ಮುಟ್ಟು ಗುಟ್ಟಿನ ವಿಷಯವೇನಲ್ಲ ಇದೊಂದು ಜೈವಿಕ ಕ್ರಿಯೆ.

ವಿಜಯ ದರ್ಣಣ ನ್ಯೂಸ್
ಮುಟ್ಟು ಗುಟ್ಟಿನ ವಿಷಯವಲ್ಲ ಅದೊಂದು ಜೈವಿಕ ಕ್ರಿಯೆ
ಮುಟ್ಟಿಗೂ ಒಂದು ಘನತೆ ಇದೆ. ಮೂಡನಂಬಿಕೆ ಮತ್ತು ಕೀಳರಿಮೆಗಳನ್ನು ಬಿಟ್ಟು ಮುಟ್ಟಿನ ಬಗೆಗೆ ಅಗತ್ಯವಿರುವ ಸ್ವಚ್ಛತೆಯ ಕಡೆ  ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ ಗಮನ ಹರಿಸಬೇಕಿದೆ.  ನಿಸರ್ಗದತ್ತವಾದ ಮುಟ್ಟೆಂಬ ಜೈವಿಕ ಕ್ರಿಯೆಗೆ ಅಂಟು ಮಂಟಿನ ಸೋಂಕಿಲ್ಲ ಎಂದು ಸಾಮಾಜಿಕ ಕಾರ್ಯಕರ್ತ ಪದ್ಮರೇಖಾ ನುಡಿದರು.
ಅವರು ಕೃಷ್ಣಾಪುರದೊಡ್ಡಿಯ ಕೆಎಸ್ ಮುದ್ದಪ್ಪ ಸ್ಮಾರಕ ಟ್ರಸ್ಟ್,  ESAF ಫೌಂಡೇಶನ್,ಹ್ಯುಮಾನಿಟಿ ಫಸ್ಟ್ ಫೌಂಡೇಶನ್ ಹಾಗೂ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು ಮಹಿಳಾ ಸಬಲೀಕರಣ ವಿಭಾಗ ಸಂಯುಕ್ತವಾಗಿ ಹಮ್ಮಿಕೊಂಡಿದ್ದ ಮುಟ್ಟಿನ ಆರೋಗ್ಯ ಕುರಿತ ಜಾಗೃತಿ  ಕುರಿತು ಉಪನ್ಯಾಸ ನೀಡಿದರು.
ದೈಹಿಕವಾಗಿ ನಿರಂತರ ನಡೆಯುವ ಮುಟ್ಟಿನ ಸರಿಯಾದ ನಿರ್ವಹಣೆ ನಮ್ಮೆಲ್ಲರ ಜವಾಬ್ದಾರಿಯಾಗಬೇಕು ಮತ್ತು ಎಲ್ಲವರ್ಗದ ಮಹಿಳೆಯರಿಗೂ ತಿಳಿಸಬೇಕಾಗಿದೆ ಎಂದು ಹೇಳಿದರು.
ನಗರಸಭಾ ಮಾಜಿ ಅಧ್ಯಕ್ಷೆ ಬಿ ಸಿ ಪಾರ್ವತಮ್ಮ ಮಾತನಾಡಿ ಮುಟ್ಟನ್ನು ಕುರಿತು ಅದರ ನೈರ್ಮಲ್ಯವನ್ನು ಕುರಿತು ಇಡೀ ಮಹಿಳಾ ಲೋಕಕ್ಕೆ ತಿಳಿಯಬೇಕಾದ ಅವಶ್ಯಕತೆ ಇದೆ ಮುಟ್ಟಿನ ವಿಚಾರದಲ್ಲಿ ನಿರ್ಲಕ್ಷ ಮಾಡಿ ಸಾವಿಗೀಡಾದ ಅನೇಕ ದಾಖಲೆಗಳು ನಮ್ಮಲ್ಲಿವೆ. ಆಧುನಿಕ ಯುಗದಲ್ಲಿ ಮುಟ್ಟನ್ನು ಗುಟ್ಟು ಮಾಡುವ ಅವಶ್ಯಕತೆ ಇಲ್ಲ ಎಂದರು. 
ನಿಸರ್ಗದತ್ತವಾಗಿ ಉಂಟಾಗುವ ಮುಟ್ಟು ದೇಗುಲಗಳಾಚೆ ಇರಿಸಲು ಹೇಳಲ್ಲ. ಸೂಕ್ತವಾಗಿ ಅದರ ನಿರ್ವಹಣೆ ಮಾಡುವುದರಿಂದ ಎಲ್ಲ ಕಿರಿಕಿರಿಗಳಿಂದ ದೂರವಿರಬೇಕು. ಮುಟ್ಟು ಸೂತಕವಲ್ಲ ಅದೊಂದು ಸಾಮಾನ್ಯ ಪ್ರಕ್ರಿಯೆ. ಮುಟ್ಟನ್ನು ಗುಟ್ಟು ಮಾಡುವ ಅವಶ್ಯಕತೆಯಿಲ್ಲ ಎಂದು ಜಾನಪದ ವಿದ್ವಾಂಸ ಡಾ. ಎಂ ಬೈರೇಗೌಡ ನುಡಿದರು.
ಹ್ಯುಮಾನಿಟಿ ಫಸ್ಟ್ ಫೌಂಡೇಶನ್ ಅಧ್ಯಕ್ಷ ಉದಯ್ ಕುಮಾರ್ ಮಹಿಳಾ ಸಬಲೀಕರಣ ವಿಭಾಗದ ಸಂಚಾಲಕಿ ವೇದಾವತಿ ಕಾಲೇಜು ಕನ್ನಡ ವಿಭಾಗದ ಉಪನ್ಯಾಸಕಿ ರೂಪ ESAF ಫೌಂಡೇಶನ್ ಸತೀಶ್ ಉಪಸ್ಥಿತರಿದ್ದರು.  ಕಾಲೇಜು ಪ್ರಾಂಶುಪಾಲ ಮುದ್ದಿರಯ್ಯ ಅಧ್ಯಕ್ಷತೆ ವಹಿಸಿದರು ಕುಮಾರಿ ಭವ್ಯ ಕಾರ್ಯಕ್ರಮ ನಿರ್ವಹಿಸಿದರು..