2025 ಕಿತ್ತೂರು ಉತ್ಸವದಲ್ಲಿ ಮಹೇಶ್ ಬಾಬು ಸುರ್ವೇ ನೇತೃತ್ವದ *ಕೊಪ್ಪಳ ಜಿಲ್ಲಾ ನಾಗರಿಕರ ವೇದಿಕೆ* ತಂಡ ನೃತ್ಯ ರೂಪಕ ಪ್ರದರ್ಶನಕ್ಕೆ ಆಯ್ಕೆ

ವಿಜಯ ದರ್ಪಣ ನ್ಯೂಸ್…

2025 ಕಿತ್ತೂರು ಉತ್ಸವದಲ್ಲಿ ಮಹೇಶ್ ಬಾಬು ಸುರ್ವೇ ನೇತೃತ್ವದ *ಕೊಪ್ಪಳ ಜಿಲ್ಲಾ ನಾಗರಿಕರ ವೇದಿಕೆ* ತಂಡ ನೃತ್ಯ ರೂಪಕ ಪ್ರದರ್ಶನಕ್ಕೆ ಆಯ್ಕೆ

ಈ ಬಾರಿಯ ಐತಿಹಾಸಿಕ 2025 ಕಿತ್ತೂರು ಉತ್ಸವದಲ್ಲಿ ಕೊಪ್ಪಳ ಜಿಲ್ಲಾ ನಾಗರಿಕರ ವೇದಿಕೆ ತಂಡದಿಂದ ನೃತ್ಯ ರೂಪಕ ಪ್ರದರ್ಶನಕ್ಕೆ ಆಯ್ಕೆಯಾಗಿದೆ. ಕಿತ್ತೂರ್ ರಾಣಿ ಚೆನ್ನಮ್ಮ ಮುಖ್ಯ ವೇದಿಕೆಯ ಕೋಟೆ ಆವರಣದಲ್ಲಿ 3:30 ರಿಂದ 3 45 ರವರೆಗೆ ಮಹೇಶ್ ಬಾಬು ಸುರ್ವೆ ನೇತೃತ್ವದ ಕೊಪ್ಪಳ ಜಿಲ್ಲಾ ನಾಗರಿಕರ ವೇದಿಕೆ ತಂಡದಿಂದ ನೃತ್ಯ ರೂಪಕವನ್ನು ಪ್ರದರ್ಶಿಸಲಿದ್ದಾರೆ….

ಮಹೇಶ್ ಬಾಬು ಸುರ್ವೆ ನೇತೃತ್ವ ಕೊಪ್ಪಳ ಜಿಲ್ಲಾ ನಾಗರಿಕರ ವೇದಿಕೆ ಈಗಾಗಲೇ ಎರಡು ಬಾರಿ ಹಂಪಿ ಉತ್ಸವ ಎರಡು ಬಾರಿ ಕನಕಗಿರಿ ಉತ್ಸವ. 3 ಬಾರಿ ಆನೆಗುಂದಿ ಉತ್ಸವ.
2010 ರಿಂದಲೂ ನಿರಂತರವಾಗಿ ಅಖಿಲ ಭಾರತ ಸಾಹಿತ್ಯದಲ್ಲಿ ನೃತ್ಯ ಪ್ರದರ್ಶನ. ಕಿತ್ತೂರು ಉತ್ಸವ ಇಟಗಿ ಉತ್ಸವ.
ಗೋವಾ ಕನ್ನಡಿಗರ ಸಮ್ಮೇಳನ. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸ್ವಾತಂತ್ರ್ಯ ದಿನಾಚರಣೆ ಮತ್ತು ಗಣರಾಜ್ಯೋತ್ಸವ.
ಇಲಾಖೆಯ ವನಕೆ ಓಬವ್ವನ ಜಯಂತಿ. ಕೊಪ್ಪಳ ಜಿಲ್ಲಾ ಉತ್ಸವ.

ಮಂತ್ರಾಲಯದಲ್ಲಿ ಕನ್ನಡಿಗರ ಸಮ್ಮೇಳನ.
ಕಲ್ಯಾಣ ಕರ್ನಾಟಕ ಉತ್ಸವ.
ಕಾಶಿ ಕನ್ನಡ ಸಮ್ಮೇಳನ
ಅಲ್ಲದೆ 2005ರ ಮೈಸೂರು ದಸರಾ ಮಹೋತ್ಸವ…‌
ಇನ್ನೂ ಮುಂತಾದ ವೇದಿಕೆಗಳಲ್ಲಿ ನೃತ್ಯ ಪ್ರದರ್ಶನವನ್ನು ಕಳೆದ ಎರಡು ದೇಶಗಳಿಂದಲೂ ಮಾಡುತ್ತಾ ಬಂದಿದೆ ಎಂದು ಪ್ರಕಟಣೆಯಲ್ಲಿ ಮಹೇಶ್ ಬಾಬು ಸುರ್ವೆ 9845338160
ತಿಳಿಸಿದ್ದಾರೆ

