ವಿಜಯ ದರ್ಪಣ ನ್ಯೂಸ್…..
ಬೇರೂರು, ದಿ ಪರ್ಪಲ್ ಟರ್ಟಲ್ಸ್ & ಓರ್ಜಾ ವಿಶೇಷ ವೇರ್ಹೌಸ್ ಕ್ಲಿಯರೆನ್ಸ್ ಸೇಲ್ 2026

ಬೆಂಗಳೂರು, ಫೆಬ್ರವರಿ , 2026 ವಿನ್ಯಾಸ ಪ್ರಿಯರು ಮತ್ತು ಮನೆ ಅಲಂಕಾರ ಆಸಕ್ತರಿಗೆ ಸಂತಸದ ಸುದ್ದಿ! ಬೇರೂರು, ದಿ ಪರ್ಪಲ್ ಟರ್ಟಲ್ಸ್ ಮತ್ತು ಓರ್ಜಾ ಸಂಸ್ಥೆಗಳು ಒಟ್ಟಾಗಿ ವಿಶೇಷ ವೇರ್ಹೌಸ್ ಕ್ಲಿಯರೆನ್ಸ್ ಸೇಲ್ ಆಯೋಜಿಸಿದ್ದು, ಪ್ರೀಮಿಯಂ ಫರ್ನಿಚರ್, ಲೈಟಿಂಗ್, ಔಟ್ಡೋರ್ ವಸ್ತುಗಳು ಮತ್ತು ಮನೆ ಅಲಂಕಾರ ವಸ್ತುಗಳ ಮೇಲೆ ವಿಶೇಷ ರಿಯಾಯಿತಿಗಳನ್ನು ನೀಡಲಾಗುತ್ತಿದೆ.
ಈ ವಿಶೇಷ ಸೇಲ್ ಫೆಬ್ರವರಿ 26ರಿಂದ ಮಾರ್ಚ್ 1ರವರೆಗೆ, ಬೆಳಿಗ್ಗೆ 10 ಗಂಟೆಯಿಂದ ಸಂಜೆ 6 ಗಂಟೆಯವರೆಗೆ, ವೈಟ್ಫೀಲ್ಡ್ನಲ್ಲಿರುವ ದಿ ಪರ್ಪಲ್ ಟರ್ಟಲ್ಸ್ ನ ಹೊಸ ವೇರ್ಹೌಸ್ನಲ್ಲಿ ನಡೆಯಲಿದೆ. ಈ ಸೀಮಿತ ಅವಧಿಯ ಕಾರ್ಯಕ್ರಮವು ಆಯ್ದ, ವಿನ್ಯಾಸ ಕೇಂದ್ರೀಕೃತ ಸಂಗ್ರಹಗಳನ್ನು ವಿಶೇಷ ವೇರ್ಹೌಸ್ ದರಗಳಲ್ಲಿ ಖರೀದಿಸುವ ಅಪರೂಪದ ಅವಕಾಶವನ್ನು ಒದಗಿಸುತ್ತದೆ.

ಬೇರೂರು ವತಿಯಿಂದ ಶಿಲ್ಪಕಲೆಯಂತಿರುವ ಔಟ್ಡೋರ್ ಫರ್ನಿಚರ್ ಮತ್ತು ಪ್ಲಾಂಟರ್ಗಳು, ದಿ ಪರ್ಪಲ್ ಟರ್ಟಲ್ಸ್ ವತಿಯಿಂದ ಶ್ರೇಷ್ಠ ಫರ್ನಿಚರ್ ಮತ್ತು ಡೆಕರ್ ವಸ್ತುಗಳು, ಹಾಗು ಓರ್ಜಾ ವತಿಯಿಂದ ಗಮನ ಸೆಳೆಯುವ ಲೈಟಿಂಗ್ ಉತ್ಪನ್ನಗಳು ಸೇರಿದಂತೆ ವಿವಿಧ ವಿಭಾಗಗಳಲ್ಲಿನ ಅನೇಕ ಉತ್ಪನ್ನಗಳು ಈ ಸೇಲ್ನಲ್ಲಿ ಲಭ್ಯವಿರುತ್ತವೆ. ಪ್ರದರ್ಶನ ವಸ್ತುಗಳು, ಅಂತಿಮ ಸಂಗ್ರಹ (ಎಂಡ್-ಆಫ್-ಲೈನ್) ಉತ್ಪನ್ನಗಳು ಮತ್ತು ಆಯ್ದ ರೆಡಿ ಸ್ಟಾಕ್ ಮೇಲಿನ ಮಹತ್ವದ ರಿಯಾಯಿತಿಗಳನ್ನು ಖರೀದಿದಾರರು ನಿರೀಕ್ಷಿಸಬಹುದು.

ಇದು ಕೇವಲ ಐದು ದಿನಗಳಿಗಷ್ಟೇ ನಡೆಯುವ ಸೀಮಿತ ಅವಧಿಯ ವೇರ್ಹೌಸ್ ಕಾರ್ಯಕ್ರಮವಾಗಿದ್ದು, ಮನೆ ಮಾಲೀಕರು, ಒಳಾಂಗಣ ವಿನ್ಯಾಸಕರರು, ವಾಸ್ತುಶಿಲ್ಪಿಗಳು ಮತ್ತು ಅಲಂಕಾರ ಆಸಕ್ತರು ಅತ್ಯುತ್ತಮ ಮೌಲ್ಯದಲ್ಲಿ ಶಾಶ್ವತ ಶೈಲಿಯ ವಸ್ತುಗಳನ್ನು ಖರೀದಿಸಲು ಇದು ಸುವರ್ಣಾವಕಾಶವಾಗಿದೆ.











