ವಿಜಯ ದರ್ಪಣ ನ್ಯೂಸ್…..
ಕಲಬುರ್ಗಿಯಲ್ಲಿ 5 ನೇ ಪುಸ್ತಕ ಪ್ರಕಾಶಕರ ಸಾಂಸ್ಕೃತಿಕ ಸಮ್ಮೇಳನ

ಬೆಂಗಳೂರು: ಹೈದರಾಬಾದ್ ಕರ್ನಾಟಕ ಪುಸ್ತಕ ಪ್ರಕಾಶಕರ ಮುದ್ರಕರ ಮಾರಾಟಗಾರರ ಸಂಘದ ವತಿಯಿಂದ 5ನೇ ಬಾರಿಗೆ ಕಲ್ಯಾಣ ಕರ್ನಾಟಕ ಪುಸ್ತಕ ಪ್ರಕಾಶಕರ ಸಾಂಸ್ಕೃತಿಕ ಸಮ್ಮೇಳನವನ್ನು
2026ರ ಮೇ ಅಂತ್ಯದಲ್ಲಿ ನಡೆಸಲಾಗುವುದು ಎಂದು ಕಲ್ಯಾಣ ಕರ್ನಾಟಕ ಪುಸ್ತಕ ಪ್ರಕಾಶಕರ ಸಂಘದ ಅಧ್ಯಕ್ಷ ಮಹಿಪಾಲರೆಡ್ಡಿ ಸೇಡಂ ತಿಳಿಸಿದ್ದಾರೆ .

ಕಲ್ಯಾಣ ಕರ್ನಾಟಕ ಭಾಗದ ಹಿರಿಯ ಪ್ರಕಾಶಕರನ್ನು ಸಮ್ಮೇಳನದ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗುವುದು ಎಂದು ಅವರು ತಿಳಿಸಿದ್ದಾರೆ. ಕಲ್ಯಾಣ ಕರ್ನಾಟಕದ 7 ಜಿಲ್ಲೆಗಳ ಐತಿಹಾಸಿಕ ಸಾಹಿತ್ಯ ಸಾಂಸ್ಕೃತಿಕ ಪರಂಪರೆ ಮತ್ತು ಸ್ಥಳೀಯ ಗ್ರಾಮೀಣ ಜಾನಪದ ಸಾಹಿತ್ಯದ ಅನಾವರಣ.
ಜಿಲ್ಲೆಯ ಪ್ರತಿಭಾವಂತ ಸಾಹಿತಿಗಳ ಯುವಕವಿಗಳ ಪ್ರತಿಭೆಗಳ ಪ್ರತಿಭಾ ಶೋಧ. ಹಿರಿಯ ಪುಸ್ತಕ ಪ್ರಕಾಶಕರಿಗೆ ಸನ್ಮಾನ, ಪುಸ್ತಕ ಪ್ರಕಾಶಕರ ಕೃತಿಗಳಿಗೆ ಪ್ರಶಸ್ತಿ ಹಾಗೂ ಪ್ರಕಾಶಕರ ಕವಿ ಗೋಷ್ಠಿ ಪ್ರಕಾಶನದಲ್ಲಿ ಸಾಧನೆ ಮಾಡಿದ ಸಾಧಕರಿಗೆ ಪ್ರಶಸ್ತಿ ಪ್ರಧಾನ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳ ಪ್ರದರ್ಶನವನ್ನು ಹಮ್ಮಿಕೊಳ್ಳಲಾಗಿದೆ.ಕಲ್ಯಾಣ ಕರ್ನಾಟಕದ ಏಳು ಜಿಲ್ಲೆಗಳ ಪ್ರಕಾಶಕರನ್ನ ಗುರುಜಿಸಿ ಗೌರವಿಸುವ ಉದ್ದೇಶದಿಂದ ಈ ಕಾರ್ಯಕ್ರಮವನ್ನು ನಡೆಸಲಿದೆ.
ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಕಲ್ಯಾಣ ಕರ್ನಾಟಕದ ಜಿಲ್ಲೆಯ ಯುವ ಸಾಹಿತಿ ಕವಿಗಳಿಗೆ ವೇದಿಕೆ ಒದಗಿಸಿಕೊಡುವ ಬಗ್ಗೆ ಚರ್ಚಿಸಿ ಹೆಚ್ಚಿನ ಅವಕಾಶವನ್ನು ಸ್ಥಳೀಯ ಪ್ರಕಾಶಕರಿಗೆ
ಸಾಹಿತಿಗಳಿಗೆ ನೀಡಲು ನಿರ್ಣಯಿಸಲಾಯಿತು.
