ನಂಜನಗೂಡು ತಾಲ್ಲೂಕು ಆಡಳಿತ ಹಾಗೂ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯಿಂದ  77 ನೇ ಗಣರಾಜ್ಯೋತ್ಸವ ಆಚರಣೆ 

ವಿಜಯ ದರ್ಪಣ ನ್ಯೂಸ್……

ನಂಜನಗೂಡು ತಾಲ್ಲೂಕು ಆಡಳಿತ ಹಾಗೂ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯಿಂದ 77 ನೇ ಗಣರಾಜ್ಯೋತ್ಸವ ಆಚರಣೆ

ತಾಂಡವಪುರ ಜನವರಿ 26: ನಂಜನಗೂಡು ವಿಧಾನಸಭಾ ಕ್ಷೇತ್ರಕ್ಕೆ ಸೇರುವ ನಂಜನಗೂಡು ತಾಲ್ಲೂಕು ಕ್ರೀಡಾಂಗಣದಲ್ಲಿ
ತಾಲ್ಲೂಕು ಆಡಳಿತ ಹಾಗೂ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯ ವತಿಯಿಂದ ಆಯೋಜಿಸಲಾದ 77 ನೇ ಗಣರಾಜ್ಯೋತ್ಸವ ಆಚರಿಸಲಾಯಿತು.

ಶಾಸಕ ದರ್ಶನ್ ಧ್ರುವನಾರಾಯಣ್ ಅವರು ಪಾಲ್ಗೊಂಡು ಧ್ವಜಾರೋಹಣ ನೆರವೇರಿಸಿ, ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಮತ್ತು ಮಹಾತ್ಮ ಗಾಂಧೀಜಿ ಅವರ ಭಾವಚಿತ್ರಕ್ಕೆ ಪುಷ್ಪರ್ಚನೆ ಸಲ್ಲಿಸಿ ಗೌರವ ನಮನ ಸಲ್ಲಿಸಿ. ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರನ್ನು ಸನ್ಮಾನಿಸಲಾಯಿತು.

ಜೊತೆಗೆ ಸಂಸ್ಕೃತಿಕ ಕಾರ್ಯಕ್ರಮಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಹಾಗೂ ತಂಡಗಳಿಗೆ ಬಹುಮಾನ ವಿತರಿಸಿ, ಕಾರ್ಯಕ್ರಮ ಉದ್ದೇಶಿಸಿ ಮಾತಾಡುತ್ತಾ ನಮ್ಮ ರಾಜ್ಯ ಸರ್ಕಾರ ಪ್ರತಿ ಹಳ್ಳಿ–ಹಳ್ಳಿಗೂ ಸಂವಿಧಾನ ಜಾಥಯನ್ನು ನಡೆಸಿ, ಸಂವಿಧಾನ ಪೀಠಿಕೆಯನ್ನು ಓದಿಸುವ ಜೊತೆಗೆ, ಸಂವಿಧಾನದ ಮೌಲ್ಯಗಳನ್ನು ಜನಮನಕ್ಕೆ ತಲುಪಿಸುವ ಮೂಲಕ ಸಾಮಾಜಿಕ ನ್ಯಾಯ, ಸಮಾನತೆ ಹಾಗೂ ಪ್ರಜಾಪ್ರಭುತ್ವವನ್ನು ಬೇರುಬಲವಾಗಿ ಸ್ಥಾಪಿಸುವ ಕೆಲಸ ಮಾಡಿತ್ತಿದೆ. ಭಾರತದ ಸಂವಿಧಾನದ ಆಶಯಗಳನ್ನು ಗೌರವಪೂರ್ವಕವಾಗಿ ಪಾಲಿಸಿ, ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಬಲಪಡಿಸಿ ಕಾಪಾಡುವ ಸಂಕಲ್ಪವನ್ನು ಪ್ರತಿಯೊಬ್ಬರೂ ಕೈಗೊಳ್ಳಬೇಕು ಎಂದು ತಿಳಿಸಿ ನಾಡಿನ ಸಮಸ್ತ ಜನತೆಗೆ 77ನೇ ಗಣರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳನ್ನು ತಿಳಿಸಿದರು.

ಈ ವೇಳೆ ಮಾಜಿ ಶಾಸಕ ಕಳಲೆ ಕೇಶವಮೂರ್ತಿ ತಹಸೀಲ್ದಾರ್ ಡಾ. ಸ್ಮಿತಾ ರಾಮು , ಮುಖ್ಯಭಾಷಣಕಾರ ಮಾರುತಿ , DYSP ರಘು , BEO ಮಹೇಶ್ , EO ಜೆರಾಲ್ಡ್ ರಾಜೇಶ್ ನಗರಸಭೆ ಪೌರಯುಕ್ತ ಬಸವರಾಜ್ ಗಾಯತ್ರಿ ಮೋಹನ್ , ಅಬ್ದುಲ್ ಖಾದರ್ , ಜೈ ರಾಮ್ ರವೀಂದ್ರ ಶ್ರೀಕಂಠ ನಾಯಕ ಸಿ. ಎಂ ಶಂಕರ್ , ಶ್ರೀಧರ್ ಶಿವಪ್ಪ ದೇವರು ಗೋವಿಂದ ರಾಜ್ , ಗುರುಮಾಲ್ಲಪ್ಪ , ಸೌಭಾಗ್ಯ , ನಾಗರಾಜ್, ಚಂದನ್ ಸೇರಿದಂತೆ ಹಲವು ಮುಖಂಡರು ತಾಲ್ಲೂಕು ಮಟ್ಟದ ಅಧಿಕಾರಿಗಳು, ವಿವಿಧ ಸಂಘಟನೆಯ ಅಧ್ಯಕ್ಷರು ಪದಾಧಿಕಾರಿಗಳು ಮುಖಂಡರು ಹಾಜರಿದ್ದರು.