ಪ್ರತಿಯೊಬ್ಬರು ದೇಶಾಭಿಮಾನ ಬೆಳೆಸಿಕೊಳ್ಳಿ : ಬಿ ನಾಗರಾಜು
ವಿಜಯ ದರ್ಪಣ ನ್ಯೂಸ್…..
ಪ್ರತಿಯೊಬ್ಬರು ದೇಶಾಭಿಮಾನ ಬೆಳೆಸಿಕೊಳ್ಳಿ : ಬಿ ನಾಗರಾಜು
ತಾಂಡವಪುರ ಆಗಸ್ಟ್ 15 ಪ್ರತಿಯೊಬ್ಬರು ತಮ್ಮ ಜೀವನದಲ್ಲಿ ದೇಶಾಭಿಮಾನ ಬೆಳೆಸಿಕೊಳ್ಳಿ ಎಂದು ಮೈಸೂರ್ ತಾಲೂಕು ಕಡಕೋಳ ಬಿಕೆಟಿ ಪಬ್ಲಿಕ್ ಶಾಲೆಯ ಸಂಸ್ಥಾಪಕ ಹಾಗೂ ಕಾಳಿ ಬೀರೇಶ್ವರ ಟ್ರಸ್ಟಿನ ಅಧ್ಯಕ್ಷರಾದ ಬಿ ನಾಗರಾಜ್ ರವರು ಹೇಳಿದರು.
ಅವರಿಂದು ಶಾಲೆಯಲ್ಲಿ ಹಮ್ಮಿಕೊಂಡಿದ್ದ 79ನೇ ಸ್ವಾತಂತ್ರೋತ್ಸವ ದಿನಾಚರಣೆಯ ಕಾರ್ಯಕ್ರಮದಲ್ಲಿ ಭಾಗವಹಿಸಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಬಿ ನಾಗರಾಜ್ ಅವರು ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿದ ಮಹಾತ್ಮರ ಆದರ್ಶಗಳನ್ನು ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ದೇಶ ಅಭಿಮಾನ ಬೆಳೆಸಿಕೊಳ್ಳಿ ಎಂದು ತಿಳಿಸಿದರು.
ನಮಗೆ ಸ್ವಾತಂತ್ರ್ಯ ಬರಬೇಕಾದರೆ ದೇಶದ ಹಲವಾರು ನಾಯಕರು ಹೋರಾಟಗಾರರು ತಮ್ಮ ತ್ಯಾಗ ಬಲಿದಾನದಿಂದ ನಮಗೆ ಸ್ವಾತಂತ್ರ್ಯ ಸಿಕ್ಕಿದೆ ಈ ಸಂದರ್ಭದಲ್ಲಿ ನಮಗೆ ಸ್ವಾತಂತ್ರ್ಯ ತಂದು ಕೊಟ್ಟಂತಹ ಮಹಾತ್ಮ ಗಾಂಧೀಜಿ ಡಾಕ್ಟರ್ ಬಿ ಆರ್ ಅಂಬೇಡ್ಕರ್ ಸರ್ದಾರ್ ವಲ್ಲಬಾಯ್ ಪಟೇಲ್ ಲಾಲ್ ಬಹದ್ದೂರ್ ಶಾಸ್ತ್ರಿ ಜವಹಾರ್ ನೆಹರು ಸುಭಾಷ್ ಚಂದ್ರ ಬೋಸ್ ಕಾಂತಿ ವೀರ ಸಂಗೊಳ್ಳಿ ರಾಯಣ್ಣ ಸೇರಿದಂತೆ ಇನ್ನು ಹಲವಾರು ಮಂದಿ ಒರಟಗಾರರು ದೇಶ ಕಾಗಿ ತಮ್ಮ ಪ್ರಾಣವನ್ನೇ ಬಲಿಕೊಟ್ಟಿದ್ದಾರೆ ಅವರನ್ನು ನಾವೆಲ್ಲರೂ ಸ್ಮರಿಸಿಕೊಂಡು ದೇಶ ಅಭಿಮಾನ ಬೆಳೆಸಿಕೊಳ್ಳೋಣ ಎಂದರು.
ಇದೆ ವೇಳೆ ಸ್ವಾತಂತ್ರ್ಯೋತ್ಸವದ ಪ್ರಯುಕ್ತ ಶಾಲೆ ವತಿಯಿಂದ ಹಮ್ಮಿಕೊಂಡಿದ್ದ ದೇಶಕ್ಕಾಗಿ ಹೋರಾಟ ಮಾಡಿ ನುಡಿದಂತಹ ಮಹಾ ನಾಯಕರುಗಳ ವೇಷಭೂಷಣಗಳ ವಿದ್ಯಾರ್ಥಿಗಳು ಧರಿಸಿ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಎಲ್ಲಾ ವಿದ್ಯಾರ್ಥಿಗಳಿಗೂ ಶಾಲೆ ವತಿಯಿಂದ ಬಹುಮಾನ ಅಡಿ ಪ್ರೋತ್ಸಾಹ ನೀಡಲಾಯಿತು.
ಕಾರ್ಯಕ್ರಮದಲ್ಲಿ ವಿದ್ಯ ಸಂಸ್ಥೆಯ ಸಂಸ್ಥಾಪಕ ಹಾಗೂ ಕಾಳಿ ಬೀರೇಶ್ವರ ಟ್ರಸ್ಟಿನ ಅಧ್ಯಕ್ಷ ಬಿ ನಾಗರಾಜು ಉಪಾಧ್ಯಕ್ಷ ಶ್ರೀಕಂಠ ಸಿದ್ದಪ್ಪ ಟ್ರಸ್ಟಿನ ಕಾರ್ಯದರ್ಶಿ ನಂಜುಂಡೇಗೌಡ ಖಜಾಂಚಿ ಕೃಷ್ಣಪ್ಪ ವಿದ್ಯ ಸಂಸ್ಥೆಯ ಕಾರ್ಯದರ್ಶಿ ಕೆಂಪೇಗೌಡ ಟ್ರಸ್ಟಿನ ಸದಸ್ಯರಾದ ಶಿವಬೀರ ಸಿದ್ದರಾಮಯ್ಯ ಗೌಡ ಕೆಟಿ ಶಿವಣ್ಣ ಈರಪ್ಪ ಶಿವಕುಮಾರ್ ಮಾಜಿ ಗ್ರಾಮ ಪಂಚಾಯತಿಯ ಶಿವಲಿಂಗೇಗೌಡ ಕಾಳೇಗೌಡ ಮಲ್ಲೇಗೌಡ ಪುಟ್ಟೇಗೌಡ ಅನಿಲ್ ಗ್ರಾಮದ ಮುಖಂಡ ನಾರಾಯಣ ನಾಯಕ ಶಾಲೆಯ ಮುಖ್ಯ ಶಿಕ್ಷಕ ಕುಮಾರಸ್ವಾಮಿ ಹಾಗೂ ಸಾಹಸಿಕ್ಷಕರು ವಿದ್ಯಾರ್ಥಿಗಳು ಪೋಷಕರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.