ಬಡತನ ಶಾಶ್ವತವಲ್ಲ ನಮ್ಮಲ್ಲಿ ಶಿಸ್ತು, ಶ್ರಮ, ಪ್ರಾಮಾಣಿಕತೆ ಮುಖ್ಯ : ಇನ್ಫೋಸಿಸ್ ಸಂಸ್ಥೆಯ ಸಂಸ್ಥಾಪಕ ಎನ್.ಆರ್.ನಾರಾಯಣಮೂರ್ತಿ.

ವಿಜಯ ದರ್ಪಣ ನ್ಯೂಸ್….

ಬಡತನ ಶಾಶ್ವತವಲ್ಲ ನಮ್ಮಲ್ಲಿ ಶಿಸ್ತು, ಶ್ರಮ, ಪ್ರಾಮಾಣಿಕತೆ ಮುಖ್ಯ : ಇನ್ಫೋಸಿಸ್ ಸಂಸ್ಥೆಯ ಸಂಸ್ಥಾಪಕ ಎನ್.ಆರ್.ನಾರಾಯಣಮೂರ್ತಿ.

ಶಿಡ್ಲಘಟ್ಟ : ಬಡತನ ಶಾಶ್ವತವಲ್ಲ ನಮ್ಮಲ್ಲಿ ಶಿಸ್ತು, ಶ್ರಮ, ಪ್ರಾಮಾಣಿಕತೆ ಮುಂತಾದ ಮೌಲ್ಯಗಳನ್ನು ಅಮ್ಮ ಕಲಿಸುತ್ತಿದ್ದರು ನಾವು ಯಾರೂ ಹಿಂದುಳಿಯಲಿಲ್ಲ, ಎಲ್ಲರೂ ಎತ್ತರದ ಸ್ತರಕ್ಕೆ ಏರಿದೆವು ಎಂದು ಇನ್ಫೋಸಿಸ್ ಸಂಸ್ಥೆಯ ಸಂಸ್ಥಾಪಕ ಎನ್.ಆರ್.ನಾರಾಯಣಮೂರ್ತಿ ತಿಳಿಸಿದರು.

ತಾಲ್ಲೂಕಿನ ನಡಿಪಿನಾಯಕನಹಳ್ಳಿಯ ನವೋದಯ ಶಾಲೆ, ಕಪಿಲಮ್ಮ ಕಾಲೇಜಿನ ವಾರ್ಷಿಕೋತ್ಸವ ಸಮಾರಂಭ ‘ನವಸೌರಭ’ ಕಾರ್ಯಕ್ರಮದಲ್ಲಿ ವಿಶೇಷ ಅತಿಥಿಯಾಗಿ ಆಗಮಿಸಿದ್ದ ಅವರು ಮಾತನಾಡಿದರು.

ಸೋಮಾರಿತನ, ಕೆಟ್ಟತನಗಳನ್ನು ಮನಸ್ಸಿನಿಂದ ಕಿತ್ತು ಬಿಸಾಡಿ, ಶ್ರಮ ಪಡಿ ಎತ್ತರಕ್ಕೇರುತ್ತೀರಿ ,ಮಕ್ಕಳು ಚೆನ್ನಾಗಿ ಓದಿ, ಶಿಸ್ತನ್ನು ಕಲಿತು, ತಮ್ಮ ಮೆಚ್ಚಿನ ಕ್ಷೇತ್ರಗಳಲ್ಲಿ ಚೆನ್ನಾಗಿ ದುಡಿಮೆ ಮಾಡಿದರೆ ನಿಮ್ಮ ಊರು ,ತಾಲ್ಲೂಕು, ರಾಜ್ಯ ಹಾಗು ದೇಶ ಉದ್ದಾರವಾಗುತ್ತದೆ ಎಂದು ಹೇಳಿದರು.

ನಮ್ಮ ಮಕ್ಕಳಿಗೆ ಎತ್ತರಕ್ಕೆ ಬೆಳೆಯಬೇಕೆಂಬ ಆಸೆ, ಶಿಸ್ತು, ಕಷ್ಟಪಟ್ಟು ಕೆಲಸ ಮಾಡುವುದು, ದೇಶದ ಬಗ್ಗೆ ಗೌರವ ಭಾವನೆ, ಪ್ರಾಮಾಣಿಕತೆ ಮುಂತಾದ ಮೌಲ್ಯಗಳನ್ನು ಮನೆಯಲ್ಲಿನ ಹಿರಿಯರು ಮತ್ತು ಶಾಲಾ ಶಿಕ್ಷಕರು ಕಲಿಸಬೇಕು ಎಂದರು.
ಕೇವಲ ಮಾತುಗಳು, ಘೋಷಣೆಗಳಿಂದ ಯಾವ ದೇಶವೂ ಮುಂದೆ ಬಂದಿಲ್ಲ ಇಲ್ಲಿರುವ ವಿದ್ಯಾರ್ಥಿಗಳು ಚೆನ್ನಾಗಿ ಓದಿ, ಉತ್ತಮ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಬೆಳೆದರೆ, ನಡಿಪಿನಾಯಕನಹಳ್ಳಿಯೂ ಬೆಳೆಯುತ್ತದೆ, ಆ ಮೂಲಕ ರಾಜ್ಯ ಮತ್ತು ದೇಶವೂ ಮುಂದೆ ಬರುತ್ತದೆ ಎಂದರು.

