ಮಡಿಕೇರಿ ನಗರದಲ್ಲಿ ಅನಧಿಕೃತ ಮಳಿಗಳ ನಿರ್ಮಾಣ : ಕಣ್ಮುಚ್ಚಿ ಕುಳಿತ ನಗರಸಭೆ.

ವಿಜಯ ದರ್ಪಣ ನ್ಯೂಸ್

ಮಡಿಕೇರಿ , ಆಗಸ್ಟ್ 20 

ಮಡಿಕೇರಿ ನಗರದ ಚಿಕ್ಕಪೇಟೆಯ ಜನರಲ್ ತಿಮ್ಮಯ್ಯ ವೃತ್ತದ ಬಳಿಯ ಹಳೆಯ ಮರ್ಕರ ಕ್ಲಿನಿಕ್ ಜಾಗದಲ್ಲಿ ಈಗ ನೂತನವಾಗಿ ತಾತ್ಕಾಲಿಕ ಮಳಿಗೆಗಳನ್ನು ನಿರ್ಮಾಣ ಮಾಡಲಾಗುತ್ತಿದ್ದು ಈ ಮಳಿಗಳಿಗೆ ಕೇವಲ ಒಂದು ವರ್ಷಕ್ಕೆ ಮಾತ್ರ ಅನುಮತಿ ನೀಡಲಾಗಿದೆ. ಹಾಗಿದ್ದರೂ ಇಲ್ಲಿ ನಿರ್ಮಾಣ ಆಗುತ್ತಿರುವ ವ್ಯಾಪಾರ ಮಳಿಗೆಗಳ

ನಿರ್ಮಾಣದ ತಂತ್ರಜ್ಞಾನ ನೋಡಿದರೆ ಕಾಯಂ ಮಾಡಿದ ರೀತಿ ಕಾಣುತ್ತಿದೆ.

ಈ ಮಳಿಗೆಗಳ ನಿರ್ಮಾಣದ ಸಮಯದಲ್ಲಿ ನಗರ ಸಭೆ ವತಿಯಿಂದ ಕೇವಲ 6 ಮಳಿಗೆಗಳಿಗೆ ಅನುಮತಿ ಪಡೆದುಕೊಂಡು ಮಡಿಕೇರಿ ನಗರಸಭೆ ಹಾಗೂ ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ನೇರವಾಗಿ ವಂಚಿಸಿ ಇವರುಗಳು 8 ಮಳಿಗೆಗಳನ್ನು ನಿರ್ಮಾಣ ಮಾಡಿರುವುದು ಕಂಡು ಬರುತ್ತಿದೆ.

ನಗರ ಸಭಾ ಕಚೇರಿಯಿಂದ 6 ಮಳಿಗೆಗಳ ಅನುಮತಿ ಪಡೆಯುವ ಸಂದರ್ಭದಲ್ಲಿ ಅಧಿಕಾರಿಗಳು ಬಂದು ಹೋಗಿದ್ದು ಬಿಟ್ಟರೆ ಮತ್ತೆ ನಗರಸಭೆಯ ಯಾವುದೇ ಅಧಿಕಾರಿಗಳು ಹಾಗೂ ನಗರಸಭಾ ಸದಸ್ಯರು ಇಲ್ಲಿ ಸ್ಥಳ ಪರಿಶೀಲನೆ ಮಾಡಲು ಬರುವುದಿಲ್ಲ ಇದಕ್ಕೆ ಕಾರಣ ಕೆಲವರ ಜೇಬು ಗಟ್ಟಿಮಾಡಿ ಕೊಂಡಿರಬಹುದು. ಮಡಿಕೇರಿ ನಗರದ ಬೀದಿ ಬದಿಯಲ್ಲಿ ವ್ಯಾಪಾರ ಮಾಡುವವರನ್ನು ತೆರವು ಮಾಡಿಸುವ ನಗರಸಭೆಗೆ ಇವರುಗಳ ಮೇಲೆ ಕ್ರಮ ತೆಗೆದುಕೊಳ್ಳುವ ತಾಕತ್ ಇಲ್ಲವೇ ಮಡಿಕೇರಿ ನಗರಸಭೆ ಉಳ್ಳವರ ಪರ ಕೆಲಸ ಮಾಡುತ್ತಿರುವುದು ಎದ್ದು ಕಾಣುತ್ತಿದೆ ಬೀದಿ ಬದಿ ವ್ಯಾಪಾರಿಗಳಿಗೆ ಒಂದು ನ್ಯಾಯ ಇವರುಗಳಿಗೆ ಒಂದು ನ್ಯಾಯ ಈ ಮಳಿಗೆಗಳ ಮುಂಭಾಗದಲ್ಲಿ ಹಾಗೂ ಎಡ ಭಾಗದಲ್ಲಿ ರೋಡ್ ಮಾರ್ಜಿನ್ ಬಿಡದೆ ಮಳಿಗೆಗಳನ್ನು ನಿರ್ಮಾಣ ಮಾಡಿರುವುದು ಕಂಡು ಬರುತ್ತಿದೆ .

ಇದರ ಬಗ್ಗೆ ಮಡಿಕೇರಿ ನಗರಸಭೆಗೆ ಶಿವರಾಮೇಗೌಡರ ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ದಿನಾಂಕ 3.8.2023 ರಂದು ದೂರು ನೀಡಿದ್ದರು ಇದುವರೆಗೆ ಯಾವುದೇ ಕ್ರಮ ತೆಗೆದುಕೊಳ್ಳದೆ ಇರುವುದನ್ನು ಗಮನಿಸಿದರೆ ಮಡಿಕೇರಿ ನಗರಸಭೆಯ ಅಧಿಕಾರಿಗಳು ಹಾಗೂ ಆಡಳಿತ ಮಂಡಳಿಯ ಕೆಲವು ಸದಸ್ಯರು ಈ ಅಕ್ರಮದಲ್ಲಿ ಶಾಮಿಲ್ ಆಗಿರುವುದು ಕಂಡು ಬರುತ್ತಿದ್ದು ಇದರ ಬಗ್ಗೆ ಪೂರ್ಣ ದಾಖಲಾತಿಗಳೊಂದಿಗೆ ಶಿವರಾಮೇಗೌಡರ ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ಲೋಕಾಯುಕ್ತಕ್ಕೆ ದೂರು ಸಲ್ಲಿಸಲು ನಿರ್ಧರಿಸಲಾಗಿದೆ.