--Ads--

ಕೆ ಆರ್ ನಗರ ತಾಲೂಕು ಪತ್ರಕರ್ತರ ಸಂಘದ ನೂತನ ಪದಾಧಿಕಾರಿಗಳ ಪದಗ್ರಹಣ

On: July 2, 2026 2:41 PM
Follow ಮಾಡಿ
--Ads--

Whatsapp Channel

Join Now

Telegram Group

Join Now

ವಿಜಯ ದರ್ಪಣ ನ್ಯೂಸ್…

ಕೆ ಆರ್ ನಗರ ತಾಲೂಕು ಪತ್ರಕರ್ತರ ಸಂಘದ
ನೂತನ ಪದಾಧಿಕಾರಿಗಳ ಪದಗ್ರಹಣ

ತಾಂಡವಪುರ ಜುಲೈ 2 ಮೈಸೂರು ಜಿಲ್ಲೆ ಕೆ.ಆರ್.ನಗರ ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷರಾಗಿ ಪಂಡಿತ್‌ ನಾಟಿಕರ್‌ ಮತ್ತು ಪ್ರಧಾನ ಕಾರ್ಯದರ್ಶಿಯಾಗಿ ನಾಗೇಗೌಡ ನೇತೃತ್ವದ ತಂಡ ಅವಿರೋಧವಾಗಿ ಆಯ್ಕೆಯಾಗಿದ್ದು ನೂತನ ಆಡಳಿತ ಮಂಡಳಿ ಅಸ್ಥಿತ್ವಕ್ಕೆ ಬಂದಿದೆ.

ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ಭವನದಲ್ಲಿ ನಡೆದ ಸಮಾರಂಭದಲ್ಲಿ ನೂತನವಾಗಿ ಆಯ್ಕೆಯಾದ ಪದಾಧಿಕಾರಿಗಳು ಮತ್ತು ಕಾರ್ಯಕಾರಿಣಿ ಸದಸ್ಯರುಗಳಿಗೆ ಚುನಾವಣಾಧಿಕಾರಿ ಎಂ.ಎಸ್.ಕಾಶಿನಾಥ್‌ ಪ್ರಮಾಣ ಪತ್ರ ವಿತರಿಸಿದರು.

ಸಂಘದ ಗ್ರಾಮಾಂತರ ಉಪಾಧ್ಯಕ್ಷರಾಗಿ ಮಧುಸೂದನ್‌ ಸಿ.ಜೆ. ಗ್ರಾಮಾಂತರ ಕಾರ್ಯದರ್ಶಿಯಾಗಿ ಸಿ.ಸಿ.ಮಹದೇವ್‌ ಹಾಗೂ ಖಜಾಂಚಿಯಾಗಿ ಎಸ್.ಯೋಗಾನಂದ್‌ ಪ್ರಮಾಣ ಪತ್ರ ಪಡೆದರು.

ಕಾರ್ಯಕಾರಿಣಿ ಸದಸ್ಯರಾಗಿ ಜಿ.ಕೆ.ನಾಗಣ್ಣ, ಕೆ.ಆರ್.ಶ್ರೀನಿವಾಸ್‌, ಎ. ಚೈತನ್ಯ, ರಾಮಕೃಷ್ಣೇಗೌಡ, ಮಹಮ್ಮದ್‌ ಸಬೀರ್‌ ಖಾನ್‌, ಎಂ.ಎಸ್.ರವಿಕುಮಾರ್‌ ಹಾಗೂ ಎಚ್.ಎಲ್.‌ ಆನಂದ್‌ ಅವರಿಗೂ ಪ್ರಮಾಣ ಪತ್ರ ವಿತರಿಸಲಾಯಿತು.

ಪದಗ್ರಹಣ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಕೆ.ದೀಪಕ್‌ ರವರು, ಆಸ್ತಿ ಮಾಡುವ ಕನಸ್ಸಿಟ್ಟುಕೊಂಡು ಸಂಘಕ್ಕೆ ಬರಬೇಡಿ, ಸಂಘವನ್ನೇ ನಮ್ಮ ಆಸ್ತಿ ಎಂದು ಭಾವಿಸಿ ಅದರ ರಕ್ಷಣೆ ಮತ್ತು ಪತ್ರಕರ್ತರ ಕ್ಷೇಮಾಭಿವೃದ್ಧಿಗೆ ನಿಸ್ವಾರ್ಥವಾಗಿ ಸೇವೆ ಸಲ್ಲಿಸುವ ಮನಸ್ಸಿದ್ದರೆ ಮಾತ್ರ ಸಂಘಕ್ಕೆ ಬರಬೇಕು ಎಂದು ತಿಳಿಸಿದರು.

