ಶ್ರೀ ಜಗಜ್ಯೋತಿ ಬಸವೇಶ್ವರ ಪುತ್ತಳಿ ಲೋಕಾರ್ಪಣೆ
ವಿಜಯ ದರ್ಪಣ ನ್ಯೂಸ್…
ಶ್ರೀ ಜಗಜ್ಯೋತಿ ಬಸವೇಶ್ವರ ಪುತ್ತಳಿ ಲೋಕಾರ್ಪಣೆ
ರಾಜಾಜಿನಗರ ವೆಸ್ಟ್ ಆಫ್ ಕಾರ್ಡ್ ರೋಡ್ ಮೋದಿ ರಸ್ತೆಯಲ್ಲಿ ಶ್ರೀ ಜಗಜ್ಯೋತಿ ಬಸವೇಶ್ವರರ ಪುತ್ಥಳಿ ಅನಾವರಣ ಸಮಾರಂಭ ಮತ್ತು ಮಾತೆಂಬುದು ಜ್ಯೋತಿರ್ಲಿಂಗ ಕೃತಿ ಬಿಡುಗಡೆ ಸಮಾರಂಭ .
ದಿವ್ಯ ಸಾನಿಧ್ಯ ಜಗದ್ಗುರು ಶ್ರೀ ಶ್ರೀ ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳು, ಪರಮಪೂಜ್ಯ ಶ್ರೀ ಶ್ರೀ ಶ್ರೀ ಡಾ. ನಿರ್ಮಲಾನಂದನಾಥ ಮಹಾಸ್ವಾಮಿಗಳು, ಜಗದ್ಗುರು ಡಾ. ಮಾತೆ ಗಂಗಾದೇವಿಯವರು, ಶಿವಸಿದ್ದೇಶ್ವರ ಸ್ವಾಮಿಜೀರವರು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪರವರು,
ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ರವರು, ಶಾಸಕ ಎಸ್.ಸುರೇಶ್ ಕುಮಾರ್, ಕೇಂದ್ರ ಸಚಿವೆ ಶೋಭ ಕರಾಂದ್ಲಾಜೆ, ಸಚಿರುಗಳಾದ ಎಂ.ಬಿ.ಪಾಟೀಲ್, ಈಶ್ವರ್ ಖಂಡ್ರೆರವರು, ಶಾಸಕರಾದ ಕೆ.ಗೋಪಾಲಯ್ಯ, ಮಾಜಿ ಸಚಿವ ಹೆಚ್.ಎಂ.ರೇವಣ್ಣ, ವಿಧಾನಪರಿಷತ್ ಸದಸ್ಯ ಪುಟ್ಟಣ್ಣ,ಬಸವ ಪುತ್ಥಳಿ ಪ್ರತಿಷ್ಠಾಪನಾ ಸಮಿತಿ ಅಧ್ಯಕ್ಷ ಸಿ.ಸೋಮಶೇಖರ್, ಸಂಚಾಲಕರಾದ ಹೆಚ್.ಆರ್.ಮಲ್ಲಿಕಾರ್ಜುನಯ್ಯ, ಅಖಿಲ ಭಾರತ ವೀರಶೈವ, ಲಿಂಗಾಯಿತ ಮಹಾಸಭಾ ನಗರಾಧ್ಯಕ್ಷ ನವೀನ್ ಕುಮಾರ್ ಬಿಡದಿರವರು ಪುತ್ಥಳಿ ಅನಾವರಣ ಮಾಡಿದರು.
ಮಾಜಿ ಮಹಾಪೌರರಾದ ಶ್ರೀಮತಿ ಗಂಗಾಂಬಿಕೆ ಮಲ್ಲಿಕಾರ್ಜುನರವರು, ನಿಕಟಪೂರ್ವ ಬಿಬಿಎಂಪಿ ಸದಸ್ಯ ಜಿ.ಕೃಷ್ಣಮೂರ್ತಿರವರಿಗೆ ಸನ್ಮಾನಿಸಲಾಯಿತು.
