಬೃಹತ್ ಉಚಿತ ಆರೋಗ್ಯ ತಪಾಸಣಾ ಶಿಬಿರ
ಉದ್ಘಾಟನೆಯನ್ನು ಚಿಕ್ಕಪೇಟೆ ಶಾಸಕ ಉದಯ್ ಬಿ. ಗರುಡಾಚಾರ್ ರವರು, ಜಯನಗರ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷರಾದ ಎನ್.ನಾಗರಾಜು, ಅಧ್ಯಕ್ಷ ಡಿ.ಆರ್.ವಿಜಯಸಾರಥಿರವರು, ಉಪಾಧ್ಯಕ್ಷ ರಂಗಧಾಮ ಶೆಟ್ಟಿರವರು, ನಿರ್ದೇಶಕರುಗಳು ದೀಪ ಬೆಳಗಿಸಿ ಉಚಿತ ಆರೋಗ್ಯ ತಪಾಸಣಾ ಶಿಬಿರಕ್ಕೆ ಚಾಲನೆ ನೀಡಿದರು.
ಸಾವಿರಾರು ಸದಸ್ಯರು ಆರೋಗ್ಯ ತಪಾಸಣಾ ಶಿಬಿರದಲ್ಲಿ ಭಾಗವಹಿಸಿ, ತಪಾಸಣೆ ಮಾಡಿಸಿಕೊಂಡರು ಮತ್ತು ನೂರಕ್ಕೂ ಹೆಚ್ಚು ಜನರು ರಕ್ತದಾನ ಮಾಡಿದರು.
ಶಾಸಕ ಉದಯ್ ಬಿ.ಗರುಡಾಚಾರ್ ರವರು ಮಾತನಾಡಿ ಕೋ-ಆಪರೇಟಿವ್ ಬ್ಯಾಂಕ್ ನಡೆಸುವುದು ಸುಲಭವಲ್ಲ ಅದರು ಸುಬ್ರಮಣ್ಯೇಶ್ವರ ಕೋ-ಆಪರೇಟಿವ್ ಬ್ಯಾಂಕ್ ಜನಸ್ನೇಹಿ ಬ್ಯಾಂಕ್ ಎಂದು ಕೀರ್ತಿಗಳಿಸಿದೆ.
ಸಾರ್ವಜನಿಕರು ಕಾಲಕಾಲಕ್ಕೆ ಆರೋಗ್ಯ ತಪಾಸಣೆ ಮಾಡಸಿಕೊಳ್ಳಿ. 35ಸಾವಿರ ಸದಸ್ಯರಿಗಾಗಿ ಉಚಿತ ಆರೋಗ್ಯ ತಪಾಸಣೆ ಶಿಬಿರ ಆಯೋಜಿಸಿದ್ದಾರೆ.
ಮುಂದಿನ ದಿನಗಳಲ್ಲಿ ಸುಬ್ರಮಣ್ಯೇಶ್ವರ ಕೋ-ಆಪರೇಟಿವ್ ಬ್ಯಾಂಕ್ ಗೆ ಧನ ಸಹಾಯ ಮಾಡುತ್ತೇನೆ ಎಂದು ಹೇಳಿದರು.
ಎನ್.ನಾಗರಾಜುರವರು ಮಾತನಾಡಿ ರಾಷ್ಟ್ರೀಯ ಬ್ಯಾಂಕ್ ಗಳು ಸಮಾಜಮುಖಿ ಕಾರ್ಯಗಳು ಮಾಡವುದಿಲ್ಲ, ಕೋ-ಆಪರೇಟಿವ್ ಬ್ಯಾಂಕ್ ಗಳು ಸ್ಥಳೀಯರು ಮತ್ತು ಸದಸ್ಯರಿಗೆ ಉತ್ತಮ ಸೇವೆ ಮತ್ತು ಸಮಾಜಕ್ಕೆ ಬೇಕಾದ ಕೆಲಸಗಳು ಮಾಡುತ್ತದೆ.