5 ನೇ ಪುಸ್ತಕ ಪ್ರಕಾಶಕರ ಸಾಂಸ್ಕೃತಿಕ ಸಮ್ಮೇಳನದ ಸರ್ವಾಧ್ಯಕ್ಷರ ಆಯ್ಕೆ ಕುರಿತು ಚರ್ಚಿಸಲಾಯಿತು ಎಂದು ಮಹಿಪಾಲರೆಡ್ಡಿ ತಿಳಿಸಿದ್ದಾರೆ.

ಹೆಚ್ಚಿನ ಮಾಹಿತಿಗಾಗಿ ಮಹೇಶ ಬಾಬು ಸುರ್ವೆ ಅವರನ್ನು (ಮೊ : 9845338160) ಸಂಪರ್ಕಿಸಲು ಕೋರಲಾಗಿದೆ.
&&&&&&&&&&&&&&&&&&&&&&&&&&&&&&
ವಸಂತ ನವರಾತ್ರಿ ಶ್ರೀರಾಮೋತ್ಸವ

ಬೆಂಗಳೂರು : ಮಲ್ಲೇಶ್ವರದ ಈಸ್ಟ್ ಪಾರ್ಕ್ ರಸ್ತೆಯಲ್ಲಿರುವ ಶ್ರೀ ರಾಮಮಂದಿರದಲ್ಲಿ ಮಾರ್ಚ್ 19 ರಿಂದ 29ರ ವರೆಗೆ ವಸಂತ ನವರಾತ್ರಿ ಶ್ರೀರಾಮೋತ್ಸವ ಕಾರ್ಯಕ್ರಮವನ್ನು ಏರ್ಪಡಿಸಿದ್ದು, ಮುಖ್ಯ ಅತಿಥಿಗಳಾಗಿ ಮಲ್ಲೇಶ್ವರದ ಶಾಸಕರಾದ ಡಾ|| ಸಿ.ಎನ್. ಅಶ್ವತ್ಥ ನಾರಾಯಣ ಆಗಮಿಸಲಿದ್ದಾರೆ.
ಧಾರ್ಮಿಕ ಕಾರ್ಯಕ್ರಮಗಳು : ಮಾರ್ಚ್ 19, ಬೆಳಗ್ಗೆ 7 ಗಂಟೆಯಿಂದ ರಾಮಾಯಣ ಪಾರಾಯಣ, ಶ್ರೀರಾಮ ದೇವರಿಗೆ ವಿಶೇಷ ಪೂಜಾ ಕೈಂಕರ್ಯಗಳು, ಸಂಜೆ 5-30 ಪಂಚಾಂಗ ಶ್ರವಣ. ಮಾರ್ಚ್ 27, ಬೆಳಗ್ಗೆ 7-30 ರಿಂದ ರಾಮನವಮಿ ಪ್ರಯುಕ್ತ ವಿಶೇಷ ಪಂಚಾಮೃತ ಅಭಿಷೇಕ, ಶ್ರೀರಾಮದೇವರಿಗೆ ತೊಟ್ಟಿಲು ಸೇವೆ, ಪಾನಕ ಸೇವೆ. ಮಾರ್ಚ್ 29, ಬೆಳಗ್ಗೆ ಶ್ರೀರಾಮ ಪಟ್ಟಾಭಿಷೇಕದ ಪ್ರಯುಕ್ತ ಅನ್ನದಾನ ಸೇವೆ.