ಶ್ರೀ ಶ್ರೀ ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳು ಮಾತನಾಡಿ ಬಸವೇಶ್ವರನಗರದಲ್ಲಿ ಬಸವೇಶ್ವರ ಪುತ್ಥಳಿ ಸ್ಥಾಪನೆಯಾಗಿರುವುದು ಅರ್ಥಪೂರ್ಣವಾಗಿದೆ. ಬಸವಣ್ಣನವರ ಕಲ್ಯಾಣವಾಗಲಿ ಆಶೀರ್ವಾದ ಮಾಡದಂತಹ ವಿಗ್ರಹವಾಗಿದೆ.
ವಿಶ್ವಕ್ಕೆ ಪ್ರಜಾಪ್ರಭುತ್ವ ವ್ಯವಸ್ಥೆ ಕೊಟ್ಟವರು ಅಣ್ಣ ಬಸವಣ್ಣನವರು. ಬದುಕಿನಲ್ಲಿ ಬಸವಮಾರ್ಗ ಆಳವಡಿಸಿಕೊಳ್ಳಬೇಕು.
ಬಸವಣ್ಣ ಪ್ರತಿಮೆ ನೋಡಿದಾಗ ಅವರ ಆದರ್ಶಗಳನ್ನು ನಾವು ಆಳವಡಿಸಿಕೊಳ್ಳಬೇಕು ಎಂದು ಮನಸ್ಸು ಮಾಡಿದಾಗ ಜೀವನ ಸಾರ್ಥಕವಾಗುತ್ತದೆ ಎಂದು ಹೇಳಿದರು.
ಶ್ರೀ ಶ್ರೀ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿರವರು ಮಾತನಾಡಿ ಜಗಜ್ಯೋತಿ ಬಸವೇಶ್ವರರ ಆಶೀರ್ವಾದ ಎಲ್ಲರ ಮೇಲಿರಲಿ. ಮಠಕ್ಕೆ ಶಕ್ತಿ ಕೊಟ್ಟರೆ ಸಮಾಜಕ್ಕೆ ಅದ್ಬುತವಾದ ಕೊಡುಗೆ ನೀಡಬಲ್ಲರು.
ನಗರದಲ್ಲಿ ಜ್ಞಾನ, ವಿಜ್ಞಾನ ಸಂಗಮವೇ ಬಸವೇಶ್ವರ ಪುತ್ಥಳಿ ಸ್ಥಾಪನೆಯಾಗಿದೆ. ಬದುಕು ನಶ್ವರ, ಜಗತ್ತಿಗೋಸ್ಕರ ಯಾರು ಬದುಕುತ್ತಾರೆ ಅವರ ಸತ್ತರು ಬದುಕಿರುತ್ತಾರೆ. 800ವರ್ಷಗಳ ಹಿಂದೆ ಬಸವಣ್ಣ ಕೊಟ್ಟ ಸಂದೇಶ ಇಂದಿಗೂ ಜನಮಾನಸದಲ್ಲಿ ಉಳಿದಿದೆ.
ಮಾಡುವ ಕಾಯಕಕ್ಕೆ ಕೈಲಾಸಕ್ಕೆ ಹೋಲಿಸಿದರು, ಕಾಯಕತತ್ವದ ಅಡಿಯಲ್ಲಿ ಸಮಾಜ ನಿರ್ಮಿಸಿದರು, ಭಕ್ತಿಯನ್ನು ಸಾರಿ ಭಕ್ತಿ ಭಂಡಾರಿ ಬಸವಣ್ಣ ಎಂಬ ಕೀರ್ತಿಗೆ ಪಾತ್ರರರಾದರು. ಬಸವೇಶ್ವರರ ಆದರ್ಶ ಸಿದ್ದಾಂತದಲ್ಲಿ ಸಾಗಿದರೆ ಸಮ ಸಮಾಜ ನಿರ್ಮಾಣ ಸಾಧ್ಯ ಎಂದು ಹೇಳಿದರು.