&&&&&&&&&&&&&&&&&&&&&&&&&&&

ಭಾಗ್ಯಲಕ್ಷ್ಮೀ ಯೋಜನೆಗೆ ಮಾಹಿತಿ ಒದಗಿಸಿ

ಬೆಂಗಳೂರು ಗ್ರಾಮಾಂತರ ಜಿಲ್ಲೆ, ಅಕ್ಟೋಬರ್ : ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ 2006-07ನೇ ಸಾಲಿನಲ್ಲಿ ಜಿಲ್ಲೆಯಲ್ಲಿ ಭಾಗ್ಯಲಕ್ಷ್ಮೀ ಯೋಜನೆಗೆ ನೋಂದಣಿಯಾಗಿರುವ ಫಲಾನುಭವಿಯ ಪರಿಪಕ್ವ ಮೊತ್ತವನ್ನು ಪಡೆದು ತಂತ್ರಾಂಶದಲ್ಲಿ ಅಳವಡಿಸಲು ಅಕ್ಟೋಬರ್ 31 ಕೊನೆಯ ದಿನವಾಗಿದೆ.

ಈ ಯೋಜನೆಯಡಿ 2006-07 ರಲ್ಲಿ ನೋಂದಣಿಯಾಗಿರುವ ಫಲಾನುಭವಿಗಳಿಗೆ 18 ವರ್ಷ ಪೂರ್ಣಗೊಂಡಿರುತ್ತದೆ. ಈಗಾಗಲೇ 2006-07ನೇ ಸಾಲಿನ ಭಾಗ್ಯಲಕ್ಷ್ಮೀ ಯೋಜನೆಗೆ ನೋಂದಣಿಯಾಗಿದ್ದ ಅನರ್ಹರನ್ನು ಹೊರತುಪಡಿಸಿ ಅರ್ಹ ಫಲಾನುಭವಿಗಳಿಗೆ ಮಾತ್ರ ಪರಿಪಕ್ವ ಮೊತ್ತವನ್ನು ಪಡೆಯಲು ತಂತ್ರಾಂಶದಲ್ಲಿ ಮಾಹಿತಿಯನ್ನು ಅಳವಡಿಸಲಾಗುತ್ತಿದ್ದು, ಅರ್ಹ ಫಲಾನುಭವಿಗಳು ಸಮರ್ಪಕವಾದ ಮಾಹಿತಿಯನ್ನು ಒದಗಿಸಬೇಕು.

ಅರ್ಹ ಫಲಾನುಭವಿಗಳು ದೇವನಹಳ್ಳಿ- ಶಿಶು ಅಭಿವೃದ್ಧಿ ಯೋಜನಾ ಕಛೇರಿ.2 ನೇ ಮಹಡಿ, ಅಕ್ಷಯ ಭವನ, ಪಿ.ಎಲ್.ಡಿ ಬ್ಯಾಂಕ್ ಕಟ್ಟಡ, ಬಿ.ಬಿ ರಸ್ತೆ, ದೂ.ಸಂ 080-27682268, ದೊಡ್ಡಬಳ್ಳಾಪುರ – ಶಿಶು ಅಭಿವೃದ್ಧಿ ಯೋಜನಾ ಕಛೇರಿ, ಎ.ಪಿ.ಎಂ.ಸಿ ಒಳಾವರಣ, ಟಿ.ಬಿ ಸರ್ಕಲ್ ಹತ್ತಿರ, ತುಮಕೂರು ಮುಖ್ಯ ರಸ್ತೆ, ದೂ.080-27625228, ಹೊಸಕೋಟೆ- ಶಿಶು ಅಭಿವೃದ್ಧಿ ಯೋಜನಾ ಕಛೇರಿ, ಟಿ.ಎ.ಪಿ.ಸಿ.ಎಂ.ಎಸ್ ಆವರಣ ಹೊಸಕೋಟೆ, ದೂ.080-27931493, ನೆಲಮಂಗಲ- ಶಿಶು ಅಭಿವೃದ್ಧಿ ಯೋಜನಾ ಕಛೇರಿ, ಎನ್ ಹೆಚ್ 4. ಸೊಂಡೆಗೊಪ್ಪ ಬೈಪಾಸ್, ಪರ್ವತಪ್ಪ ಲೇಔಟ್‌ ದೂ.ಸಂ 080-27722177 ಇಲ್ಲಿಗೆ ಸಂಪರ್ಕಿಸಬಹುದು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.