ಸಾಂಸ್ಕೃತಿಕ ಕಾರ್ಯಕ್ರಮಗಳು (ಪ್ರತಿದಿನ ಸಂಜೆ 6-30ಕ್ಕೆ) : ಮಾರ್ಚ್ 19- ಭರತನಾಟ್ಯ ಪ್ರದರ್ಶನ : ಕು|| ಸುರಭಿ ಶ್ರೀಧರ್ ಕೈಪೆ, ಮಾರ್ಚ್ 20-ದ್ವಂದ್ವ ಪಿಟೀಲು : ವಿ|| ಜಯಶ್ರೀ, ವಿ|| ಆದಿತ್ಯ ಮತ್ತು ಸಂಗಡಿಗರು, ಮಾರ್ಚ್ 21-ಭರತನಾಟ್ಯ ಪ್ರದರ್ಶನ : ನೃತ್ಯ ದಿಶಾ ಟ್ರಸ್ಟಿನ ಸುಮಾರು 40 ವಿದ್ಯಾರ್ಥಿಗಳಿಂದ. ಗುರುಗಳು : ಡಾ|| ದರ್ಶಿನಿ ಮಂಜುನಾಥ್. ಮಾರ್ಚ್ 22-ಶಾಸ್ತ್ರೀಯ ಸಂಗೀತ : ವಿ|| ಅಕ್ಷಯ ರುದ್ರಪಟ್ಟಣಂ ಮತ್ತು ಸಂಗಡಿಗರು, ಮಾರ್ಚ್ 23-ಸಮೂಹ ಗಾಯನ : ವಿದುಷಿಯರಾದ ಶ್ರೀದೇವಿ ಗರ್ತಿಕೆರೆ, ಇಂದಿರಾ ಶರ್ಮಾ, ಎಂ.ಕೆ. ಶ್ರೀದೇವಿ, ಚಾಂದಿನಿ ಗರ್ತಿಕೆರೆ. ಮಾರ್ಚ್ 24-ನೃತ್ಯ ವೈಭವ : ಮೈಸೂರಿನ ಶ್ರೀ ಗಣೇಶ ಸಂಗೀತ ನೃತ್ಯಾಲಯ ಚಾರಿಟಿಯಟಬಲ್ ಟ್ರಸ್ಟಿನ ಕಲಾವಿದರಿಂದ, ನಿರ್ದೇಶನ : ವಿ|| ಆರತಿ ಅರುಣ್,
ಮಾರ್ಚ್ 25-ಹರಿದಾಸ ಮಂಜರಿ : ಕು|| ಅನನ್ಯ ಬೆಳವಾಡಿ (ಗಾಯನ), ವಿ|| ಅಮಿತ್ ಶರ್ಮಾ (ಕೀಬೋರ್ಡ್), ವಿ|| ಸರ್ವೋತ್ತಮ (ತಬಲಾ). ಮಾರ್ಚ್ 26-ಶಾಸ್ತ್ರೀಯ ಸಂಗೀತ : ವಿ|| ಆರ್.ಕೆ. ಪ್ರಸನ್ನಕುಮಾರ್ ಮತ್ತು ಸಂಗಡಿಗರು, ಮಾರ್ಚ್ 27-ಸಂಜೆ 5-30ಕ್ಕೆ ಸ್ತುತಿ ವಾಹಿನಿ ತಂಡದವರಿಂದ ಭಜನಾಮೃತ. ನಂತರ ಭಗವದ್ಗೀತ ಶ್ಲೋಕಗಳ ಪಠಣ : ಕು|| ವೈನವಿ. ಮಾರ್ಚ್ 28-ಹರಿದಾಸ ವೈಭವ : ಕು|| ಅವನಿ ಭಟ್ (ಗಾಯನ), ವಿ|| ಟಿ.ಎಸ್. ರಮೇಶ್ (ಕೀಬೋರ್ಡ್), ವಿ|| ಪ್ರಮಥ್ ವಿಠಲ್ (ತಬಲಾ), ಮಾರ್ಚ್ 29-ಸಂಜೆ 7-30ಕ್ಕೆ ಶ್ರೀರಾಮದೇವರ ಪ್ರಾಕಾರೋತ್ಸವ ನಂತರ ಶ್ರೀ ಶಾರದಾ ಶಂಕರ ಭಜನಾ ಮಂಡಳಿಯ ಸದಸ್ಯರಿಂದ ದೇವರನಾಮ ಮತ್ತು ಭಜನಾ ಕಾರ್ಯಕ್ರಮ ಏರ್ಪಡಿಸಲಾಗಿದೆ ಎಂದು ಶ್ರೀರಾಮಮಂದಿರದ ಗೌರವ ಕಾರ್ಯದರ್ಶಿ ಶ್ರೀ ಸಿ. ಚಂದ್ರಶೇಖರ್ ತಿಳಿಸಿದ್ದಾರೆ.











