ಜೂಜು ಅಡ್ಡೆ ಮೇಲೆ ಪೊಲೀಸರ ಮಿಂಚಿನ ದಾಳಿ : 6 ಮಂದಿ ಅಂದರ್

ವಿಜಯಪುರ: ಮೇ.19

ಜೂಜು ಆಡ್ಡೆ ಮೇಲೆ ವಿಜಯಪುರ ಪೋಲಿಸರ ಮಿಂಚಿನ ಕಾರ್ಯಚರಣೆ ನಡೆಸಿ 6 ಮಂದಿಯನ್ನು ಬಂಧಿಸಿ ಅವರಿಂದ 35,600 ರೂ ನಗದು ಮತ್ತು ಎರಡು ಬೈಕ್ ವಶಪಡಿಸಿಕೊಂಡಿದ್ದಾರೆ.

ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ತಾಲೂಕಿನ ವಿಜಯಪುರ  ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಬರುವ ವಿಜಯಪುರ ಟೌನ್  ಯಲುವಹಳ್ಳಿ ರಸ್ತೆಯ ಶ್ರೀ ಮುನೇಶ್ವರಸ್ವಾಮಿ ದೇವಾಲಯದ ಬಳಿ ವಿಜಯಪುರ ಪಟ್ಟಣದ ಇಂದಿರಾ ನಗರದ ನಿವಾಸಿಗಳು ಜೂಜು ಆಡುತ್ತಿದ್ದು, ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಪೊಲೀಸರು 6 ಮಂದಿಯನ್ನು ಬಂದಿಸುವಲ್ಲಿ ಯಶ್ವಸಿಯಾಗಿದ್ದಾರೆ.

ಇದೇ ಸಂದರ್ಭದಲ್ಲಿ ದೊಡ್ಡಬಳ್ಳಾಪುರ ಡಿ,ವೈ,ಎಸ್,ಪಿ ನಾಗರಾಜು ಮಾರ್ಗದರ್ಶನದಲ್ಲಿ ವಿಜಯಪುರ ಪೊಲಿಸ್ ಠಾಣೆಯ ಆರಕ್ಷಕ ನೀರಿಕ್ಷಕರಾದ ಎಂ.ಎಸ್. ರವಿ ಮತ್ತು ಪಿ ಎಸ್ಐ. ಆಣ್ಣಯ್ಯ, ನೇತೃತ್ವದಲ್ಲಿ ದಾಳಿ ನಡಿಸಿದ್ದು ,ಜೂಜು ಕೊರರ ಯಡಮೂರಿ ಕಟ್ಟುವಲ್ಲಿ ಯಶ್ವಸಿಯಾಗಿದ್ದು, ಇದೇ ಸಂದರ್ಬದಲ್ಲಿ ಆರಕ್ಷಕ ನೀರಿಕ್ಷಕ ಎಂ,ಎಸ್, ರವಿ ಮಾತನಾಡಿ ವಿಜಯಪುರ ಪೋಲಿಸ್ ಠಾಣೆ ವ್ಯಾಪ್ತಿಯಲ್ಲಿ ಯಾವುದೇ ತರಹದ ಕಾನೂನು ಬಾಹಿರ ಚಟುವಟಿಕೆಗಳಿಗೆ ಆವಕಾಶ ಇಲ್ಲ ಯಾವುದೇ ಕಾನೂನು ಬಾಹಿರ ಚಟುವಟಿಕೆ ಕಂಡು ಬಂದಲ್ಲಿ ಆವರ ವಿರುದ್ದ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.
ದಾಳಿ ವೇಳೆ ಆರಕ್ಷಕರಾದ ಆಶ್ವತ ರೆಡ್ಡಿ, ಮಲ್ಲಪ್ಪ, ಶಬೀರ್, ದೀಪಾ, ಶರಣ ಬಸಪ್ಪ, ಮಂಜುನಾಥ ಇದ್ದರು.