ಮಾತೆ ಗಂಗಾದೇವಿರವರು ಮಾತನಾಡಿ ಬಸವಣ್ಣನೇ ತಂದೆ, ತಾಯಿ ನನಗೆ. ಪುತ್ಥಳಿ ನೋಡಿ ಜೀವನ ಪಾವನವಾಯಿತು.
ಬಸವಣ್ಣನವರ ಪುತ್ಥಳಿ ಉತ್ತಮ ಸ್ಥಳದಲ್ಲಿ ಅನಾವರಣವಾಗಿದೆ. ಧ್ಯಾನ, ಪೂಜೆ ಮಾಡಲು ಬಸವಣ್ಣನವರ ಮೂರ್ತಿ ಬೇಕು ಎಂದು ಹೇಳಿದರು.
ಡಿ.ಕೆ.ಶಿವಕುಮಾರ್ ಮಾತನಾಡಿ ಹೊಸ ಬೆಂಗಳೂರು ಐದು ಬೆಂಗಳೂರು ಮಾಡಿದ್ದೇವೆ. ಜನರಿಗೆ ಉತ್ತಮ ಆಡಳಿತ ವ್ಯವಸ್ಥೆ ಮಾಡಬೇಕು ಎಂದು ಮಾಡಲಾಗಿದೆ, ಟೀಕೆಗಳು ಬರುತ್ತದೆ ಸಾಧನೆಗಳು ನಿಲ್ಲುತ್ತದೆ.
ರಾಜಾಜಿನಗರ ನನಗೆ ಹಳೆಯ ನಂಟು ಇದೆ. ಜನನ ಉಚಿತ, ಸಾವು ಖಚಿತ ಯಾವುದು ಶಾಶ್ವತವಲ್ಲ ನಾವು ಮಾಡಿದ ಕೆಲಸ ಶಾಶ್ವತವಾಗಿ ಉಳಿಯುತ್ತದೆ.
ಕೊಟ್ಟ ಮಾತು ಉಳಿಸಿಕೊಂಡರೆ ಮಾತ್ರ ರಾಜಕೀಯದಲ್ಲಿ ಉಳಿಯಲು ಸಾಧ್ಯ. ಬಸವೇಶ್ವರ ಒಂದೇ ಜಾತಿ ಸೀಮಿತವಾಗಿಲ್ಲ, ಸಾಂಸ್ಕೃತಿಕ ನಾಯಕರಾಗಿದ್ದಾರೆ.
ದೇಹಕ್ಕೆ ಬಡತನ ಬರುವುದಿಲ್ಲ, ಮನಸ್ಸಿಗೆ ಬಡತನ ಬರುತ್ತೇ. ಶ್ರೀ ಬಸವೇಶ್ವರರ ಆಚಾರ, ವಿಚಾರ ಆಳವಡಿಸಿಕೊಂಡು ಹೋಗಬೇಕು ಎಂದು ಹೇಳಿದರು.
ಬಿ.ಎಸ್.ಯುಡಿಯೂರಪ್ಪ ಮಾತನಾಡಿ ಶತ, ಶತಮಾನಗಳಿಂದ ಜ್ಞಾನ ಬೆಳಕು ಚಲ್ಲಿದ ಕಾಯಕಯೋಗಿ ಬಸವೇಶ್ವರರು, ಕಾಯಕ ಮಹತ್ವ ವಿಶ್ವಕ್ಕೆ ಸಾರಿದರು.
ಸಮಾಜಕ್ಕೆ ನಿರಂತರ ಸ್ಪೂರ್ತಿಯಾಗಿದ್ದಾರೆ. ಪ್ರಜಾಪ್ರಭುತ್ವದ ಮೌಲ್ಯ, ಸಮ ಸಮಾಜದ ನಿರ್ಮಾಣ ಮಾಡಿದರು.
ಬಸವೇಶ್ವರರ ಪುತ್ಥಳಿ ಎಲ್ಲರಿಗೂ ಚೈತನ್ಯಶಕ್ತಿ ತುಂಬಲಿ, ಯುವ ಪೀಳಿಗೆಗೆ ಬಸವೇಶ್ವರ ಸಿದ್ದಾಂತಗಳು ದಾರಿದೀಪವಾಗಲಿ ಎಂದು ಹೇಳಿದರು.