ರಾಜ್ಯದಲ್ಲಿಯೇ ಮಾದರಿ ಸಂಘ ಎನಿಸಿಕೊಂಡಿರುವ ಪತ್ರಕರ್ತರ ಸಂಘ ಕೆಳೆದ 90 ವರ್ಷಗಳಿಂದ ಹಿರಿಯರ ಪರಿಶ್ರಮ ಮತ್ತು ಮಾರ್ಗದರ್ಶನಲ್ಲಿ ಮುನ್ನಡೆದುಕೊಂಡು ಬಂದಿದೆ. ಪತ್ರಕರ್ತರು ಸಂಘದ ಚೌಕಟ್ಟಿನಲ್ಲಿ ಒಗ್ಗಟ್ಟಿನಲ್ಲಿದ್ದರೆ ನಮ್ಮ ಮೇಲೆ ನಡೆಯಬಹುದಾದ ದೌರ್ಜನ್ಯ ಮತ್ತು ಅನ್ಯಾಯದ ವಿರುದ್ಧ ಹೋರಾಟ ನಡೆಸಬಹುದು. ಮತ್ತು ನಮ್ಮ ಹಕ್ಕುಗಳನ್ನು ಪಡೆದುಕೊಳ್ಳಬಹುದು ಎಂದು ಹೇಳಿದರು.

ಪ್ರಧಾನ ಕಾರ್ಯದರ್ಶಿ ಧರ್ಮಾಪುರ ನಾರಾಯಣ್‌ ಮಾತನಾಡಿ, ಗ್ರಾಮೀಣ ಪ್ರದೇಶದ ಪತ್ರಕರ್ತರ ಜೀವನ ಮಟ್ಟ ಕಷ್ಟಕರವಾಗಿದ್ದು, ಈ ಸ್ಥಿತಿಯಲ್ಲೂ ಪತ್ರಕರ್ತರಾಗಿ ಕೆಲಸ ಮಾಡುತ್ತಿದ್ದಾರೆ. ಪತ್ರಿಕೋದ್ಯಮದ ವೃತ್ತಿಯ ಜೊತೆಗೆ ಆರ್ಥಿಕವಾಗಿ ಸದೃಢರಾಗಬೇಕು. ಗ್ರಾಮೀಣ ಭಾಗದ ಪತ್ರಕರ್ತರ ಸಮಸ್ಯೆಗಳಿಗೆ ಜಿಲ್ಲಾ ಸಂಘ ಸದಾ ಸ್ಪಂದಿಸಲಿದೆ ಎಂದು ಭರವಸೆ ನೀಡಿದರು.

ಇದೇ ಸಂದರ್ಭದಲ್ಲಿ ನಿಕಟಪೂರ್ವ ಅಧ್ಯಕ್ಷ ವಿನಯ್‌ ಮತ್ತು ಪ್ರಧಾನ ಕಾರ್ಯದರ್ಶಿ ಭೇರ್ಯ ಮಹೇಶ್‌ ಮಾತನಾಡಿದರು. ಇದೇ ವೇಳೆ ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ಉಪಾಧ್ಯಕ್ಷ ರವಿ ಪಾಂಡವಪುರ, ಗ್ರಾಮೀಣ ಕಾರ್ಯದರ್ಶಿ ದಾರಾ ಮಹೇಶ್‌, ಖಜಾಂಚಿ ಎನ್.‌ ಸುರೇಶ್‌, ಕಾರ್ಯಕಾರಿಣಿ ಸದಸ್ಯರಾದ ಸೋಮಶೇಖರ್‌ ಚಿಕಮರಳ್ಳಿ, ಎಸ್.ಕವಿತಾ, ಹನಗೋಡು ನಟರಾಜ್‌ ಮೊದಲಾದವರು ಹಾಜರಿದ್ದರು.

WhatsApp

Join Now

Telegram

Join Now

Instagram

Join Now