ಸಮಾಜ ಸೇವೆ ಕೆಲಸಕ್ಕೆ ಎಲ್ಲರು ಕೈಜೋಡಿಸಬೇಕು. ಬ್ಯಾಂಕ್ ಅಭಿವೃದ್ದಿಯ ಜೊತೆಯಲ್ಲಿ ಸದಸ್ಯರ ಕ್ಷೇಮಾಭಿವೃದ್ಧಿ ಕುರಿತು ಕೆಲಸ ಮಾಡಬೇಕು.
ಡಿ.ಆರ್.ವಿಜಯಸಾರಥಿರವರು ಮಾತನಾಡಿ ಶ್ರೀ ಸುಬ್ರಮಣ್ಯೇಶ್ವರ ಕೋ-ಆಪರೇಟಿವ್ ಬ್ಯಾಂಕ್ ಲಿಮಿಟೆಡ್ ಸಮಾಜಮುಖಿ ಕಾರ್ಯಗಳು ಮಾಡುತ್ತಾ ಬಂದಿದೆ.
ಗುರಿ ಮತ್ತು ಗುರುಗಳ ಆಶೀರ್ವಾದ ಮತ್ತು ಆರೋಗ್ಯವಂತರಾಗಿ ಇದ್ದಾಗ ಜೀವನದಲ್ಲಿ ಸಾಧನೆ ಮಾಡಲು ಸಾಧ್ಯ.

ನಮ್ಮ ಬ್ಯಾಂಕ್ ವತಿಯಿಂದ ಪ್ರಥಮ ಬಾರಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರ ಆಯೋಜಿಸಲಾಗಿದೆ. ನಮ್ಮ ಸದಸ್ಯರಿಗೆ ಖಾಸಗಿ ಆಸ್ಪತ್ರೆ ಜೊತೆಯಲ್ಲಿ ಒಪ್ಪಂದವಾಗಿದೆ.
ಸದಸ್ಯರು ಮತ್ತು ಆಡಳಿತ ಮಂಡಳಿ ಜೊತೆಯಲ್ಲಿ ಉತ್ತಮ ಸಹಕಾರವಿರಬೇಕು. ಆಡಳಿತ ಮಂಡಳಿ ಮತ್ತು ಸದಸ್ಯರು ಜೊತೆಯಲ್ಲಿ ಉತ್ತಮ ಬಾಂಧ್ಯವವಿರಬೇಕು ಆಗ ಮಾತ್ರ ಸಹಕಾರ ಸಂಸ್ಥೆ ಉಳಿಯಲು ಸಾಧ್ಯ.
ಏಪ್ರಿಲ್ ತಿಂಗಳಲ್ಲಿ 25 ಖಾಸಗಿ ಸಂಸ್ಥೆಗಳ ಸಹಯೋಗದಲ್ಲಿ ನಮ್ಮ ಸದಸ್ಯರ ಮಕ್ಕಳಿಗೆ ಉದ್ಯೋಗ ಮೇಳ ಆಯೋಜಿಸಲಾಗಿದೆ
ಆರೋಗ್ಯ ತಪಾಸಣೆ ವಿಭಾಗಗಳು:
ಹೃದಯ, ಕಿಡ್ನಿ, ನರರೋಗ (ನ್ಯೂರಾಲಜಿ), ಕಣ್ಣು,ಮೂಗು-ಕಿವಿ-ಗಂಟಲು (ENT),ಮಕ್ಕಳ ವೈದ್ಯಕೀಯ (ಪೀಡಿಯಾಟ್ರಿಕ್ಸ್) ಮತ್ತು ಸಾಮಾನ್ಯ ತಪಾಸಣೆಯನ್ನು ವೈದೇಹಿ ಆಸ್ಪತ್ರ ಸಹಯೋಗ ನೀಡಿತು.