ಈಶ್ವರ್ ಖಂಡ್ರೆ ಮಾತನಾಡಿ ಬಸವಣ್ಣನವರು, ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ರವರು ಜಾತ್ಯತೀತ ಸಿದ್ದಾಂತ ಮತ್ತು ಸಮ ಸಮಾಜದ ಹರಿಕಾರರು.
ಬಸವಣ್ಣ ಎಂದರೆ ಕಾಯಕ, ದಾಸೋಹ ಮತ್ತು ಬಸವೇಶ್ವರರ ಚಿಂತನೆಗಳು 800ವರ್ಷವಾದರು ಇಂದಿಗೂ ಜೀವಂತವಾಗಿದೆ. ಎಲ್ಲರು ಬಸವತತ್ವ, ವಚನ ಸಾಹಿತ್ಯ ಅಧ್ಯಯನ ಮಾಡಬೇಕು ಎಂದು ಹೇಳಿದರು.
ಎಸ್.ಸುರೇಶ್ ಕುಮಾರ್ ಮಾತನಾಡಿ ಬಸವೇಶ್ವರನಗರ ಸ್ಥಾಪನೆಯಾಗಿ ಬಹಳ ವರ್ಷಗಳ ಕನಸು ಇಂದು ನನಸಾಗಿದೆ. ಬಸವಣ್ಣನವರ ವ್ಯಕ್ತಿತ್ವ ಎಲ್ಲರಿಗೂ ದಾರಿದೀಪ. ಬಸವಣ್ಣ ಬದುಕು, ವಿಚಾರ, ವಚನ ಎಲ್ಲರಿಗೂ ಸ್ಪೂರ್ತಿಯಾಗಿದೆ ಅವರ ಮಾರ್ಗದರ್ಶನದಲ್ಲಿ ಸಾಗೋಣ ಎಂದು ಹೇಳಿದರು.
ಮಾಜಿ ಮಹಾಪೌರರಾದ ಶ್ರೀಮತಿ ಗಂಗಾಂಬಿಕೆ ಮಲ್ಲಿಕಾರ್ಜುನ್ ನಾನು ಮಹಾಪೌರರಾಗಿ ಆಡಳಿತದಲ್ಲಿ ಇದ್ದಾಗ 2019 ಬಜೆಟ್ ಶ್ರೀ ಬಸವೇಶ್ವರರ ಪುತ್ಥಳಿ ನಿರ್ಮಾಣಕ್ಕೆ ಅನುದಾನ ನೀಡಿದ್ದೇ.
ಈ ಭಾಗದ ಬಸವಭಿಮಾನಿಗಳಿಗೆ ಬಸವೇಶ್ವರನಗರದಲ್ಲಿ ಪುತ್ಥಳಿ ಇಲ್ಲ ಎಂಬ ಕೊರಗು ಇತ್ತು ಇಂದು ಅವರ ಆಶಯದಂತೆ ನಿರ್ಮಾಣವಾಗಿದೆ ಬಸವಣ್ಣನವರು ಎಲ್ಲ ಜಾತಿ ಧರ್ಮದವರಿಗೆ ಆದರ್ಶವಾಗಿದ್ದರು ಎಂದು ಹೇಳಿದರು.
ಮಾಜಿ ಉಪಮಹಾಪೌರ ರಂಗಣ್ಣ, ಬಿ.ಎಸ್.ಪುಟ್ಟರಾಜು, ಮಾಜಿ ಪಾಲಿಕೆ ಸದಸ್ಯರುಗಳಾದ ಎಮ್.ಶಿವರಾಜು, ಎಸ್.ಕೇಶವಮೂರ್ತಿ,ಹೆಚ್.ಆರ್.ಕೃಷ್ಣಪ್ಪ, ದೀಪನಾಗೇಶ್ ರವರು ಉಪಸ್ಥಿತರಿದ್ದರು.