ಒಳ್ಳೆಯತನವೇ ದೌರ್ಬಲ್ಯವಾಗಿರುವುದೇ?
ವಿಜಯ ದರ್ಪಣ ನ್ಯೂಸ್….. ಒಳ್ಳೆಯತನವೇ ದೌರ್ಬಲ್ಯವಾಗಿರುವುದೇ? ಹದಿ ಹರೆಯದ ವಯಸ್ಸಿನಲ್ಲಿ ನಡೆದಾಡೋ ನೆಲ ಕಾಣೊಲ್ಲ ಅಂತಾರೆ. ಅಂಥ ವಯಸ್ಸಿನಲ್ಲಿ ಹಿರಿಯರ ಮಾತು ಕಿವಿಗೆ ಬೀಳುವುದೂ ಅಷ್ಟಕ್ಕಷ್ಟೆ. ಓದಿನಲ್ಲಿ ಗಮನವಿಲ್ಲದ್ದಕ್ಕೆ ಪಿಯುಸಿ ಅರ್ಧಂಬರ್ಧ. ಗೋತಾ ಹೊಡೆದ ವಿಷಯ ಕಟ್ಟಿ ಪಾಸಾಗೋಕೆ ಮನಸ್ಸಿಲ್ಲ. ಕೆಲಸಕ್ಕೆ ಅಂತ ಅಲ್ಲಿ ಇಲ್ಲಿ ಅಲೆದರೆ ಅನುಭವವೂ ಇಲ್ಲ, ಕೆಲಸಕ್ಕೆ ಅಗತ್ಯವಿರುವ ಶಿಕ್ಷಣವೂ ಇಲ್ಲ ಅಂತ ಯಾರೂ ಕೆಲಸ ಕೊಡುವುದಿಲ್ಲ. ಒಂದು ವೇಳೆ ಸಣ್ಣ ಪುಟ್ಟ ಕೆಲಸ ಸಿಕ್ಕರೂ ಅವು ಮನಸ್ಸಿಗೆ ಹಿಡಿಸಲ್ಲ. ಕಲಿತಿದ್ದೇ ಕಡಿಮೆ…