ನಮ್ಮ ತಂದೆಗೆ ಕೇವಲ 180 ರೂ ಸಂಬಳ ಬರುತ್ತಿತ್ತು ,ಎಂಟು ಜನ ಮಕ್ಕಳು ಇದ್ದ ದೊಡ್ಡ ಕುಟುಂಬವನ್ನು ಅವರು ಪೋಷಿಸಬೇಕಿತ್ತು ಮನೆಯಲ್ಲಿ ಬಹಳ ಬಡತನವಿತ್ತು ಎಂದರು.
1990 ರಲ್ಲಿ ಭಾರತ ಮತ್ತು ಚೀನಾ ದೇಶಗಳು ಆರ್ಥಿಕವಾಗಿ ಒಂದೇ ಸಮನಾಗಿದ್ದವು ಆದರೆ ಈಗ ಚೀನಾ ಭಾರತಕ್ಕಿಂತ ಆರು ಪಟ್ಟು ಬೆಳೆದಿದೆ. ಚೀನಾದಲ್ಲಿ ಎಲ್ಲಿಗೆ ಹೋಗಿ ಯಾರನ್ನೇ ಕೇಳಿ “996” ಎಂಬ ಮಂತ್ರವನ್ನು ಹೇಳುತ್ತಾರೆ ,ಅಂದರೆ ಬೆಳಗ್ಗೆ 9 ರಿಂದ ರಾತ್ರಿ 9 ರವರೆಗೆ ವಾರದ 6 ದಿನಗಳು ತಮಗಾಗಿಯಷ್ಟೇ ಅಲ್ಲ ದೇಶದ ಬೆಳವಣಿಗೆಗಾಗಿ ಅವರು ದುಡಿಮೆ ಮಾಡುತ್ತಾರೆ. ಈಗಿನ ವಿದ್ಯಾರ್ಥಿಗಳು ನಮ್ಮ ದೇಶವನ್ನು ಉನ್ನತಮಟ್ಟಕ್ಕೆ ಕೊಂಡೊಯ್ಯುತ್ತೇವೆ, ಕಷ್ಟಪಟ್ಟು ಕೆಲಸಮಾಡುತ್ತೇವೆ ಎಂದು ಸಂಕಲ್ಪ ತೊಟ್ಟರೆ ಚೀನಾ ದೇಶವನ್ನು ಮುಂದಿನ ದಿನಗಳಲ್ಲಿ ಮೀರಿಸಬಹುದು ಎಂದು ಹೇಳಿದರು.

ಚೀನಾದಲ್ಲಿ ಎಲ್ಲಿಗೆ ಹೋಗಿ ಯಾರನ್ನೇ ಕೇಳಿ “996” ಎಂಬ ಮಂತ್ರವನ್ನು ಹೇಳುತ್ತಾರೆ ,ಅಂದರೆ ಬೆಳಗ್ಗೆ 9 ರಿಂದ ರಾತ್ರಿ 9 ರವರೆಗೆ ವಾರದ 6 ದಿನಗಳು ತಮಗಾಗಿಯಷ್ಟೇ ಅಲ್ಲ ದೇಶದ ಬೆಳವಣಿಗೆಗಾಗಿ ಅವರು ದುಡಿಮೆ ಮಾಡುತ್ತಾರೆ ಎಂದರು.

ಈ ಸಂದರ್ಭದಲ್ಲಿ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಆದಿಶೇಷ್ ರಾವ್, ಶ್ರೀ ಲೋಕಮಾತಾ ಎಜುಕೇಷನ್ ಟ್ರಸ್ಟ್ ಸಂಸ್ಥಾಪಕ ಎನ್.ಆರ್.ಕೃಷ್ಣಮೂರ್ತಿ, ನವೋದಯ ಶಾಲೆ ಮುಖ್ಯಶಿಕ್ಷಕ ಎನ್.ಕೆ.ಸತ್ಯನಾರಾಯಣ, ಕಪಿಲಮ್ಮ ಸಂಯುಕ್ತ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲ ಎನ್.ಕೆ.ಸುದರ್ಶನ್, ಜಮಖಂಡಿ ಸೇವಾ ಪ್ರತಿಷ್ಠಾನ ಸಂಸ್ಥಾಪಕ ಹನುಮಂತ್ ರಾಯ್ ಬಿರಾದರ್, ಸರ್ಕಾರಿ ಪದವಿಪೂರ್ವ ಕಾಲೇಜು ಪ್ರಾಂಶುಪಾಲ ವೆಂಕಟಶಿವಾರೆಡ್ಡಿ, ಶಿಕ್ಷಣ ಸಂಯೋಜಕ ಯು.ವೈ. ಮಂಜುನಾಥ್, ಅಂಕಿರೆಡ್ಡಿ ಪ್ರಕಾಶ್, ಸಿ.ಆರ್.ಪಿ. ಎನ್.ಸರಿತಾ ಮುಂತಾದವರು ಹಾಜರಿದ್ದರು.